ಸುದ್ದಿಬಿಂದು ಬ್ಯೂರೋ ವರದಿ
Haveri:ಹಾವೇರಿ: ಬಾಲಿವುಡ್ ನಟ(Bollywood actor,Sallu) ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿ ರಾಜಸ್ಥಾನ ಮೂಲದ ಬಿಕಾರಾಮ್‌ನನ್ನು ಹಾವೇರಿ ನಗರದಲ್ಲಿ ಬಂಧಿಸಲಾಗಿದೆ.

ರಾಜಸ್ತಾನ ಮೂಲದ ಬಿಕಾರಾಮ್ ಕೂಲಿ ಕೆಲಸಕ್ಕೆಂದು ಇತ್ತೀಚೆಗೆ ಹಾವೇರಿ ನಗರಕ್ಕೆ ಬಂದಿದ್ದ.ಇಲ್ಲಿನ ಗೌಡರ ಓಣಿಯಲ್ಲಿ ರೂಮ್‌ವೊಂದರಲ್ಲಿ ಕೂಲಿಕಾರರೊಂದಿಗೆ ವಾಸವಾಗಿದ್ದ.ಗ್ರಿಲ್ ಕೆಲಸ ಮಾಡಿಕೊಂಡಿದ್ದ.ಮುಂಬೈ ಪೊಲೀಸರ(Mumbai Police)ಮಾಹಿತಿ ಆಧಾರದಲ್ಲಿ ಆರೋಪಿಯನ್ನು ಜಿಲ್ಲಾ ಪೊಲೀಸರು ವಶಕ್ಕೆ ಪಡೆದು, ಮುಂಬೈ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಮೊದಲು ಬೇರೆಡೆ ಕೆಲಸ ಮಾಡುತ್ತಿದ್ದ. ಒಂದೂವರೆ ತಿಂಗಳ ಹಿಂದೆ ಬಿಕಾರಾಮ್ ಕೂಲಿಗಾಗಿ ಹಾವೇರಿಗೆ ಬಂದಿದ್ದ.ಮುಂಬೈ ಪೊಲೀಸರ ಮಾಹಿತಿ ಆಧಾರದ ಮೇಲೆ ವಶಕ್ಕೆ ಪಡೆದು ಅವರಿಗೆ ಒಪ್ಪಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಗಮನಿಸಿ