ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ:ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕರಾಗಿರುವ ಸತೀಶ್ ಸೈಲ್ ಅವರು ಇಂದು ಅಂಕೋಲಾ ಭಾಗದ ಕಾಂಗ್ರೇಸ್ ಮುಖಂಡರ ಮನೆಗೆ ಭೇಟಿ ನೀಡಿದರು.
ಕಾಂಗ್ರೇಸ್ ಹಿರಿಯ ಮುಖಂಡರಾದ ರಮಾನಂದ ನಾಯಕ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಉದಯ ಡೊಂಗ ನಾಯ್ಕ, ವಸಂತ ನಾಯ್ಕ ಅಂಕೋಲಾ ತಾಲೂಕಿನ ನಾಮಧಾರಿ ಸಂಘದ ಅಧ್ಯಕ್ಷ ಎಂ ಪಿ ನಾಯ್ಕ ಹಾಗೂ ಉಪೇಂದ್ರ ನಾಯ್ಕ, ಅವರ ಮನೆಗೆ ಭೇಟಿ ನೀಡಿದರು. ಉಪೇಂದ್ರ ನಾಯ್ಕ ಅವರು ಬೆಂಗಳೂರಿನಲ್ಲಿ ಇರುವ ಕಾರಣ ಅವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದರು.
ಕಾಂಗ್ರೇಸ್ ಮುಖಂಡರ ಮನೆಗೆ ಪ್ರತ್ಯೇಕವಾಗಿ ಭೇಟಿ ನೀಡಿದ ಶಾಸಕ ಸತೀಶ ಸೈಲ್ ಅವರು ಕೆಲ ಸಮಯಗಳ ಕಾಲ ಮಾತುಕತೆ ನಡೆಸಿದ್ದರು.ಕಾಂಗ್ರೇಸ್‌ನ ಹಿರಿಯ ಮುಖಂಡರಾ ರಮಾನಂದ ನಾಯಕ ಅವರೊಂದಿಗೆ ಅರ್ಧಗಂಟೆಗಳ ಕಾಲ ಮಾತುಕತೆ ನಡೆಸಿ ಶಾಸಕರು ಅವರ ಯೋಗಕ್ಷೇಮ ವಿಚಾರಿಸಿದರು..
ಇದನ್ನೂ ಓದಿ