ಸುದ್ದಿಬಿಂದು ಬ್ಯೂರೋ
ಹಾಸನ : ಬೈಕ್ ಸವಾರನೋರ್ವ ತನ್ನ ಕಾರಿಗೆ ಅಪಘಾತ ಪಡಿಸಿದಕ್ಕೆ ನೆತ್ತಿಗೆ ಸಿಟ್ಟೇರಿಸಿಕೊಂಡ ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಬೈಕ್ ಸವಾರನಿಗೆ ಬಾಯಿಗೆ ಬಂದಂತೆ ಅವಾಚ್ಯವಾಗಿ ಬೈದಿರುವ ಘಟನೆ ನಡೆದಿದೆ.
ಭವನಾನಿ ರೇವಣ್ಣ ತಮ್ಮ ಐಶಾರಾಮಿ ಕಾರನಲ್ಲಿ ಪ್ರಯಾಣಿಸುತ್ತಿರುವ ವೇಳೆ ಬೈಕ್ ಸವಾರನೋರ್ವ ಆಕಸ್ಮಿಕವಾಗಿ ಅವರ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ ಇದರಿಂದ ಅವರ ಕಾರ ನಂಬರ್ ಪ್ಲೇಟ್ ಕಿತ್ತು ರಸ್ತೆ ಮಲೆ ಬಿದಿತ್ತು.ಹಾಗೂ ಕಾರು ಸಣ್ಣ ಪುಟ್ಟ ಜಖಂ ಗೊಂಡಿದೆ. ಬೈಕ್ ಸವಾರನಿಗೆ ಏನಾಗಿದೆ ಅನ್ನುವ ಬಗ್ಗೆ ಸೌಜನ್ಯಕ್ಕೂ ಕಾಳಜಿ ತೋರದೆ ನಡು ರಸ್ತೆಯಲ್ಲಿಯೇ ಬೈಕ್ ಸವಾರನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಭವಾನಿ ಮೇಡಂ ಆತನ ಬೈಕ್ ಸುಟ್ಟುಹಾಕಿ ಎಂದು ತಮ್ಮ ಸಹಚರರಿಗೆ ಹೇಳಿದ್ದಾರೆ.. ಇವರ ದರ್ಪದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.