umta : ಕುಮಟಾ : ಚನ್ನಪ್ಪಣ‌ ಉಪಚುನಾವಣಾ ಅಖಾಡ ಚುರುಕಾಗಿದ್ದು, ಎನ್‌ಡಿಎ ಅಭ್ಯರ್ಥಿ ನಿಖಿಲ್‌ಕುಮಾರ ಸ್ವಾಮಿ ಗೆಲವುಗಾಗಿ ಪಟ್ಟಣದ ಮಹಾಸತಿ‌ ದೇವಸ್ಥಾನದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪ್ರಮುಖರು ಸೇರಿ ವಿಶೇಷ ಪೂಜೆ‌ಸಲ್ಲಿಸಿದರು.

ಕೇಂದ್ರ ಸಚಿವ ಹಾಗೂ ಜೆಡಿಎಸ್‌‌‌ನ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರು ಚನ್ನಪ್ಪಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು,ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಮತಗಳೊಂದಿಗೆ ಗೆಲುವಾಗಬೇಕು ಎಂದು ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಹಾಗೂ ಬಿಜೆಪಿಯ ಪ್ರಮುಖರು ಸೇರಿ ಪಟ್ಟಣ ಮಾಸ್ತಿಕಟ್ಟೆಯಲ್ಲಿ ನೆಲೆಸಿರುವ ಮಹಾಸತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಗೆಲುವಿಗಾಗಿ ಪ್ರಾರ್ಥಿಸಿದರು.

ಈ ವೇಳೆ ಕುಮಟಾ ಜೆಡಿಎಸ್ ತಾಲೂಕಾಧ್ಯಕ್ಷ‌ ಸಿ ಜೆ ಹೆಗಡೆ, ಹೊನ್ನಾವರ ಅಧ್ಯಕ್ಷ ಟಿ ಟಿ ನಾಯ್ಕ,ಪ್ರಧಾನಕಾರ್ಯದರ್ಶಿ ದತ್ತು ಪಟಗಾರ, ಪ್ರಮುಖರಾದ ಗೋವಿಂದರಾಯ ಶಾನಭಾಗ,ಬಲಿಂದ್ರ ಗೌಡ, ಸಂಪತ್‌ಕುಮಾರ, ಬಾಲು ಗೌಡ,ವಿಘ್ನೇಶ್ವರ ಗುನಗಾ,ರಾಜೇಶ ಪಟಗಾರ, ದಿವಾಕರ ನಾಯ್ಕ, ಅಣ್ಣಪ್ಪ ನಾಯ್ಕ,ಅನಂತ ಗೌಡ,ಗಿರೀಶ್, ಲಕ್ಷ್ಮೀಕಾಂತ ಗೌಡ,ನಾಗೇಶ ನಾಯ್ಕ, ಅರುಣ ಗಾಡಿಗ,ಚಂದ್ರಶೇಖರ್ ಪಾಲೇಕರ್,ನಾಗರಾಜ್ ನಾಯ್ಕ, ಮೊದಲಾದವರು ಹಾಜರಿದ್ದರು..

ಗಮನಿಸಿ