ಸುದ್ದಿಬಿಂದು ಬ್ಯೂರೋ ವರದಿ
Karwar: ಕಾರವಾರ: ಆರ್.ಎಸ್.ಎಸ್(RSS) ಪ್ರಮುಖ ದತ್ತಾತ್ರೇಯ ಹೊಸಬಾಳೆ ಸಂಘದ ಸಂಘಟನಾ ಕಾರ್ಯಕ್ಕಾಗಿ ಮೂರು ದಿನಗಳ ಭೇಟಿಗಾಗಿ ಜಿಲ್ಲೆಗೆ ಅಗಮಿಸುತ್ತಿದ್ದು,ಮಾಜಿ ಸಂಸದ ಅನಂತಕುಮಾರ ಹೆಗಡೆ ಜೊತೆ ಸಹ ಚರ್ಚೆ ನಡೆಸುವ ಸಾಧ್ಯತೆ ಇದ್ದು,ಇದು ಬಿಜೆಪಿಯಲ್ಲಿನ ತಳಮಳಕ್ಕೆ ಕಾರಣವಾಗಿದೆ.
ಸದ್ಯ ಅರ್.ಎಸ್.ಎಸ್ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಹೊಸಬಾಳೆ, ಸಂಘದಲ್ಲಿ ಎರಡನೇಯ ಸ್ಥಾನವನ್ನು ಹೊಂದಿದ್ದಾರೆ.ಸಂಘದ ಮುಂದಿನ ಸರಸಂಚಾಲಕ ಎಂದೇ ಅವರನ್ನು ಕರೆಯಲಾಗುತ್ತಿದೆ. ಸಂಘದ ಸಂಘಟನೆಯನ್ನು ಇನ್ನಷ್ಟು ಬಲಗೊಳಿಸುವುದು ಭೇಟಿಯ ಉದ್ದೇಶ ಎಂದು ಹೇಳಲಾಗಿದೆ.
ಈ ನಡುವೆ ತನ್ನ ನೆಚ್ಚಿನ ಶಿಷ್ಯ ಮಾಜಿ ಸಂಸದ ಹಾಗೂ ಹಿಂದು ಫೈರ್ ಬ್ಯ್ರಾಂಡ್ ಅನಂತಕುಮಾರ ಹೆಗಡೆಯನ್ನು(Former MP Anantakumar Hegde) ಬಿಜೆಪಿ ನಡೆಸಿಕೊಂಡಿರುವ ಬಗ್ಗೆ ತೀವ್ರ ಅಸಮಾಧಾನ ಹೊಂದಿರುವ ಸಂಘ ಪ್ರಮುಖರು,ಶತಾಯಗತಾಯ ಹೆಗಡೆಯನ್ನ ಪುನಃ ರಾಜಕಾರಣಕ್ಕೆ ಕರೆತರಲು ಮುಂದಾಗಿದ್ದಾರೆ.ರಾಜ್ಯದಲ್ಲಿ ಬಿಜೆಪಿ ಸ್ಥಿತಿ ಅಯೋಮಯವಾಗಿದೆ.ಮನೆಯೊಂದು ಮೂರು ಬಾಗಿಲಾಗಿದ್ದು,ಬಿಜೆಪಿಯ ಸಂಘಟನೆ ಸಂಪೂರ್ಣ ನೆಲಕಚ್ಚಿದೆ.ವಾಲ್ಕೀಕಿ ಹಗರಣ,ಮುಡಾ ಹಗರಣವನ್ನು ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಂಡು ಕಾಂಗ್ರೇಸ್ ವಿರುದ್ಧ ಹೊರಾಡಲು ವಿಫಲವಾಗಿದೆ. ಇನ್ನು ವಕ್ಫ್ ವಿರುದ್ಧ ಯತ್ನಾಳ( Basavaraj yatnaal )ಹೊರತು ಪಡಿಸಿ ಬಿಜೆಪಿಯಲ್ಲಿ ಧ್ವನಿ ಎತ್ತುವವರಿಲ್ಲ.ಅಧಿಕಾರದಲ್ಲಿದ್ದಾಗ ವಕ್ಫ ಪರ ನಿಂತ ಬಿಜೆಪಿಯ ಹಿರಿಯ ನಾಯಕನ ಪುತ್ರನಿಗೆ ಉಪ ಚುನಾವಣೆಯಲ್ಲಿ ಟಿಕೇಟ್ ನೀಡಲಾಗಿದೆ. ಇವುಗಳನ್ನೆಲ್ಲಾ ನೋಡಿದರೆ ಬಿಜೆಪಿ ಇನ್ನೂ ಎರಡರಿಂದ ಮೂರು ಅವಧಿಯವರೆಗೆ ವಿರೋಧ ಪಕ್ಷದಲ್ಲೇ ಉಳಿಯಲಿದೆ ಎಂಬುದು ಸಂಘದ ಅಂದಾಜು.
ಹಿಂದುತ್ವದ ಗಟ್ಟಿ ಧ್ವನಿಯಾದ ತನ್ನ ಶಿಷ್ಯ ಅನಂತಕುಮಾರ ಹೆಗಡೆಯನ್ನು ಬಿಜೆಪಿಯಲ್ಲಿ ಸೈಡ್ ಲೈನ್ ಮಾಡಿರುವುದರಿಂದ ತೀವ್ರ ಅಸಮಾಧಾನ ಗೊಂಡಿರುವ ಸಂಘ,ಅಂದು ಭಟ್ಕಳ ಗಲಭೆ, ಹುಬ್ಬಳ್ಳಿಯ ಈದ್ಗಾ ಗಲಾಟೆಯಲ್ಲಿ ಮಂಚೂಣಿಯಲ್ಲಿ ನಿಂತು ಲಾಠಿ ಏಟು,ಅಸಂಖ್ಯಾತ ಪ್ರಕರಣ ಮೈಮೇಲೆ ಏಳೆದುಕೊಂಡು ಹಿಂದುತ್ವದ ಧ್ವನಿಯಾಗಿ ನಿಂತವನಿಗೆ ಬಿಜೆಪಿ(Bjp) ದೊಡ್ಡ ಬಳುವಳಿ ನೀಡಿದೆ ಎಂಬ ಆಕ್ರೋಶ ಸಂಘದಲ್ಲಿದೆ.
ಯಾವುದೇ ಕಾರಣಕ್ಕೂ ತನ್ನ ನೀಲಿ ಕಣ್ಣಿನ ಹುಡುಗನಿಗೆ ಬಲವಂತದ ರಾಜಕೀಯ ವನವಾಸದಲ್ಲಿ ಬಿಡಲು ಸಂಘ ಪ್ರಮುಖರು ಸಿದ್ಧರಿಲ್ಲ. ರಾಜ್ಯ ರಾಜಕಾರಣಕ್ಕೆ ತಂದು ಹಿಂದುತ್ವದ ನೆಲೆ ಗಟ್ಟಿಗೊಳಿಸುವುದು ಸಂಘದ ಯೋಚನೆ. ಹೀಗಾಗಿ ಒಂದೊಮ್ಮೆ ಕಾರವಾರ ಕ್ಷೇತ್ರದಲ್ಲಿ ಉಪ ಚುನಾವಣೆ ಘೋಷಣೆಯಾದರೆ ಅನಂತಕುಮಾರ ಅಭ್ಯರ್ಥಿಯನ್ನಾಗಿಸುವುದು ಸಂಘದ ಆಲೋಚನೆ.
ಇನ್ನು ಹೊಸಬಾಳೆಯವರ ಜಿಲ್ಲೆಯ ಭೇಟಿಯನ್ನು ಅತ್ಯಂತ ಗೌಪ್ಯವಾಗಿಡಲಾಗಿದ್ದು,ಬಿಜೆಪಿಯ ಪ್ರಮುಖರಿಗೂ ಸಹ ಮಾಹಿತಿ ನೀಡಲಾಗಿಲ್ಲ. ಸಂಘದ ಕಾರ್ಯಕ್ರಮದ ನಂತರ ಹೊಸಬಾಳೆಯವರು ಕೇವಲ ಅನಂತಕುಮಾರ ಹೆಗಡೆಯವರನ್ನು ಮಾತ್ರ ಭೇಟಿ ಮಾಡಿ, ಸುಧೀರ್ಘ ಸಮಾಲೋಚನೆ ಮಾಡಲಿದ್ದಾರೆ ಎಂದು ಸಂಘದ ಆಪ್ತರು ಸುದ್ಧಿಬಿಂದು ಗೆ ಮಾಹಿತಿ ನೀಡಿದ್ದಾರೆ.
ಒಟ್ಟಾರೆ ದತ್ತಾತ್ರೇಯ ಹೊಸಬಾಳೆಯವರ ಉತ್ತರಕನ್ನಡ ಭೇಟಿ,ಹೆಗಡೆಯೊಂದಿಗಿನ ಚರ್ಚೆ ಜಿಲ್ಲಾ ಹಾಗೂ ರಾಜ್ಯ ಬಿಜೆಪಿಯಲ್ಲಿ ಹೊಸ ತಳಮಳಕ್ಕೆ ಕಾರಣವಾಗಲಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಇದನ್ನೂ ಓದಿ