ಸುದ್ದಿಬಿಂದು ಬ್ಯೂರೋ ವರದಿ
Dandeli:ದಾಂಡೇಲಿ : ನಗರದ ಸಂಡೇ ಮಾರ್ಕೆಟ್ ಹತ್ತಿರ ನಾಲ್ಕು ಅಂಗಡಿಗಳ ಸರಣಿ ಕಳ್ಳತನ ನಡೆದಿರುವ ಘಟನೆ ಇಂದು ಗುರುವಾರ ನಸುಕಿನ ವೇಳೆಯಲ್ಲಿ ನಡೆದಿದೆ.

ಸಂಡೆ ಮಾರ್ಕೆಟ್ ಹತ್ತಿರದ ಎಸ್ ಕೆ ಏಜೆನ್ಸಿ, ಚೌಗುಲಾ ಚಿಕನ್ ಸೆಂಟರ್, ಕರ್ನಾಟಕ ಎಗ್ ಸೆಂಟರ್ ಮತ್ತು ಇಂಡಿಯನ್ ಚಿಕನ್ ಸೆಂಟರಿಗೆ ಕಳ್ಳರು ನುಗ್ಗಿದ್ದಾರೆ. ಕರ್ನಾಟಕ ಎಗ್ ಸೆಂಟರ್ ನಿಂದ ನಗದು ರೂ.12,000/- ಮತ್ತು ಇಂಡಿಯನ್ ಚಿಕನ್ ಸೆಂಟರ್ ನಿಂದ ನಗದು ರೂ.7,000/- ಕಳವು ಮಾಡಿರುವ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ.

ಚೌಗುಲಾ ಚಿಕನ್ ಸೆಂಟರ್ ನ ಸಿಸಿ ಕ್ಯಾಮೆರಾವನ್ನು ಮುರಿದು ಹಾಕಿದ್ದಾರೆ. ಉಳಿದಂತೆ ಈ ಎಲ್ಲ ಅಂಗಡಿಗಳಿಂದ ಕಳವಾಗಿರುವ ಬಗ್ಗೆ ನಿಖರ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ. ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಗಮನಿಸಿ