ಸುದ್ದಿಬಿಂದು ಬ್ಯೂರೋ
ಕುಮಟಾ :ಪಟ್ಟಣದ ಚಿತ್ರಗಿ ಪಾರ್ಕ್ ಸಮೀಪ ಚಿರತೆ ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸುವಂತೆ ಮೂಡಿದೆ.
ಚಿತ್ರಗಿಯಲ್ಲಿರುವ ಅರಣ್ಯ ಇಲಾಖೆಗೆ ಸೇರಿದ್ದು ಟ್ರೀ ಪಾರ್ಕ್ ಒಂದದಲ್ಲಿ ನಿನ್ನೆ ರಾತ್ರಿ ವೇಳೆ ಚಿರತೆ ಕಾಣಿಸಿಕೊಂಡಿದೆ.ಈ ಪ್ರಾರ್ಕ್ ಗೆ ನಿತ್ಯವೂ ಅನೇಕರು ಸಂಜೆ ಸಮಯಲ್ಲಿ ವಾಯುವಿಹಾರಕ್ಕೆ ಹಾಗೂ ಪುಟ್ಟ ಮಕ್ಕಳು ಆಟವಾಡಲು ಇಲ್ಲಿಗೆ ಆಗಮಿಸುತ್ತಾರೆ. ಆದರೆ ಇದೀಗ ಚಿರತೆ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಚಿರತೆ ಪ್ರತ್ಯಕ್ಷವಾಗಿರುವ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇನ್ನೂ ಸ್ಥಳಕ್ಕೆ ಆಗಮಿಸಬೇಕಾಗಿದೆ.