ಸುದ್ದಿಬಿಂದು ಬ್ಯೂರೋ
ಕಾರವಾರ : ಇ-ಕೆವೈಸಿಯನ್ನ ಇದೆ ತಿಂಗಳ 31ರೊಳಗೆ ಮಾಡಿಸಬೇಕಾಗಿಲ್ಲವೆಂದು ಉತ್ತರಕನ್ನಡ ಜಿಲ್ಲೆಯ ಆಹಾರ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಇದೇ ತಿಂಗಳ 31ರೊಳಗಾಗಿ ಇ-ಕೆವೈಸಿ ಮಾಡಿಕೊಳ್ಳಬೇಕು ಎನ್ನುವ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಯಿಂದಾಗಿ,ಗ್ಯಾಸ್ ಏಜೆನ್ಸಿ ಕಚೇರಿಯಲ್ಲಿ ಗ್ರಾಹಕರು ಮುತ್ತಿಗೆ ಹಾಕುತ್ತಿದ್ದಾರೆ.ಆದರೆ ಯಾರೂ ಕೂಡ ಈರೀತಿಯಾಗಿ ಗಡಬಿಡಿಯಲ್ಲಿ ಹೋಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಇಲ್ಲ.

ಮುಂದಿನ ದಿನದಲ್ಲಿ ಈರೀತಿ ಗ್ಯಾಸ್ ಏಜೆನ್ಸಿ ಎದುರು ಕೆಲಸ ಕಾರ್ಯವನ್ನೆಲ್ಲಾ ಬಿಟ್ಟು ಸಾಲು ಗಟ್ಟಿ ನಿಲ್ಲುವುದನ್ನ ತಪ್ಪಿಸಲು ಗ್ಯಾಸ್ ಸಿಲೆಂಡರ್ ‌ಮನೆಗಳಿಗೆ ತಲುಪಿಸುವ ಸಂದರ್ಭದಲ್ಲಿ E-kyc ಮಾಡಿಸಲಾಗುವುದು,‌ಇನ್ನೂ ಸಮಸ್ಯೆ ಇದ್ದಲ್ಲಿ ಮಾತ್ರ ಗ್ಯಾಸ್ ಏಜೆನ್ಸಿ ಕಚೇರಿಯಲ್ಲಿ ಇ-ಕೆವೈಸಿ ಮಾಡಲು ತಿಳಿಸಲಾಗಿದೆ.

ಆದರಿಂದ ಡಿಸೆಂಬರ್ 31ರ ಒಳಗಾಗಿ ಇ-ಕೆವೈಸಿ ಮಾಡಿಸಬೇಕು ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಂದತಿಗಳಿಗೆ ಗ್ಯಾಸ್ ಬಳಕೆದಾರರು ಒಳಗಾಗಬಾರದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಾಗಿರುವ ಮಂಜುನಾಥ ‌ರೇವಣಕರ್ ಪ್ರಕಟಣೆ ಹೊರಡಿಸಿದ್ದಾರೆ.