ಸುದ್ದಿಬಿಂದು ಬ್ಯೂರೋ
ಕೋಲಾರ : ಕಾಂಗ್ರೆಸ್(Congress)ಬೆಂಬಲಿತ ಗ್ರಾಮ ಪಂಚಾಯತ ಸದಸ್ಯನನ್ನ ರಸ್ತೆಯಲ್ಲಿ ತಡೆದು ಬರ್ಬರವಾಗಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕೋಲಾರ(Kolar)ಜಿಲ್ಲೆಯ ಮಾಲೂರು ತಾಲೂಕಿನ ಕೋಡಿಹಳ್ಳಿ ಕ್ರಾಸ್ ಬಳಿ ನಡೆದಿದೆ.

ಅನಿಲ್ (40)ಎಂಬಾತನೆ ಕೊಲೆಯಾಗಿರುವ ಗ್ರಾಮ ಪಂಚಾಯತಿ ಸದಸ್ಯನಾಗಿದ್ದಾನೆ. ಕೊಲೆಯಾಗಿರುವ ಗ್ರಾಮ ಪಂಚಾಯತ ಸದಸ್ಯ(panchayat member’s murder)ಅನೀಲ್ ಕೊಲೆಗೆ ನಿಖರವಾಗಿರುವ ಕಾರಣ ತಿಳಿದು ಬಂದಿಲ್ಲ.

ಕೊಲೆ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಕಾರ್ಯಚರಣೆ ಮುಂದುವರೆಸಿದ್ದು, ಕೊಲೆಯಾಗಿರುವ ಕುರಿತು ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.