ಸುದ್ದಿಬಿಂದು ಬ್ಯೂರೋ
ಗೋಕರ್ಣ : ಗುಲ್ಬರ್ಗಾದಿಂದ ಉತ್ತರಕನ್ನಡ ಜಿಲ್ಲೆಯ ಗೋಕರ್ಣ ಪ್ರವಾಸಕ್ಕೆ ಬಂದಿದ್ದ ಇಬ್ಬರೂ ಪ್ರವಾಸಿಗರು ಸಮುದ್ರದಲ್ಲಿ ಈಜಲು ಹೋಗಿ ಮೃತಪಟ್ಟಿರುವ ಘಟನೆ ಗೋಕರ್ಣದ ಮಿಡ್ಲ ಬೀಚ್ ನಲ್ಲಿ ನಡೆದಿದೆ.

ಅಭಿಷೇಕ ಹಾಗೂ ಆಕಾಶ ಎಂಬುವವರೆ ಸಮುದ್ರದಲ್ಲಿ ಮುಳುಗಿ ಮೃತಪಟ್ಟವರಾಗಿದ್ದಾರೆ. ಐವರು ಸ್ನೇಹಿತರು ಸೇರಿಕೊಂಡು ಗೋಕರ್ಣ ಪ್ರವಾಸಕ್ಕೆ ಬಂದಿದ್ದು, ಈ ವೇಳೆ ಇಲ್ಲಿನ ಮಿಡ್ಲ ಬೀಚ್ ನಲ್ಲಿ ಈಜಲು ತೆರಳಿದ್ದರು. ಈ ವೇಳೆ ಸಮುದ್ರದ ಅಲೆಗೆ ಸಿಲುಕಿ ಇಬ್ಬರೂ ಕೊಚ್ಚಿಕೊಂಡು ಹೋಗಿದ್ದರು. ಇದೀಗ ಇಬ್ಬರ ಮೃತದೇಹ ಪತ್ತೆಯಾಗಿದೆ‌.

ಇನ್ನೂ ಇಬ್ಬರನ್ನ ರಕ್ಷಣೆ ಮಾಡಲಾಗಿದ್ದು, ಅವರನ್ನ 108ವಾಹನದ ಮೂಲಕ ಗೋಕರ್ಣ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ‌ನೀಡಲಾಗಿದೆ. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.