ಸುದ್ದಿಬಿಂದು ಬ್ಯೂರೋ
ಕಾರವಾರ : ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಕಾಳಿ ಸೇತುವೆ ಮೇಲಿನಿಂದ ಯುವಕನೋರ್ವ ನದಿಗೆ ಹಾರಿದ್ದು, ಆತನ ಪತ್ತೆಗಾಗಿ ಕಾರ್ಯಚರಣೆ ನಡೆಸಲಾಗುತ್ತಿದೆ.

ನಗರದ ಸೋನಾರವಾಡದ (35) ವರ್ಷದ ಯುವಕ ಸೇತುವೆ ಮೇಲಿಂದ ಕಾಳಿ ನದಿಗೆ ಹಾರಿದ್ದಾನೆ ಎನ್ನಲಾಗಿದೆ. ಇದನ್ನ‌‌ ಗಮನಿಸಿರುವ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಒಂದು ಗಂಟೆಗೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇದೀಗ ಸ್ಥಳದಲ್ಲಿ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿಗಳು ಹಾಗೂ ಕೋಸ್ಟ್ ‌ಗಾರ್ಡ್ ಸಿಬ್ಬಂದಿಗಳು ‌ಸೇರಿ ನದಿಗೆ ಹಾರಿರುವ ಯುವಕ ಪತ್ತೆಗಾಗಿ ಶೋಧ‌ ಕಾರ್ಯ ನಡೆಸುತ್ತಿದ್ದಾರೆ.