ಸುದ್ದಿಬಿಂದು ಬ್ಯೂರೋ ವರದಿ, ಉತ್ತರ ಕನ್ನಡ,
ಸಿದ್ದಾಪುರ : ಸಿಜಿರಿಯನ್ ಸಂದರ್ಭದಲ್ಲಿ ಬಾಣಂತಿ ಓರ್ವಳು ಸಾವನ್ನಪ್ಪಿದ್ದು, ಆಕೆಯ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಆರೋಪಿಸಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸರಕಾರಿ ಆಸ್ಪತ್ರೆ ಎದುರು ಪ್ರತಿಭನೆ ನಡೆಸುತ್ತಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದಿದೆ.
ಸಿದ್ದಾಪುರ ತಾಲೂಕಿನ ಬಿಳಗಿ ಕಾನಳ್ಳಿ ಮೂಲದ ಬಾಣಂತಿ ಜ್ಯೋತಿ ರವಿ ನಾಯ್ಕ್ ಮೃತಪಟ್ಟಿರುವ ಮಹಿಳೆಯಾಗಿದ್ದಾಳೆ.ಈಕೆಯನ್ನ ಸಿದ್ದಾಪುರ ಸರಕಾರಿ ಆಸ್ಪತ್ರಗೆ ದಾಖಲಿಸಲಾಗಿತ್ತು. ಸಿಜಿರಿನ್ ಮಾಡುವ ವೇಳೆ ತಾಯಿ ಮೃತಪಟ್ಟಿದ್ದು, ಮಗು ಸುರಕ್ಷಿತವಾಗಿದ್ದಾಳೆ.ಮಹಿಳೆಯ ಸಾವಿಗೆ ಸ್ತ್ರೀರೋಗ ತಜ್ಞ ರವಿರಾಜ ಶೇಟ್ ನಿರ್ಲಕ್ಷ್ಯವೇ ಕಾರಣ ಎಂದು ಮೃತ ಮಹಿಳೆಯ ಸಂಬಂಧಿಕರು ಹಾಗೂ ಸ್ಥಳೀಯರು ವೈದ್ಯರ ವಿರುದ್ಧ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಪ್ರತಿಭಟನೆ ಹತೋಟಿಗೆ ತರಲು ಪೋಲಿಸರು ಹರಸಾಹಸ ಪಡುತ್ತಿದ್ದಾರೆ.
ಗಮನಿಸಿ