ಸುದ್ದಿಬಿಂದು ಬ್ಯೂರೋ
ಮಂಗಳೂರು :ಈಗಾಗಲೇ ಕ್ರಿಕೆಟ್ ಬೆಟ್ಟಿಂಗ್ ರೀತಿಯಲ್ಲೆ.ಜೂಜಾಟ ಯಾವ ರೀತಿಯಲ್ಲಿ ನಡಿತ್ತಾ ಇದೆ ಎನ್ನುವುದನ್ನ ಕೂಡ ನೋಡತ್ತಾ ಇದ್ದೇವೆ.ಅದೆ ರೀತಿಯಾಗಿ ಕೋಳಿ ಅಂಕ ಸಹ ಜೂಜಾಟವಾಗಿ ಮಾರ್ಪಾಡಾಗಿದೆ. ಇದೀಗ ಕೋಳಿ ಅಂಕದಲ್ಲಿ ಲಕ್ಷ ಲಕ್ಷ ಬೆಟ್ಟಿಂಗ್ ನಡಿತ್ತಾ ಇದೆ.ಇದಕ್ಕೆ ಕಡಿವಾಣ ಹಾಕಲು ಸರಕಾರ ಮುಂದಾಗಿದೆ.
ಕೋಳಿ ಅಂಕ ನಡೆಸಬಾರದು ಎನ್ನುವ ನಿಷೇಧ ಇದ್ದರೂ ಸಹ ಸಂಪ್ರದಾಯದ ಹೆಸರಲ್ಲಿ ಕೋಳಿ ಅಂಕ ನಡೆಸಲಾಗುತ್ತಿತ್ತು. ರಾಜ್ಯದ ನಾನಾ ಕಡೆ ಇದನ್ನ ನಡೆಸಲಾಗುತ್ತಿತ್ತು. ಆದರೆ ಪೊಲೀಸ್ ಇಲಾಖೆ ಹೊಸ ಆದೇಶದಿಂದ ಸಂಪ್ರದಾಯದ ಹೆಸರಲ್ಲೂ ಕೂಡ ಕೋಳಿ ಅಂಕ ನಡೆಸುವಂತಿಲ್ಲ.ಈಗಾಗಳೆ ದಕ್ಷಿಣ ಕನ್ನಡದಲ್ಲಿ ಇದು ಜಾರಿಗೆ ಬಂದಿದ್ದು, ಕೋಳಿ ಅಂಕ ನಡೆಸದಂತೆ ಮಂಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಕೋಳಿ ಅಂಕ ಆಯೋಜಕ್ಕೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಸಂಪ್ರದಾಯದ ಹೆಸರಿನಲ್ಲಿ ಕೋಳಿ ಅಂಕವನ್ನ ನಡೆಸಲಾಗುತ್ತಿದೆ. ಅದರಲ್ಲೂ ಕರಾವಳಿ ಜಿಲ್ಲೆಯಲ್ಲಿ ಕೋಳಿ ಅಂಕ ಜೋರಾಗಿಯೇ ನಡೆಸಿಕೊಂಡು ಬರಲಾಗುತ್ತಿದೆ.ರಾಜ್ಯದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕೋಳಿ ಅಂಕ ಜುಜಾಟಕ್ಕೆ ಕಡಿವಾಣ ಹಾಕುವಂತೆ ಕರ್ನಾಟಕ ಸರಕಾರ ಪೊಲೀಸ್ ಇಲಾಖೆಯ ಡೈರೆಕ್ಟರ್ ಜನರಲ್ ಮತ್ತು ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ಕಛೇರಿಯಿಂದ ರಾಜ್ಯದ ಎಲ್ಲಾ ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ಅಧೀಕ್ಷರಿಗೆ ಪ್ರಕಟಣೆಯನ್ನು ಹೊರಡಿಸಿದೆ.
ಕ್ರಿಕೆಟ್, ಇಸ್ಪೀಟ್ ಜೂಜಾಟಗಳಲ್ಲಿ ಲಕ್ಷ ಬೆಟ್ಟಿಂಗ್ ನಡೆಯುವುದು ಎಲ್ಲರಿಗೂ ಗೊತ್ತಿದೆ. ಆದರೆ, ಇದನ್ನೂ ಮೀರಿಸುವಂತೆ ಕೋಳಿ ಅಂಕಗಳಲ್ಲೂ ಪ್ರತಿನಿತ್ಯವೂ ಕೋಟ್ಯಂತರ ರೂ. ಜೂಜು ನಡೆಯುತ್ತಿದೆ. ನಿಷೇಧವಿದ್ದರೂ ಕೆಲ ಜಿಲ್ಲೆಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಈ ಕೋಳಿಗಳ ಕಾದಾಟಕ್ಕೆ (cockfight:) ಕಡಿವಾಣ. ಹಾಕಲು ರಾಜ್ಯ ಪೊಲೀಸ್ ಇಲಾಖೆ ಸಜ್ಜಾಗಿದೆ.
ರಾಷ್ಟ್ರೀಯವಾದಿ ಲಳ ಪರಿಸರ ಸಂರಕ್ಷಣಾ ಒಕ್ಕೂಟದ ಮನವಿ ಮೇರೆಗೆ ರಾಜ್ಯದಲ್ಲಿ ಪ್ರಿವೆನ್ಮನ್ ಆಫ್ ಕ್ರೂಯಲ್ಟಿ ಟು ಅನಿಮಲ್ ಕಾಯ್ದೆ-1960 ಅನ್ನು ಕಡ್ಡಾಯವಾಗಿ ಪಾಲಿಸುವ ಜೊತೆಗೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವಂತೆ ಆದೇಶ ಹೊರಡಿಸಿದ್ದಾರೆ. ಕಾಯ್ದೆಯ ಕಲಂ 11ರ ಪ್ರಕಾರ ಕೋಳಿ ಪಂದ್ಯ ಆಯೋಜನೆ ಅಪರಾಧ. ಕೆಲ ಜಿಲ್ಲೆಗಳಲ್ಲಿ ಹಗಲಿರುಳು ಕೋಳಿ ಅಂಕಗಳು (cockfight:) ನಡೆಯುತ್ತಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಎಲ್ಲಾ ಪೊಲೀಸ್ ಆಯುಕ್ತರು, ಐಜಿಪಿಗಳು ಹಾಗೂ ಜಿಲ್ಲಾ ಎಸ್ಪಿಗಳಿಗೆ ಕಟ್ಟಾಜ್ಞೆ ಹೊರಡಿಸಿದ್ದಾರೆ.