ಕಾರವಾರ : ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಯಾರಿಗೆ ಟಿಕೇಟ್ ಸಿಗಬಹುದು ಎನ್ನುವ ಚರ್ಚೆ ಜೋರಾಗಿ ನಡಿತ್ತಾ ಇದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಕಾಂಗ್ರೆಸ್ ಮುಖಂಡ ಮಂಜುನಾಥ ನಾಯ್ಕ ಉತ್ತಮವಾಗಿರುವ ಅಭ್ಯರ್ಥಿಯನ್ನೆ ಪಕ್ಷ ಕಣಕ್ಕಿಳಿಸಲಿದೆ ಎನ್ನುವ ಭರವಸೆ ನೀಡಿದ್ದಾರೆ.
ಕುಮಟಾ-ಹೊನ್ನಾರವ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ನಿಂದ ಈಗಾಗಲೇ 10ಕ್ಕೂ ಹೆಚ್ಚು ಆಕಾಂಕ್ಷಿಗಳು ಟಿಕೇಟ್ ಗಾಗಿ ಅರ್ಜಿ ಸಲ್ಲಿದ್ದಾರೆ. ಇದರಲ್ಲಿ ಕೆಲವರು ಕ್ಷೇತ್ರದ ತುಂಬಾ ಓಡಾಟ ನಡೆಸಿ ಕ್ಷೇತ್ರದಲ್ಲಿ ನಡೆಯುವ ಕ್ರೀಡೆ,,ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಸಹಾಯ ನೀಡುತ್ತಾ ಪಕ್ಷ ಸಂಘಟನೆ ನಿರಂತರಾಗಿದ್ದಾರೆ.
ಆದರೆ ಈ ನಡುವೆ ಸದ್ಯದ ರಾಜಕೀಯ ಬೆಳವಣಿಗೆಯಲ್ಲಿ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ ಅವರ ಪುತ್ರ ನಿವೇದಿತ ಆಳ್ವ ಅವರಿಗೆ ಕುಮಟಾ ಕ್ಷೇತ್ರದಿಂದ ಕಣಕ್ಕಿಳಿಸಲಾಗುತ್ತದೆ ಎನ್ನುವ ಚರ್ಚೆಗಳು ಕಳೆದ ಕೆಲ ದಿನಗಳಿಂದ ಹರಿದಾಡುತ್ರಿದೆ. ಇದರಿಂದ ಕ್ಷೇತ್ರದಲ್ಲೆ ಉಳಿದು ಪಕ್ಷ ಸಂಘಟನೆಗೆ ದುಡಿಯುತ್ತಿರುವ ಆಕಾಂಕ್ಷಿಗಳಲ್ಲಿ ತಕ್ಕಮಟ್ಟಿಗೆ ತಳಮಳ ಉಂಟಾಗಿದೆ..
ಆದರೆ ಇವೆಲ್ಲದರ ಬಗ್ಗೆ ಪ್ರತಿಕ್ರಿಯಿಸಿರೋ ಕಾಂಗ್ರೆಸ್ ಮುಖಂಡ ಮಂಜುನಾಥ ನಾಯ್ಕ. ಮಾರ್ಗರೇಟ್ ಆಳ್ವ ಅವರು ಹಿರಿಯ ರಾಜಕಾರಣಿ, ಅವರಿಗೆ ವ್ಯಕ್ತಿಗಳಿಂದ ಪಕ್ಷ ಮುಖ್ಯ ಎಂದು ನಂಬಿದ್ದವರು ಅವರು. ಇನ್ನೂ ಅವರ ಮಹ ನಿವೇದಿತ ಆಳ್ಬ ಸಹ ಉತ್ತಮ ಅನುಭವಿಗಳು. ನಮ್ಮಕ್ಷೇತ್ರದಲ್ಲಿ ಬಂದು ವಾತಾವರಣವನ್ನ ಕಲುಷಿತ ಮಾಡತ್ತಾರೆ ಎನ್ನುವ ಭರವಸೆ ಇಲ್ಲ.
ಬಿಸಿಸಿ,ಡಿಸಿಯಲ್ಲಿ ತಾನು ಆಕಾಂಕ್ಷಿ ಅಂತಾ ಆಳ್ವ ಅವರು ಹೇಳಿದ್ದು ಇಲ್ಲ. ಹೀಗಾಗಿ ಇದರಿಂದ ಯಾರು ಕೂಡ ಗೊಂದಲಕ್ಕೆ ಒಳಗಾಗೋದು ಬೇಡ.ಅವರು ಕ್ಷೇತ್ರದಲ್ಲಿ ಮನೆ ಮಾಡಿಕೊಂಡಿರೋ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಂಜುನಾಥ ನಾಯ್ಕ, ಅವರು ಮನೆ ಮಾಡಿಕೊಂಡ ಮಾತ್ರಕ್ಕೆ ಅಭ್ಯರ್ಥಿ ಅಂತಾ ಹೇಳೋದಕ್ಕೆ ಆಗಲ್ಲ. ಪಕ್ಷದ ಅಭ್ಯರ್ಥಿ ಆಗುವವರ ಪರ ಪ್ರಚಾರ ನಡೆಸುವ ಉದ್ದೇಶದಿಂದಲ್ಲೂ ಮನೆ ಮಾಡಿರಬಹುದು.
ಮಾರ್ಗರೇಟ್ ಆಳ್ವ ಮೇಡಂ ಅವರು ಸಹ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆಂದು ಹಂಬಲಿಸುತ್ತಿರುವವರು. ಅವರಲ್ಲಾ ಹಾಗೆ ಮಾಡಲಿದ್ದಾರೆ ಅನ್ನೋಂದು ಪಕ್ಷದಲ್ಲಿ ಯಾರಿಗೂ ಇಲ್ಲ..