ಸುದ್ದಿ ಬಿಂದು ಬ್ಯೂರೋ
ಕುಮಟಾ
: ತಾಲೂಕಿನ ಬರ್ಗಿಯ ಘಟಬೀರ ಮಂದಿರದಲ್ಲಿ ಭಕ್ತರ ದೇಣಿಗೆಯಿಂದ ನಿರ್ಮಾಣವಾದ ಗೋಪುರ ಲೋಕಾರ್ಪಣೆ, ಶಿಖರ ಪ್ರತಿಷ್ಠಾಪನೆ ಕಾರ್ಯಕ್ರಮ ಮೇ. 6ರಂದು ಆರಂಭವಾಗಲಿದೆ.

ಎರಡು ದಿನ ನಡೆಯುವ ಕಾರ್ಯಕ್ರಮದಲ್ಲಿ ಮೊದಲದಿನ ಮುಂಜಾನೆ ಮಹಾಸಂಕಲ್ಪ, ಗಣಪತಿ ಹವನ ಮತ್ತು ರಾತ್ರಿ ವಾಸ್ತುಶಾಂತಿ, ವಾಸ್ತುಬಲಿ, ಬ್ರಹ್ಮಕಲಶ ಸ್ಥಾಪನೆ ಇತ್ಯಾದಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಹಾಗೂ 07-05-2023 ರವಿವಾರ ಬೆಳಿಗ್ಗೆ ಶುಭಮುಹೂರ್ತದಲ್ಲಿ ನೂತನ ಗೋಪುರ ಲೋಕಾರ್ಪಣೆ ಶಿಖರ ಪ್ರತಿಷ್ಠಾಪನೆ, ಕಲಾವೃದ್ಧಿ ಹವನಗಳು, ಕಲಶಾಭಿಷೇಕ, ಕುಂಕುಮಾರ್ಚನೆ, ಮಹಾಮಂಗಳಾರತಿ, ನಂತರ ಸಾಮೂಹಿಕ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ.

ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರೆಲ್ಲರೂ ಬಂದು ತನು-ಮನ-ಧನಗಳಿಂದ ಸಹಕರಿಸಿ ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಬರ್ಗಿ ಶ್ರೀ ಬೀರದೇವತಾ ಸೇವಾ ಸಮಿತಿಯ ಪದಾಧಿಕಾರಿಗಳು, ಗ್ರಾಮ ಮುಖಂಡರು, ವರ್ಗದಾರರು, ಗ್ರಾಮದ ಹತ್ತು ಸಮಸ್ತರು ಪ್ರಕಟಣೆ ಮೂಲಕ ವಿನಂತಿಸಿಕೊಂಡಿದ್ದಾರೆ.