ಸುದ್ದಿಬಿಂದು ಬ್ಯೂರೋ
ಕುಮಟಾ :
ಚುನಾವಣೆ ಹತ್ತಿರವಾಗುತ್ತಿರುವಂತೆ ಸಾಕಷ್ಟು ಕುತೂಹಲಗಳ ಜೊತೆ ಒಂದಿಷ್ಟು ಬೆಳವಣಿಗೆಗಳು ನಡೆಯುವುದು ಸಹ. ಈ ಎಲ್ಲಾ ಬೆಳವಣಿಗೆ ನಡುವೆ ಕುಮಟಾ -ಹೊನ್ನಾವರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಅವರು ಕಾಂಗ್ರೆಸ್ ನ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರ ಮನೆಗೆ ಹೋಗಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಕಳೆದ ಮೂರು ದಶಕ್ಕೂ ಹೆಚ್ಚಿನ ಸಮಯ ಶಾರದಾ ಶೆಟ್ಟಿ ಅವರ ಕುಟುಂಬ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡು ಬರುವುದರೊಂದಿದೆ. ಈ ಕ್ಷೇತ್ರವನ್ನ ಕಾಂಗ್ರೆಸ್ ಹಿಡಿತದಲ್ಲಿ ಇಟ್ಟುಕೊಂಡು ಬಂದಿದೆ. ಇವೆಲ್ಲದರ ನಡುವೆ ಈ ಬಾರಿಯ ಕಾಂಗ್ರೆಸ್ ಟಿಕೆಟ್ ನ ಪ್ರಬಲ  ಆಕಾಂಕ್ಷಿಯಾಗಿದ್ದ ಶಾರದಾ ಶೆಟ್ಟಿ ಅವರನ್ನ ಕಾಂಗ್ರೆಸ್ ಕೈ ಬಿಟ್ಟಿದೆ. ಇದರಿಂದಾಗಿ ಶಾರದಾ ಶೆಟ್ಟಿ ಅವರು ಪಕ್ಷೇತರವಾಗಿ ಸ್ಪರ್ಧಿಸಲು ನಾಮಪತ್ರವನ್ನ ಕೂಡ ಸಲ್ಲಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಅವರು ತಮ್ಮ ನಾಮಪತ್ರವನ್ನ ಹಿಂದೆ ಪಡೆಯುವುದರ ಜೊತೆಗೆ ರಾಜಕೀಯದಿಂದ ದೂರ ಇರುವುದುದಾಗಿ ನಿನ್ನೆಯಷ್ಟೆ ಮಾಧ್ಯಮಗಳ‌ ಮೂಲಕ ಸ್ಪಷ್ಟ ಪಡಿಸಿದ್ದರು.

ಇನ್ನೂ ಶಾರದಾ ಶೆಟ್ಟಿಯವರು ರಾಜಕೀಯದಿಂದ ದೂರ ಸರಿದ್ದಾರೆ ಎನ್ನುವ ವಿಚಾರವನ್ನ ತಿಳಿದ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಅವರು ಶಾರದಾ ಶೆಟ್ಟಿ ಅವರ ಮನೆಗೆ ಭೇಟಿ ನೀಡಿ. ರಾಜಕೀಯ ದಿಂದ ದೂರ ಸರಿದ ವಿಚಾರ ವೈಯಕ್ತಿಕವಾಗಿ ನನ್ನಗೂ ಬೇಸರ ತಂದಿದೆ. ನೀವು ಈ ನಿರ್ಧಾರವನ್ನ ತೆಗೆದುಕೊಳ್ಳಬಾರದಾಗಿತ್ತು.‌ ನಾವು,ನೀವು ರಾಜಕೀಯವಾಗಿ ಬೇರೆ ಬೇರೆ ಪಕ್ಷದಲ್ಲಿ‌ ಇದ್ದರೂ. ನಿಮ್ಮ ಕುಟುಂಬ ಕಳೆದ ಮೂರು ದಶಕಕ್ಕೂ ಹೆಚ್ಷಿನ ಸಮಯ ಕಾಂಗ್ರೆಸ್ ಗಾಗಿ ಸಾಕಷ್ಟು ಶ್ರಮಿಸಿದ್ದೀರಿ. ಹೀಗಿರುವಾಗ ಪಕ್ಷ ನಿಮ್ಮನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು.ಯಾವುದಕ್ಕೂ ಸಹ ತಾವು ಎದೆಗುಂದದೆ ಇರುವಂತೆ ದೈರ್ಯ ತುಂಬಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾರದಾ ಶೆಟ್ಟಿ ಅವರು ಸೂರಜ್ ನಾಯ್ಕ ಅವರು ನಮ್ಮ‌ ಮನೆಗೆ ಬಂದಿರುವುದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ಅವರಿಗೂ ‌ಸಹ ನನ್ನ ನಿರ್ಧಾರ ಬೇಸರ ತಂದಿರಬೇಕು ಹಾಗಾಗಿ ಮನೆಗೆ ಬಂದು ನನ್ನ ರಾಜಕೀಯ ನಿರ್ಧಾರ ಬಗ್ಗೆ ಅವರು ಸಹ ಬೇಸರದಿಂದಲ್ಲೆ ಮಾತನಾಡಿ ಹೋಗಿದ್ದಾರೆ. ಅವರು ಸಹ ಕಳೆದ ಎರಡು ದಶಕದಿಂದ ಜನರ ಪರವಾಗಿ ಹೋರಾಟ ಮಾಡಿಕೊಂಡು ಬಂದವರು.ಅವರು ಸಹ ರಾಜಕೀಯ ಹಾಗೂ ಸಾಮಾಜಿಕ ಕೆಲಸ ಕಾರ್ಯಗಳ ಮೂಲಕ ಕ್ಷೇತ್ರದ ಜನರ ಪ್ರತಿಯೊಂದು ಕಷ್ಟ,ನೋವುಗಳನ್ನ ಚೆನ್ನಾಗಿ ಅರ್ಥೈಸಿಕೊಂಡವರಾಗಿದ್ದಾರೆ. ಯಾರಿಗೆ ಆದರೂ ರಾಜಕೀಯವಾಗಿ, ಸಾಮಾಜಿಕ ಕ್ಷೇತ್ರದಲ್ಲಿ ಅನ್ಯಾಯವಾದಾಗ ಬೇಟಿ ಮಾಡಿ ಮಾತುಕತೆ ನಡೆಸುವುದು ಸಹಜ ಅವರು ಹಾಗೆ ಬಂದು ಮಾತನಾಡಿಸಿದ್ದಾರೆ ಅಷ್ಟೆ ಎಂದಿದ್ದಾರೆ

.