suddibindu.in
ಕಾರವಾರ : ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಮೋದಿ ಭಕ್ತನೋರ್ವ ತನ್ನ ಕೈ ಬೆರಳನ್ನೆ ಕತ್ತರಿಸಿಕೊಂಡು ಕಾಳಿ ಮಾತೆಗೆ ಅರ್ಪಿಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.
- ಲಂಚ ಪಡೆಯುತ್ತಿದ್ದ ಸರ್ಜನ್ಗೂ ‘ಆಪರೇಷನ್’ ಮಾಡಿದ ಲೋಕಾಯುಕ್ತ! ಶಿವಾನಂದ ಕುಡ್ತಾಲಕರ್ ಲೋಕಾ ಬಲೆಗೆ
- ಓದಿನ_ಮನೆಯಲ್ಲೊಂದಿಷ್ಟು…
- ಮದ್ಯದ ಅಮಲಿನಲ್ಲಿ ಬಸ್ನಲ್ಲಿ ರಂಪಾಟ : ಪ್ರಯಾಣಿಕರ ಆಕ್ರೋಶ
ಕಾರವಾರದ ಸೋನಾರವಾಡದ ಅರುಣ್ ವರ್ಣೇಕರ್ ತನ್ನ ಎಡಗೈನ ಬೆರಳನ್ನು ಕಾಳಿ ಮಾತೆಗೆ ಅರ್ಪಿಸಿದ ಮೋದಿ ಅಭಿಮಾನಿಯಾಗಿದ್ದಾನೆ. ಅಲ್ಲದೇ, ಮೋದಿಗಾಗಿ ಮನೆಯಲ್ಲಿ ಗುಡಿಯನ್ನು ನಿರ್ಮಿಸಿ ದಿನಾಲೂ ಪೂಜೆ ಮಾಡುತ್ತಿದ್ದು, ಬೆರಳು ತುಂಡು ಮಾಡಿಕೊಂಡು ರಕ್ತದಲ್ಲಿ “ಮಾ ಕಾಳಿಮಾತ ಮೋದಿ ಬಾಬಾ ಕೋ ರಕ್ಷಾ ಕರೋ” “ಮೋದಿ ಬಾಬ ಪಿಎಂ, 3 ಬಾರ್ 78ತಕ್, 378 , 378+, ಮೇರ ಮೋದಿ ಬಾಬಾ ಸಬಸೆ ಮಹಾನ್” ಎಂದು ಗೋಡೆ ಹಾಗೂ ಪೋಸ್ಟರ್ ನಲ್ಲಿ ಬರೆದುಕೊಂಡಿದ್ದಾನೆ.
2019ರಲ್ಲೂ ಸಹ ಮೋದಿಯ ಗೆಲುವಿಗಾಗಿ ಬಲಗೈ ಬೆರಳನ್ನು ತುಂಡು ಮಾಡಿಕೊಂಡಿದ್ದ,ಮೋದಿ ಗೆಲುವಿಗಾಗಿ ಕಾಳಿ ಮಾತೆಗೆ ಬೆರಳು ಹರಕೆ ನೀಡಿ ರಕ್ತದಲ್ಲಿ ಬರೆದುಕೊಂಡಿದ್ದಾನೆ. ಈ ಬಾರಿ ಮತ್ತೆ 2029ರವರೆಗೆ ಮೋದಿ ಪ್ರಧಾನಿಯಾಗಬೇಕು ಎಂದು ಬೆರಳನ್ನೇ ತುಂಡರಿಸಿ ಕಾಳಿಗೆ ಅರ್ಪಿಸಿದ್ದಾನೆ. ಪ್ರಧಾನಿ ನರೇಂದ್ರ ಮೋದಿ ನನಗೆ ದೇವರಿಗಿಂತ ಮೇಲು,ಮೋದಿ ಅಧಿಕಾರಕ್ಕೆ ಬಂದ ಬಳಿಕವಷ್ಟೇ ಪಾಕಿಸ್ತಾನ, ಚೀನಾದ ಕಿರಿಕಿರಿ ನಿಂತಿದೆ. ಪ್ರತೀ ಬಾರಿ ಉಗ್ರರ ದಾಳಿ, ಸೈನಿಕರ ಸಾವು ಕೇಳಿ ಬರ್ತಿದ್ದ ಕಾಶ್ಮೀರದಲ್ಲಿ ನೆಮ್ಮದಿ ವಾತಾವರಣವಿದೆ. ದೇಶದ ಅಭಿವೃದ್ಧಿಗಾಗಿ ಮೋದಿ ಮತ್ತೊಮ್ಮೆ ಬೇಕು ಅನ್ನೋ ಅಭಿಪ್ರಾಯವನ್ನ ಅರುಣ್ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಅರುಣ್ ಮುಂಬೈನಲ್ಲಿ ಸಿನಿಮಾ ಇಂಡಸ್ಟ್ರೀಯಲ್ಲಿ ಕೆಲಸ ಮಾಡುತ್ತಿದ್ದ ಬಳಿಕ ತನ್ನ ವೃದ್ಧೆ ತಾಯಿಯ ಆರೈಕೆಗಾಗಿ ಕೆಲಸ ಬಿಟ್ಟು ಕಾರವಾರದಲ್ಲೇ ವಾಸವಾಗಿದ್ದಾನೆ.