suddibindu.in
ದಾಂಡೇಲಿ : ನಗರದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ನಗರದ ಕೆ.ಸಿ ವೃತ್ತದ ಸಮೀಪದಲ್ಲಿ ಮರವೊಂದು ಧರೆಗುರಳಿ ಎರಡು ಕಾರುಗಳ ಮೇಲೆ ಬಿದ್ದು ಅಪಾರ ಪ್ರಮಾಣದಲ್ಲಿ ಹಾನಿಯಾಗಿರುವ ಘಟನೆ ಇಂದು ನಡೆದಿದೆ..

ರಸ್ತೆ ಬದಿಯಲ್ಲಿ ನಿಂತಿದ್ದ ಕೆಎ 63 ಎನ್ 1725 ಮತ್ತು ಕೆಎ 25 ಎಂ. ಸಿ 9270ಸಂಖ್ಯೆಯ ಎರಡು ಕಾರುಗಳ ಮೇಲೆ ಬೃಹತ್ ಗಾತ್ರದ ಮರ ಬಿದ್ದು,ಎರಡು ಕಾರುಗಳು ಹಾನಿಯಾಗಿದೆ.ಕಾರಿನಲ್ಲಿ ಯಾರು ಇಲ್ಲದೆ ಇರುವುದರಿಂದ ಅದೃಷ್ಟವಶಾತ್ ಪಾರಾಗಿದ್ದಾರೆ‌.ಸ್ಥಳೀಯರು ಹಾಗೂ ಸಾರ್ವಜನಿಕರರು ಕಾರಗಳ ಮೇಲೆ ಬಿದ್ದ ಮರಗಳನ್ನ ತೆರವು ಮಾಡಿದ್ದಾರೆ.