ಸುದ್ದಿಬಿಂದು ಬ್ಯೂರೋ
ಕಾರವಾರ :
ಯಲ್ಲಾಪುರ -ಮುಂಡಗೋಡ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ಒಳ ಒಪ್ಪಂದ ಮಾಡಿಕೊಂಡು, ಕುಮಾರಸ್ವಾಮಿ ಯಲ್ಲಾಪುರ ಕ್ಷೇತ್ರದಲ್ಲಿ ಡಮ್ಮಿ ಅಭ್ಯರ್ಥಿ ಓರ್ವರನ್ನ ಸ್ಪರ್ಧೆಗೆ ಇಳಿಸಿದೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಸಂತೋಷ ರಾಯ್ಕರ್ ಆರೋಪಿಸಿದ್ದಾರೆ.

ಅವರು ಇಂದು ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿ ಯಲ್ಲಾಪುರ ಕ್ಷೇತ್ರ ಬೂದಿ ಮುಚ್ಚಿದ ಕೆಂಡ ದಂತಿದೆ. ಇಲ್ಲಿ ಏನೂ ಆಗಬಹುದು ಎಂದರು. ಕಲ್ಯಾಣ ಪ್ರಗತಿ ಪಕ್ಷದ ಅಧ್ಯಕ್ಷ ಜನಾರ್ದನ ರೆಡ್ಡಿ ನಮ್ಮ ಮೇಲೆ ವಿಸ್ವಾಸ ಇಟ್ಟು ಟಿಕೆಟ್ ನೀಡಿದ್ದಾರೆ. ಅವರ ನಂಬಿಕೆ ಉಳಿಸುವೆ ಎಂದರು‌ . ಕಲ್ಯಾಣ ಪ್ರಗತಿ ಪಕ್ಷ ಈ ಚುನಾವಣೆಯಲ್ಲಿ 50 ಅಭ್ಯರ್ಥಿಗಳನ್ನ ಮಾತ್ರ ಕಣದಲ್ಲಿ ಇದ್ದೇವೆ. ಮುಂದಿನ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದೇವೆ ಎಂದರು. ಮುಂಡಗೋಡ ಪ್ರಚಾರಕ್ಕೆ ಕೆಆರ್ ಪಿಪಿ ಯ ರಾಜ್ಯಾಧ್ಯಕ್ಷ ಜನಾರ್ಧನ ರೆಡ್ಡಿ ಬರಲಿದ್ದಾರೆ. ಇನ್ನೆರಡು ದಿನಗಳಲ್ಲಿ ದಿನಾಂಕ ನಿಗದಿ ಮಾಡಲಾಗುವದು ಎಂದರು.

ಕೆಆರ್ ಪಿಪಿ ಯಾವತ್ತೂ ಬಿಜೆಪಿಗೆ ಬೆಂಬಲ ನೀಡಲ್ಲ ಎಂದು ಅಭ್ಯರ್ಥಿ ಸಂತೋಷ ರಾಯ್ಕರ್ ಹೇಳಿದರು. ಜೆಡಿಎಸ್ ಗೆ ವಿದಾಯ ಹೇಳಿದ ತುಕಾರಾಮ್ ಮಾತನಾಡಿ ಯಲ್ಲಾಪುರ ಕ್ಷೇತ್ರಕ್ಕೆ ಜೆಡಿಎಸ್ ನಿಂದ ಅನಿಲ್ ಕುಮಾರ್ 2008 ರಲ್ಲಿ ಅಭ್ಯರ್ಥಿ ಯಾಗಿದ್ದರು. ಚುನಾವಣೆಗೆ ಎರಡು ದಿನ ಇರುವಾಗ ಅವರು ಕಾಣೆಯಾದರು.ಆದರೂ 27000ಮತ‌ಗಳು ಬಂದಿದ್ದವು. ಸಂತೋಷ ರಾಯ್ಕರ್ ಸ್ಥಳೀಯರು ಜೆಡಿಎಸ್ ಗೆ ಕಳೆದ 5 ವರ್ಷದಿಂದ ಕೆಲಸ ಮಾಡಿದ್ದಾರೆ. 40ಸಾವಿರ ಅತಿಕ್ರಮಣದಾರರು ಇದ್ದಾರೆ. ಅವರ ಕೆಲಸ ಮಾಡಿದ್ದೇನೆ , ನಾಯಕತ್ವ ಇದೆ ಎಂದು ರವೀಂದ್ರ ನಾಯ್ಕ ಟಿಕೆಟ್ ಪಡೆದರು. ಚೈತ್ರಾ ಗೌಡ ಟಿಕೆಟ್ ಕೊಟ್ಟಾಗ ಅವರು 700 ಮತ ಪಡೆದರು. ಆಗ ನಾವು ಸ್ಥಳೀಯರಿಗೆ, ಸಂತೋಷ ರಾಯ್ಕರ್ ಗೆ ಟಿಕೆಟ್ ಕೊಡಿ ಎಂದರೂ, ಕೊಡಲಿಲ್ಲ ಎಂದು ಜೆಡಿಎಸ್ ಗೆ ವಿದಾಯ ಹೇಳಿದ ತುಕಾರಾಮ್ ಹೇಳಿದರು.

ಮುಂಡಗೋಡ ತಾಲ್ಲೂಕಿನ ಜೆಡಿಎಸ್ ಇಡೀ ಘಟಕ ಜೆಡಿಎಸ್ ಗೆ ವಿದಾಯ ಹೇಳಿ ಕಲ್ಯಾಣ ಪ್ರಗತಿ ಪಕ್ಷ ಸೇರಿದ್ದೇವೆ. ಈ ವಿಷಯಯನ್ನು ಜಿಲ್ಲಾಧ್ಯಕ್ಷ ಗಣಪೇ ಗೌಡ, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಗೆ ತಿಳಿಸಿದ್ದೇವೆ‌ .

ಅಲ್ಜರ್ ಶೇಖ್, ಸಂದೇಶ ರಾಯ್ಕರ್, ದೀಪಾಲಿ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.