ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಉತ್ತರ ಕನ್ನಡ ಜಿಲ್ಲಾದ್ಯಂತ ಕೆಂಪುಕಲ್ಲು, ಉಸುಕು ಸಿಗದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಈ ನಡುವೆ ತಾಲೂಕಿನ ಮಿರ್ಜಾನ ಭಾಗದಲ್ಲಿ ಮಾತ್ರ ರಾಜಾರೋಷವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದು, ಜಿಲ್ಲೆಯಲ್ಲಿ ಕೆಂಪುಕಲ್ಲು ಗಣಿಗಾರಿಕೆ ನಡೆಸಲು ಅನುಮತಿ‌ ಕೊಟ್ಟವರು ಯಾರು ಎಂದು ಪ್ರಶ್ನೆ ಮಾಡುವಂತಾಗಿದೆ.

ಈ ಭಾಗದಲ್ಲಿ ಯಾವ ಜನಪ್ರತಿನಿಧಿಗಳ ಆಶಿರ್ವಾದವೋ ಇಲ್ಲ ಅಧಿಕಾರಿಯ ಆರ್ಶಿವಾದವೋ ಗೊತ್ತಿಲ್ಲ.ಸರಿ ಸುಮಾರು 30ರಿಂದ 50 ಏಕರೆ ಪ್ರದೇಶದಲ್ಲಿ ನಿರಂತರವಾಗಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎನ್ನುವ ಬಗ್ಗೆ ಸಾರ್ವಜನಿಕರಿಂದ ಗಂಭೀರವಾದ ಆರೋಪವಿದೆ.ಜಿಲ್ಲೆಯ ನಾನಾ ಭಾಗದಲ್ಲಿ ದಾಳಿ ನಡೆಸಿ ಅಕ್ರಮ ಕಲ್ಲುಗಣಿಗಾರಿಕೆ ಹಾಗೂ ಮರಳು ಸಾಗಾಟಕ್ಕೆ ತಡೆ ಹಿಡಿಯುತ್ತಿರುವ ಗಣಿ ಅಧಿಕಾರಿಗಳು ಕುಮಟಾ ತಾಲೂಕಿನ ಮಿರ್ಜಾನ ಭಾಗದಲ್ಲಿ ನಡೆಸಲಾಗುತ್ತಿರುವ ಈ ಕೆಂಪು ಕಲ್ಲುಗಣಿಗಾರಿಗೆ ಮೇಲೆ ದಾಳಿ ನಡೆಸಲು ಸಾಧ್ಯವಾಗದೆ ಇರುವುವದು ಹತ್ತಾರು ಅನುಮಾನಕ್ಕೆ ಕಾರಣವಾಗಿರುವುದು ಸುಳ್ಳಲ್ಲ..

ಈ ಮಿರ್ಜಾನದಲ್ಲಿ ಕೆಂಪು ಕಲ್ಲು ಗಣಿಗಾರಿಕೆ ನಡೆಸಲು ಮುಕ್ತ-ಮುಕ್ತ ಅವಕಾಶ ನೀಡಿರುವ ಜನಪ್ರತಿನಿಧಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಜಿಲ್ಲೆಯ ಉಳಿದ ಭಾಗದಲ್ಲಿ ಕೆಂಪು ಕಲ್ಲು ಗಣಿಗಾರಿಕೆ ನಡೆಸಲು ಅಡ್ಡಿ ಪಡಿಸಲು ಪ್ರಮುಖ ಕಾರಣವಾದರೂ ಏನು ಎಂಬುದು ಅರ್ಥೈಸಿಕೊಳ್ಳುವುದು ಕಷ್ಟವಾಗಿದೆ.

ಗಮನಿಸಿ