suddibindu.in
Dandeli: ದಾಂಡೇಲಿ : ಕಳೆದೆರಡು ದಿನದ ಹಿಂದೆ ವಾಹನ ಅಪಘಾತಕ್ಕೊಳಗಾಗಿ ಗಂಭೀರ ಗಾಯಗೊಂಡು ಜೀವನ್ಮರಣ ಹೋರಾಟದಲ್ಲಿದ್ದ ಗೋಮಾತೆಯೊಂದನ್ನು ಸ್ಥಳೀಯ ಗೋಪ್ರೇಮಿಗಳು ರಕ್ಷಿಸಿರುವ ಮಾನವೀಯ ಘಟನೆ ದಾಂಡೇಲಿ ನಗರದ ಲೆನಿನ್ ರಸ್ತೆಯಲ್ಲಿ ನಡೆದಿದೆ

ಲೆನಿನ್ ರಸ್ತೆಯಲ್ಲಿರುವ ಯುವ ಸಮಾಜ ಸೇವಕ ಮಂಜುನಾಥ್ ಅವರ ಮಂಜು ಆರ್ಟ್ಸ್ ಮಳಿಗೆಯ ಎದುರುಗಡೆ ಅಪಘಾತಕ್ಕೆಡಾಗಿ ಗೋಮಾತೆಯೆಂದು ಸಾವು ಬದುಕಿನ ನಡುವೆ ಒದ್ದಾಡುತ್ತಿತ್ತು. ತೀವ್ರ ಒದ್ದಾಡುತ್ತಿದ್ದ ಗೋಮಾತೆಗೆ ಸಾಧ್ಯವಾದಷ್ಟು ಚಿಕಿತ್ಸೆಯನ್ನು ನೀಡಿ ಆಹಾರವನ್ನು ಒದಗಿಸಿ,ಅದರ ಆರೈಕೆಯನ್ನು ಮಾಡಿ ಸ್ಥಳಕ್ಕೆ ಪಶು ವೈದ್ಯರನ್ನು ಕರೆಸಿ ಅವರಿಂದ ಚಿಕಿತ್ಸೆಯನ್ನು ಕೊಡಿಸಿ, ಗೋಮಾತೆಯ ಜೀವವನ್ನು ವಕೀಲರಾದ ಆರ್.ವಿ.ಗಡೆಪ್ಪನವರ್ ಹಾಗೂ ಸ್ಥಳೀಯ ಗೋಪ್ರೇಮಿಗಳಾದ ನಮನ್ ಶೆಟ್ಟಿ, ಮಂಜು ಆರ್ಟ್ಸ್ ಇದರ ಮಂಜುನಾಥ್, ಶ್ರೀಕಾಂತ್ ಮಡಿವಾಳ, ಅನಿಲ್ ಬಿಡಾಡ್ ಮೊದಲಾದವರು ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ
- ರೇಬೀಸ್ ಹೋರಿಯಿಂದ ರಂಪಾಟ: ವ್ಯಕ್ತಿಗೆ ತಿವಿತ
- 85 ಸಾವಿರ ನಗದು, ಚಿನ್ನ ಕದ್ದ ಆರೋಪಿ ಬಂಧನ
- ಅರ್ಪಿತಾಗೆ ವಿಟಿಯುನಿಂದ ಡಾಕ್ಟರೇಟ್
ಈ ಗೋಮಾತೆಯ ವಾರಿಸುದಾರರು ಯಾರೆಂದು ತಿಳಿಯದ ಕಾರಣ, ವಾರಿಸುದಾರರು ಸಿಗುವವರೆಗೆ ಇದೇ ಗೋ ಪ್ರೇಮಿಗಳ ತಂಡ ಅದರ ಆರೈಕೆಗೆ ಮುಂದಾಗಲಿದೆ.