ಸುದ್ದಿಬಿಂದು ಬ್ಯೂರೋ
ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಆಂದ್ಲೆ ಗ್ರಾಮದಲ್ಲಿ ಕಳೆದ‌ ನಾಲ್ಕು ವರ್ಷದ ಹಿಂದೆ ದಂಪತಿ ಕೊಲೆಗೈದ ಆರೋಪಿಗಳಿಗೆ ಕಾರವಾರದ ಶಿಕ್ಷೆ ಪ್ರಕಟಿಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಜನವರಿ 2ಕ್ಕೆ ಶಿಕ್ಷೆ ಪ್ರಮಾಣವನ ಕಾಯ್ದಿರಿಸಿದೆ.

ಡಿಸೆಂಬರ್ 20-2019ರಂದು ಅಂಕೋಲಾ ತಾಲೂಕಿನ ಆಂದ್ಲೆಯಲ್ಲಿ ಆರೋಪಿಗಳಾಗಿರುವ ಆರೋಪಿತರುಗಳಾದ ಸುಕೇಶ ಚಂದ್ರು ನಾಯಕ, ಆಂದ್ಲೆ, ವೆಂಕಟ್‌ರಾಜ್ ಅಲಿಯಾಸ್ ವೆಂಕಟರಾಜಪ್ಪ, ಬೆಂಗಳೂರು, ನಾಗಣ್ಣ ಅಲಿಯಾಸ್ ನಾಗರಾಜ ಯಲ್ಲಪ್ಪ, ಬೆಂಗಳೂರು, ಭರತ್ ಈಶ್ವರಾಚಾರಿ ಬೆಂಗಳೂರು ಈ ನಾಲ್ಬರು ಸೇರಿಕೊಂಡು ನಾರಾಯಣ ಬೊಮ್ಮಯ್ಯಾ ನಾಯಕ ಮತ್ತು ಆತನ ಪತ್ನಿ ಸಾವಿತ್ರಿ ನಾರಾಯಣ ನಾಯಕ ಅವರ ಮನೆಗೆ ನುಗ್ಗಿ ಅವರ‌ ಕಣ್ಣಿಗೆ ಖಾರ‌ ಪುಡಿಯನ್ನ ಎರಚಿ ಕೊಲೆ ಮಾಡಿದ್ದರು‌. ನಂತರ ಕಪಾಟಿನಲ್ಲಿ ಇದ್ದ ಸುಮಾರು 10 ತೊಲೆ ಬಂಗಾರದ ಆಭರಣ ಮತ್ತು 2 ಲಕ್ಷ ರೂ ನಗದು ಹಣವನ್ನ ದೋಚಿಕೊಂಡು ಹೋಗಿದ್ದರು. ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಸಿ.ಆರ್. ನಂ 270/ 2019 ಕಲಂ: 396, 302, 457, 380, 201 ಐ.ಪಿ.ಸಿ. ಪ್ರಕರಣ ದಾಖಲಾಗಿತ್ತು.

ಅಂದಿನ ಉತ್ತರ ಕನ್ನಡ ಜಿಲ್ಲೆಯ ಪೊಲೀಸ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ರವರ ನಿರ್ದೇಶನದದಲ್ಲಿ ಹೆಚ್ಚುವರಿ ಪೊಲೀಸ ಅಧೀಕ್ಷಕರಾದ ಗೋಪಾಲ ಬ್ಯಾಕೋಡ್ ರವರ ಮಾರ್ಗದರ್ಶನದಲ್ಲಿ ಕಾರವಾರ ಉಪವಿಭಾಗದ ಪೊಲೀಸ ಉಪಾಧೀಕ್ಷಕರಾದ ಶಂಕರ ಮಾರಿಹಾಳ ರವರ ಮುಂದಾಳತ್ವದಲ್ಲಿ ಅಂಕೋಲಾ ಪೊಲೀಸ ಠಾಣೆಯ ಪೊಲೀಸ ನಿರೀಕ್ಷಕರಾದ ಕೃಷ್ಣಾನಂದ ಜಿ. ನಾಯ್ಕ, ಕಾರವಾರ ಪೊಲೀಸ ವೃತ್ತ ನಿರೀಕ್ಷಕರಾದ ಸಂತೋಷಕುಮಾರ ಶೆಟ್ಟಿ, ಅಂಕೋಲಾ ಪೊಲೀಸ್ ಠಾಣೆಯ ಪೊಲೀಸ ಉಪನಿರೀಕ್ಷಕರಾದ ಈ.ಸಿ. ಸಂಪತ್ ಕುಮಾರ ಅವರು ಅಂಕೋಲಾ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡವನ್ನು ರಚಿಸಿಕೊಂಡಿ ಪ್ರಕರಣದಲ್ಲಿ ಜೋಡಿ ಕೊಲೆ ಮಾಡಿ, ದರೋಡೆ ಮಾಡಿ ತಲೆಮರೆಸಿಕೊಂಡಿದ್ದ ಈ ಆರೋಪಿಗಳನ್ನ ಜನವರಿ 8, 2020ರಂದು ಬೆಂಗಳೂರಿನಲ್ಲಿ ಬಂಧಿಸಿ ಬಂಧಿತರಿಂದ 165 ಗ್ರಾಂ. ಬಂಗಾರ ಮತ್ತು ಹಣ 64,730 ನಗದು ಹಾಗೂ ಕೃತ್ಯಕ್ಕೆ ಬಳಸಿದ ಕಾರ್ ಮತ್ತು ಇನ್ನಿತರೆ ಸ್ವತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದರು.

ಆರೋಪಿತರು ದಂಪತಿಗಳನ್ನ‌ ಕೊಲೆ‌ ಮಾಡಿ ದರೋಡೆ‌ ಮಾಡಬೇಕು ಎನ್ನುವ ಉದ್ದೇಶದಿಂದಲ್ಲೆ.ಡಿಸೆಂಬರ್ 20-2019ರಂದು,ಬೆಂಗಳೂರಿನಿಂದ ಹೊರಟು ಹಾವೇರಿಯಲ್ಲಿ ಸ್ವಿಚ್‌ಆಫ್ ಮಾಡಿಕೊಂಡು, ಹಾವೇರಿಯಿಂದ ಶಿರಸಿ ಮಾರ್ಗವಾಗಿ ಯಲ್ಲಾಪುರಕ್ಕೆ ಬಂದು ಮಾರ್ಗಮಧ್ಯದಲ್ಲಿ ಕಾರಿನ ನಂಬರ್ ಪ್ಲೇಟ್‌ನ್ನು ತೆಗೆದು ಸ್ಥಳಕ್ಕೆ ಬಂದಿದ್ದರು.ನಂತರದಲ್ಲ ನಾರಾಯಣ ಬೊಮ್ಮಯ್ಯಾ ನಾಯಕ ಅವರ ತೋಟಕ್ಕೆ ನುಗ್ಗಿದ ಆರೋಪಿಗಳು , ಅವರ ಮನೆಯ ಕೋಳಿಯ ಗೂಡಿಗೆ ಕೈಹಾಕಿ ಅದರಲ್ಲಿದ್ದ ಕೋಳಿ ಕೂಗಿ ‌ಹೊರಗಡೆ ಹೋದಾದ ಅದನ್ನ ನೋಡಲು ಹೊರಗಡೆ ಬಂದಾಗ ಆರೋಪಿಗಳು ನಾರಾಯಣ ಬೊಮ್ಮಯ್ಯಾ ನಾಯಕ ಅವರನ್ನು ಇಬ್ಬರೂ ಆರೋಪಿಗಳು ಹಿಡಿದಿಟ್ಟುಕೊಂಡಿದ್ದರು, ಉಳಿದಿಬ್ಬರು ಮನೆಯ ಹಿಂಬದಿ ಬಾಗಿಲಿನಿಂದ ಮನೆಯ ಒಳಗೆ ಹೋಗಿ ಸಾವಿತ್ರಿ ನಾರಾಯಣ ನಾಯಕ ಅವರ ಕೈ ಕಾಲುಗಳನ್ನ ಕಟ್ಟಿಹಾಕಿ, ಕೊಲೆ ಮಾಡಿದ್ದರು. ಬಳಿಕ ಅಲ್ಮೇರಾದಲ್ಲಿದ್ದ 50 ಸಾವಿರ. ಹಣವನ್ನು ದರೋಡೆ ಮಾಡಿ ನಂತರ ಬೆಂಗಳೂರಿಗೆ ಪರಾರಿಯಾಗಿದ್ದರು.

ಪ್ರಕರಣದಲ್ಲಿ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಆದ ಶ್ರೀ ಶಿವಪ್ರಸಾದ್ ಆಳ್ವ ವಾದ ಮಂಡಿಸಿದ್ದರು. ಶಿವಪ್ರಸಾದ್ ಆಳ್ವರವರು ಪುತ್ತೂರು ಸಹಿತ ವಿವಿಧ ನ್ಯಾಯಾಲಯಗಳಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾಗಿ, ಅಭಿಯೋಜಕರಾಗಿ, ವಿಶೇಷ ಸರಕಾರಿ ಅಭಿಯೋಜಕರಾಗಿ ಕಾರ್ಯ ನಿರ್ವಹಿಸಿದ್ದು ಪ್ರಸ್ತುತ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಕಾರವಾರ ಜಿಲ್ಲೆ ಹಾಗೂ ಮಂಗಳೂರು ವಲಯದ ಹಿರಿಯ ಕಾನೂನು ಅಧಿಕಾರಿಯಾಗಿದ್ದಾರೆ. ವಿಶೇಷ ಪ್ರಕರಣಗಳಲ್ಲಿ ಪ್ರಾಸಿಕ್ಯೂಶನ್ ಪರ ವಾದ ಮಂಡಿಸಲು ಸರಕಾರ ಶಿವಪ್ರಸಾದ್ ಆಳ್ವರವರನ್ನು ನೇಮಿಸುತ್ತಿದೆ.

ಈಗಾಗಲೇ ಹಲವು ಪ್ರಕರಣಗಳಲ್ಲಿ ಇವರು ಸಮರ್ಥ ವಾದ ಮಂಡನೆ ಮಾಡಿ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂಕೋಲಾದ ಉದ್ಯಮಿ, ದಿ ಆರ್.ಎನ್ ನಾಯಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪ ಎದುರಿಸುತ್ತಿದ್ದ ಭೂಗತ ಪಾತಕೆ ಬನ್ನಂಜೆ ರಾಜಾ ಸಹಿತ 9ಮಂದಿ ಅಪರಾಧಿಗಳಿಗೆ ‘ಕೋಕಾ’ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇಲ್ಲಿಯೂ ಪ್ರಾಸಿಕ್ಯೂಶನ್ ಪೆರವಾಗಿ ಕೆ.ಶಿವಪ್ರಸಾದ್ ಆಳ್ವವಾದಿಸಿದ್ದರು. ಕೋಕಾ ಕಾಯ್ದೆಯಡಿ ದಾಖಲಾದ ಪ್ರಥಮ ಪ್ರಕರಣವಾಗಿತ್ತು.