suddibindu.in
Karwar: ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನ ಸಾಮಾಜಿಕ ಜಾಲತಾಣದಲ್ಲಿ(Social Media),ಮರಾಠಿ ಪಿಂಡ ಎಂದು ಬಿಜೆಪಿ ಕಾರ್ಯಕರ್ತ ಎನ್ನಲಾದ ಶ್ರೀಕಾಂತ ಹೆಗಡೆ ಅಂತ್ರವಳ್ಳಿ ಎನ್ನುವ ವ್ಯಕ್ತಿ ನಿಂದಿಸಿದ್ದು ಆತನ ವಿರುದ್ದ ಕ್ರಮ ಕೈಗೊಳ್ಳುವಂತೆ ಕುಮಟಾದ ಕಾಂಗ್ರೆಸ್ (Congress) ಮುಖಂಡ ಆರ್ ಹೆಚ್ ನಾಯ್ಕ ಕಾಗಲ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರನ್ನ ನೀಡಿದ್ದಾರೆ.
ಲೋಕಸಭಾ ಚುನಾವಣೆ (Lok Sabha Election) ಹಿನ್ನಲೆಯಲ್ಲಿ ಆರ್ ಹೆಚ್ ನಾಯ್ಕ ಕಾಗಲ ತಮ್ಮ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ (Dr.Anjali Nimbalkar)ಪರ ಮತ ಹಾಕುವಂತೆ ಮನವಿ ಮಾಡಿದ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಕುಮಟಾದ ಶ್ರೀಕಾಂತ್ ಹೆಗಡೆ ಅಂತ್ರವಳ್ಳಿ ಎಂಬಾತ ತನ್ನ ಫೇಸ್ ಬುಕ್ ಪೇಜಿನ ಅಕೌಂಟ್ ನಿಂದ ನಿಂದನೆ ಮಾಡಿದ್ದಾಗಿ ದೂರನ್ನ ನೀಡಿದ್ದಾರೆ.
ಇದನ್ನು ಓದಿ
- ರೇಬೀಸ್ ಹೋರಿಯಿಂದ ರಂಪಾಟ: ವ್ಯಕ್ತಿಗೆ ತಿವಿತ
- 85 ಸಾವಿರ ನಗದು, ಚಿನ್ನ ಕದ್ದ ಆರೋಪಿ ಬಂಧನ
- ಅರ್ಪಿತಾಗೆ ವಿಟಿಯುನಿಂದ ಡಾಕ್ಟರೇಟ್
ನಮ್ಮ ಜಿಲ್ಲೆ bsdk ನೀನು ಹೋಗಾಚೆ. ಯಾವುದೋ ಇಟಲಿ ಪೇದೆಯ ಮೆಚ್ಚಿಕೊಂಡು ಏನ್ ಸಾಯ್ತಿರೋ ನೀವೆಲ್ಲ. ನಿಮೆಗೆ ….. ಇಲ್ಲ. ಆಗ್ರೋ ಲೀಡರ್ ಮೊದಲಿ. ಯಾವುದೋ ಮರಾಠಿ ಪಿಂಡವನ್ನ ತಂದು ಉ.ಕ ಹಾಕೋದ್ಯಾಕೆ..? ಹುಚ್ ನಾಯಿನಾದ್ರು ಗೆಲ್ಸೋಣ ನಿನ್ನಂತ ಕಾಂಗೀ ಗುಲಾಮರು ಬೇಡ ಎಂದು ನಿಂದಿಸಿದ್ದಾರೆ.
ಇನ್ನು ಪಕ್ಷ, ಅಭ್ಯರ್ಥಿ ಪರ ನಿಂದನೆ ಮಾಡುವುದು, ವಿರೋಧ ಮಾಡುವುದು ಸಾಮಾನ್ಯ. ಆದರೆ ಜಾತಿಯನ್ನ ಗುರಿಯಾಗಿಸಿಕೊಂಡು ಮರಾಠಿ ಪಿಂಡ ಎಂದು ಅವಹೇಳನ ಮಾಡುವುದು ಸರಿಯಾದ ಕ್ರಮವಲ್ಲ. ಜಾತಿಗಳ ನಡುವೆ ವೈಷಮ್ಯ ಬೇರುವ ಹೇಳಿಕೆಯನ್ನ ಸಾಮಾಜಿಕ ಜಾಲತಾಣದಲ್ಲಿ ನೀಡಿರುವ ಶ್ರೀಕಾಂತ ಹೆಗಡೆ ಅಂತ್ರವಳ್ಳಿ ಜಿಲ್ಲಾ ಚುನಾವಣಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಆತನನ್ನ ಬಂಧನ ಮಾಡುವ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಆರ್ ಹೆಚ್ ನಾಯ್ಕ ಆಗ್ರಹಿಸಿದ್ದಾರೆ