suddibindu.in
Kumta:ಕುಮಟಾ:
ತಾಲೂಕಿನಾದ್ಯಂತ ನಿನ್ನೆಯಿಂದ‌ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಇಂದು ಕೂಡ ವರುನಾರ್ಭಟ ಮುಂದುವರೆದಿದೆ. ಭಾರಿ ಮಳೆಯಿಂದಾಗಿ ಪಟ್ಟಣದ ಪುರಸಭಾ ವ್ಯಾಪ್ತಿಯ ಶಶಿಹಿತ್ಲ ಭಾಗದಲ್ಲಿ ಹತ್ತಕ್ಕೂ ಅಧಿಕ‌ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ಥವಾಗಿದೆ. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಅನೇಕ ಕುಟುಂಬಗಳು ಆತಂಕದಲ್ಲಿ ಕಾಲ ಕಳೆಯುವ ಸ್ಥಿತಿ ಎದುರಾಗಿದೆ. ಇಂದು ಒಂದೇ‌ ದಿನಕ್ಕೆ ಕುಮಟಾದಲ್ಲಿ 27.5ಮಿ ಮಿ ಮಳೆ ದಾಖಲಾಗಿದೆ. ಶಶಿಹಿತಲ್ಲ ಭಾಗದಲ್ಲಿ ರಾಜಕಾಲುವೆಗಳು ಮುಚ್ಚಿರುವುದೆ ಮನೆಗಳಿಗೆ ನೀರು ನುಗ್ಗಲು ಕಾರಣವಾಗಿದೆ. ಸ್ಥಳಕ್ಕೆ ತಹಶೀಲ್ದಾರ್ ಪ್ರವೀಣ ಕರಾಂಡೆ, ಪುರಸಭಾ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ಗ್ರೇಡ್-2 ತಹಶೀಲ್ದಾರ್ ಸತೀಶ ಗೌಡ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳೆ ಮುಂದುವರಿದಲ್ಲಿ ಜನರನ್ನು ಸ್ಥಳಾಂತರ ಮಾಡುವ ಸಾಧ್ಯತೆ ಇದೆ.

Tourist bus: ಪ್ರವಾಸಿಗರ ಬಸ್ ಪಲ್ಟಿ : ಹಲವರಿಗೆ ಗಾಯ
ಶಿರಸಿ :
ತಾಲೂಕಿನ ಮಂಜುಗುಣಿ ಹತ್ತಿರ ಪ್ರವಾಸಿ ಬಸ್ ಪಲ್ಟಿಯಾಗಿದ್ದು, ಅದರಲ್ಲಿದ್ದ ಪ್ರವಾಸಿಗರ ಪೈಕಿ 12 ಜನ ಪ್ರವಾಸಿಗರು ಗಾಯಗೊಂಡ ಘಟನೆ ನಡೆದಿದೆ. ತಕ್ಷಣ ಅವರನ್ನು ಮತ್ತೊಂದು ಪ್ರವಾಸಿ ವಾಹನದಲ್ಲಿ ಶಿರಸಿ ಟಿ ಎಸ್ ಎಸ್ ಆಸ್ಪತ್ರೆಗೆ ದಾಖಲಿಸಿ,‌ಚಿಕಿತ್ಸೆ ಕೊಡಲಾಗುತ್ತಿದೆ. ಮಳೆ ಬಿದ್ದ ಕಾರಣ ರಸ್ತೆ ಪಕ್ಕ ನೆಲ ಹಸಿಯಾಗಿತ್ತು.‌ ಪ್ರವಾಸಿ ವಾಹನ ರಸ್ತೆ ಬಿಟ್ಟು ಪಕ್ಕಕ್ಕೆ ಸರಿದಾಗ ನೆಲದಲ್ಲಿ ಹುಗಿದು ಪಲ್ಟಿಯಾಯಿತು ಎನ್ನಲಾಗಿದೆ. ಶಿರಸಿ ಗ್ರಾಮೀಣ‌ ಪೋಲೀಸರು ಸ್ಥಳಕ್ಕೆ ಧಾವಿಸಿ ಚಿಕಿತ್ಸೆ ಕೊಡಿಸಿದ್ದಾರೆ.ಬಳ್ಳಾರಿ ಯಿಂದ ಇಡಗುಂಜಿಗೆ ಪ್ರವಾಸಿಗರು ಸ್ವಂತ ಎರಡು ಮಿನಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಕಾರವಾರದಲ್ಲಿ ಅಕ್ರಮ‌ ಕಟ್ಟಡ ಹೈಕೋರ್ಟ್( High Court)ನೋಟಿಸ್
Karwar;ಕಾರವಾರ
: ಇಲ್ಲಿನ ಕಾಜುಬಾಗ ಗುರುಮಠ ಎದುರಿಗೆ ಇರುವ ಕಮರ್ಷಿಯಲ್ ಅಂಡ್ ರೆಸಿಡೆನ್ಸಿಯಲ್ ಬಿಲ್ಡಿಂಗ್ ಕಟ್ಟಡಕ್ಕೆ ಸಂಬಂಧಿಸಿದಂತೆ ಧಾರವಾಡದ ಹೈಕೋರ್ಟ್ ಪೀಠವು ಕಾರವಾರದ ನಗರಸಭೆ, ಕೆಡಿಎ ಹಾಗೂ ಹೆಸ್ಕಾಂ ಅಧಿಕಾರಿಗಳಿಗೆ ನೋಟಿಸ್‌ ನೀಡಿದೆ.ಈ ಕಮರ್ಷಿಯಲ್ ಮತ್ತು ರೆಸಿಡೆನ್ಸಿಯಲ್ ಬಿಲ್ಡಿಂಗ್ ಅಕ್ರಮವಾಗಿದೆ ಎಂದು ನಗರಸಭೆ ಮಾಜಿ ಸದಸ್ಯ ಸತೀಶ ಕೊಳಂಬಕ‌ರ್ ಅವರು ನಗರಸಭೆಗೆ ದೂರು ನೀಡಿದ್ದರು. ಕಟ್ಟಡ ನಿರ್ಮಾಣದಲ್ಲಿ ಕೆಲ ಅಕ್ರಮ ಆಗಿರುವ ಬಗ್ಗೆ ನಗರಸಭೆಯವರು ಒಪ್ಪಿಕೊಂಡಿದ್ದರೂ, ನಗರಸಭೆಯವರು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವ ಕಾರಣಕ್ಕೆ ಸತೀಶ ಕೋಳಂಬಕರ್ ಧಾರವಾಡ ಹೈಕೋರ್ಟ್ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಸಿ ಈ ಬಿಲ್ಡಿಂಗ್‌ಗೆ ಆಕ್ಯುಪೆನ್ಸಿ ಸರ್ಟಿಫಿಕೇಟ್ ಮತ್ತು ವಿದ್ಯುತ್ ಸಂಪರ್ಕ ನೀಡದಂತೆ ಕೋರಿದ್ದರು.ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಪೀಠ ಕಾರವಾರ ನಗರಸಭೆ, ಕೆಡಿಎ ಹಾಗು ಹೆಸ್ಕಾಂ ಅಧಿಕಾರಿಗಳಿಗೆ ನೋಟಿಸ್‌ ನೀಡಿದೆ ಎಂದು ಸತೀಶ ಕೊಳಂಬಕರ ಪರ ವಕೀಲರು ತಿಳಿಸಿದ್ದಾರೆ.

ಇದನ್ನೂ ಓದಿ

ಜಿಲ್ಲೆಯಲ್ಲಿ ಇನ್ನೂ ಮೂರುದಿನ ಭಾರೀ ಮಳೆ

ಕಾರವಾರ :ಉತ್ತರಕನ್ನಡ(uttara Kannada) ಜಿಲ್ಲೆಯಲ್ಲಿ ಇಂದು ಕೂಡ ವರುಣನ ಆರ್ಭಟ ಜೋರಾಗಿದ್ದು ಜನಜೀವನ ಅಸ್ತವ್ಯವಾಗಿದೆ. ಜಿಲ್ಲೆಯ ಕರಾವಳಿಯಲ್ಲಿ ಅತೀ ಹೆಚ್ಚು ಮಳೆಯಾಗಿದೆ. ಇನ್ನೂ ಮೂರು ದಿನಗಳ ಕಾಲ‌ ಜಿಲ್ಲಾದ್ಯಂತ ಭರ್ಜರಿ ಮಳೆಯಾಗಲಿದೆ.ಜೂನ್ 11ರ ವರೆಗೆ ಅಧಿಕ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ.ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುವ ಪರಿಸ್ಥಿತಿ ಉಂಟಾಗಿದೆ. ಭಾರೀ ಮಳೆಗೆ ಹೆದ್ದಾರಿಗಳಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಕೆಲವು ಕಡೆಯಲ್ಲಿ ರಸ್ತೆಗಳ ಮೇಲ ಕೂಡ ನೀರು ತುಂಬಿ ಹರಿಯುತ್ತಿದ್ದೆ.ಕುಮಟಾದಲ್ಲಿ ಅತೀ ಹೆಚ್ಚು ಮಳೆಯಾಗಿದೆ. ನಿನ್ನಿಯಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ನಿನ್ನೆಯಿಂದ ಇದುವರೆಗೆ ಕುಮಟಾ ತಾಲೂಕು ಒಂದರಲ್ಲೆ ಅತೀ ಹೆಚ್ಚು 52.9 ಎಂಎಂ ಮಳೆ ದಾಖಲಾಗಿದೆ.

ಶಿರಸಿಯಲ್ಲಿ ಭಾರೀ ಮಳೆ : ರಸ್ತೆಗಳು ಜಲಾವೃತ :Sirsi heavy rain

ಶಿರಸಿ: ತಾಲೂಕಿನಾದ್ಯಂತ ಬಿಡುವಿಲ್ಲದೇ ಸುರಿಯುತ್ತಿರುವ ಮಳೆ.ತಗ್ಗು ಪ್ರದೇಶದಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆ ಉಂಟಾಗಿದೆ.ದುಂಡಶಿ ನಗರದಲ್ಲಿ ಕಾರು ಸಹ ಹೋಗದ ಪರಿಸ್ಥಿತಿ. ಇದರಂತೆ ಇನ್ನೂ ಹಲವಾರು ಪ್ರದೇಶದಲ್ಲಿ ನೀರು ನಿಂತು ಸಂಚಾರ ಅಸ್ತವ್ತಸ್ಥ ಉಂಟಾಗಿದೆ.