ಸುದ್ದಿಬಿಂದು ಬ್ಯೂರೋ
ಭಟ್ಕಳ :ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ಮುಗುಚಿ ಬಿದ್ದು ಮೀನುಗಾರ ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರ ಕಡಲತೀರದಲ್ಲಿ ನಡೆದಿದೆ.
ಮುರ್ಡೇಶ್ವರದ ಮಾವಳ್ಳಿ ನಿವಾಸಿ ಹೈದರ್ ಅಲಿ (45) ಮೃತ ದುರ್ದೈವಿಯಾಗಿದ್ದಾನೆ.ಬೆಳಿಗ್ಗಿನ ಜಾವ ಕಡಲತೀರದಿಂದ 50 ಮೀಟರ್ ದೂರದಲ್ಲಿ ಮೂವರು ಸೇರಿಕೊಂಡು ಮೀನುಗಾರಿಕೆ ಮಾಡುತ್ತಿದ್ದರು.ಈ ವೇಳೆ ಕಡಲ ಅಲೆ ಅಪ್ಪಳಿಸಿದ ಪರಿಣಾಮ ಹೈದರ್ ಅಲಿ ಇದ್ದ ದೋಣಿ ಮುಗುಚಿ ಬಿದ್ದಿದೆ. ಇದರಲ್ಲಿದ್ದ ಇನ್ನಿಬ್ಬರು ಈಜಿ ದಂಡ ಸೇರಿಕೊಂಡಿದ್ದಾರೆ.
ಅಲೆಗಳ ಹೊಡೆತಕ್ಕೆ ದೋಣಿ ಮಗುಚಿ ನೀರಿಗೆ ಬಿದ್ದಿದ್ದ ಹೈದರ್ ಅವರನ್ನ ಹತ್ತಿರದಲ್ಲಿದ್ದ ಬೋಟ್‌ನವರು ರಕ್ಷಣೆ ಮಾಡಿ RNS ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ತೀವ್ರ ಅಸ್ವಸ್ಥಗೊಂಡಿದ್ದರಿಂದ ಹೈದರ್ ಮೃತಪಟ್ಟಿದ್ದಾರೆ. ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..
ಇದನ್ನೂ ಓದಿ