suddibindu.in
Karwar: ಕಾರವಾರ: ಗಣೇಶ ಮೂರ್ತಿ ಮೆರವಣಿಗೆ ಹೆಸರಿನಲ್ಲಿ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕ್ರಿಮ್ಸ್) ವೈದ್ಯ ವಿದ್ಯಾರ್ಥಿಗಳು ಬುಧವಾರ ಆಸ್ಪತ್ರೆ ಆವರಣದಲ್ಲಿಯೇ ಪಟಾಕಿ ಸಿಡಿಸಿ, ರಾಸಾಯನಿಕ(chemical)ಬಣ್ಣ ಎರಚಿಕೊಂಡು, ದೊಡ್ಡದಾಗಿ ಡಿಜೆ ಹಾಕಿ ಕುಣಿದು ಕುಪ್ಪಳಿಸಿರುವುದು ಆಸ್ಪತ್ರೆ ಒಳರೋಗಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿತು. ಈ ವಿಚಾರಕ್ಕೆ ಸಂಬಂಧಿಸಿ ಇದೀಗ ಪೊಲೀಸ್ ಇಲಾಖೆಯಿಂದ ಕಾರವಾರ ಮೆಡಿಕಲ್ ಕಾಲೇಜು ಮುಖ್ಯಸ್ಥರಿಗೆ ನೋಟಿಸ್ ನೀಡಲಾಗಿದೆ.
ಆಸ್ಪತ್ರೆ ಆವರಣದಲ್ಲಿ ನೂರಾರು ವಿದ್ಯಾರ್ಥಿಗಳು( (medical student) ಒಂದೇ ಸಮನೆ ಕೇಕೆ ಹಾಕುತ್ತ ಪಟಾಕಿ, ಸೇರಿ ರಾಸಾಯನಿಕ ಹೊಗೆ ಬಿಡುವ ಪಟಾಕಿಗಳನ್ನು ಮಕ್ಕಳ ವಾರ್ಡಿನ ಎದುರೇ ಸಿಡಿಸಿದರು ಅಲ್ಲಿ ಭಾರಿ ಪ್ರಮಾಣದ ಹೊಗೆ ಎದ್ದಿತ್ತು. ಭರ್ಜರಿ ಡಿಜೆ ಸದ್ದು ಹಾಕಿಕೊಂಡು ಕುಣಿಯುತ್ತಲೇ ಆಸ್ಪತ್ರೆ ಆವರಣದಲ್ಲಿ ಸಾಗಿದರು.
ಈ ಬಗ್ಗೆ ವಿಜಯ ಕರ್ನಾಟಕ (Vijay Karnataka News paper) ದಿನ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ(social media) ಸುದ್ದಿಯಾಗಿತ್ತು, ಇದನ್ನ ಗಮನಿಸಿರುವ ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರು ಮೆಡಿಕಲ್ ಕಾಲೇಜಿನ ಸಂಬಂಧ ಪಟ್ಟವರಿಗೆ ನೋಟಿಸ್ ಜಾರಿ ಮಾಡಿದ್ದು, ನೋಟಿಸ್ ತಲುಪಿದ 24 ಗಂಟೆ ಒಳಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ..
ಇದನ್ನೂ ಓದಿ