ಸುದ್ದಿಬಿಂದು ಬ್ಯೂರೋ ವರದಿ,ಉತ್ತರಕನ್ನಡ,
ಊಟ ಕೇಳಿಕ್ಕೆ ತಂದೆಯೇ ತನ್ನ 6 ವರ್ಷ ಮಗುವನ್ನೇ ಹೊಡೆದು ಸಾಯಿಸಿರುವ ಘಟನೆ ಚಿತ್ರದುರ್ಗ ತಾಲೂಕಿನ ಹಳೆ ರಂಗಾಪುರ ಗ್ರಾಮದಲ್ಲಿ ನಡೆದಿದೆ.
ಮಂಜುನಾಥ (6) ಮೃತ ದುರ್ದೈವಿಯಾಗಿದ್ದಾನೆ. ಈತನ ತಂದೆ ತಿಪ್ಪೇಶ ಎಂಬಾತನ ತನ್ನ ಮಗುವನ್ನೆ ಸಾಯಿಸಿದ್ದಾನೆ. ಈತ ಪ್ರತಿನಿತ್ಯ ಕುಡಿದು ಪತ್ನಿ ಗೌರಮ್ಮಳನ್ನು ಪೀಡಿಸುತ್ತಿದ್ದ ಎನ್ನಲಾಗಿದೆ.ಮಗು ಅನ್ನ ಬೇಕು ಅಂತಾ ಅತ್ತಿದ್ದಕ್ಕೆ ಎದೆ ಹಾಗೂ ಬೆನ್ನಿನ ಭಾಗಕ್ಕೆ ತಂದೆ ತಿಪ್ಪೇಶ ಬಲವಾಗಿ ಗುದ್ದಿದ್ದಾನೆ ಎನ್ನಲಾಗಿದೆ. ಇದರಿಂದಾಗಿ ಆ ಮಗು ಮೂರ್ಛೇ ಹೋಗಿದ್ದು ತಕ್ಷಣ ಮಗುವಿನ ತಾಯಿ ಗೌರಮ್ಮ ಆ ಪುಟ್ಟ ಬಾಲಕನಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ಆದರೆ ಆಸ್ಪತ್ರೆಗೆ ಬರುವ ಮಾರ್ಗ ಮಧ್ಯದಲ್ಲೇ ಮಗು ಸಾವನ್ನಪ್ಪಿದೆ.
ಮಗುವಿನ ಸಾವಿನಿಂದಾಗಿ ಕುಟುಂಬದಲ್ಲಿ ಆಕ್ರಂದನ ಮುಗಿಲುಮುಟ್ಟಿದೆ. ಭರಮಸಾಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಗಮನಿಸಿ