ಇಂದಿನ ಪಂಚಾಂಗ
ಸಂವತ್ಸರ: ಶೋಭನಕೃತ್
ಆಯನ: ಉತ್ತರಾಯಣ
ಮಾ.ನಿ.: ಶ್ರೀ ಕಮಲಾ-ಮಾಧವ
ಋತು: ಶಿಶಿರ
ಮಾಸ: ಮಾಘ
ಪಕ್ಷ: ಶುಕ್ಲ
ತಿಥಿ: ತೃತೀಯಾ (ರಾ 10.32)
ವಾಸರ: ಇಂದು (ಸೋಮ)
ನಕ್ಷತ್ರ: ಪೂರ್ವಾಭಾದ್ರ (ರಾ 7.34)
ಯೋಗ: ಶಿವ
ಕರಣ: ತೈತಲೆ
9&ge: 3 7.30-9.00
ಸೂರ್ಯೋದಯ: ಬೆ 6.55
ಸೂರ್ಯಾಸ್ತ: ಸಂ 6.28

ಈ ದಿನದ ಅದೃಷ್ಟ ಸಂಖ್ಯೆ : 5,4.1,7

ಮೇಷ ರಾಶಿ : ಏಕಾಂಗಿಯಾಗಿ ಸಮಯವನ್ನು ಕಳೆಯಲಿದ್ದೀರಿ. ಹಲವು ಬಗೆಯ ಆತಂಕಗಳು ನಿಮ್ಮಿಂದ ದೂರವಾಗಲಿದೆ. ಮಾನಸಿಕವಾಗಿ, ದೈಹಿಕವಾಗಿ ವಿಶ್ರಾಂತಿ ಪಡೆಯಬೇಕು ಎಂದೆನಿಸಿ,ಮಕ್ಕಳ ಭವಿಷ್ಯದ ಸಲುವಾಗಿ ಯೋಜನೆಯೊಂದನ್ನು ರೂಪಿಸಲಿದ್ದೀರಿ.ಬಂಧುಗಳು, ಸ್ನೇಹಿತರ ಅಗತ್ಯಗಳಿಗೆ ಸ್ಪಂದಿಸಲಿದ್ದೀರಿ.
ಅದೃಷ್ಟ ಸಂಖ್ಯೆ :, 9 ಅದೃಷ್ಟ ಬಣ್ಣ : ಕೆಂಪು

ವೃಷಭ ರಾಶಿ : ವಾಹನ ಚಾಲನೆಯನ್ನು ಮಾಡಬೇಡಿ. ಅತಿಯಾದ ಸಿಹಿ ಪದಾರ್ಥ ಸೇವನೆ ಬೇಡ.ಹೊಸ ಪಾರ್ಟನರ್ ಗಳನ್ನು ಸೇರಿಸಿಕೊಂಡು ವ್ಯವಹಾರ ಮಾಡಬೇಕು ಎಂಬ ಆಲೋಚನೆ ಮೂಡುತ್ತದೆ. ಸ್ವಂತ ವ್ಯಾಪಾರ- ವ್ಯವಹಾರ ಮಾಡುತ್ತಿರುವವರು ವಿಸ್ತರಣೆ ಬಗ್ಗೆ ಆಲೋಚನೆ ಮಾಡುತ್ತೀರಿ. ಸಾಲದ ಹಂಗಿಲ್ಲದೆ,
ಅದೃಷ್ಟ ಸಂಖ್ಯೆ : 5 ಅದೃಷ್ಟ ಬಣ್ಞ : ಹಸಿರು

ಮಿಥುನ ರಾಶಿ : ತಂದೆ- ತಾಯಿ ಹಾಗೂ ಗುರು- ಹಿರಿಯರ ಆಶೀರ್ವಾದ ನಿಮ್ಮ ಮೇಲೆ ಇರಲಿದೆ.ಮನೆಯಲ್ಲಿ ದೇವರ ಪೂಜಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಬಗ್ಗೆ ಚರ್ಚೆ ನಡೆಯಲಿದೆ.ಸಂಗಾತಿ- ಮಕ್ಕಳ ಜತೆಗೆ ಉತ್ತಮವಾದ ಸಮಯ ಕಳೆಯುತ್ತೀರಿ. ರುಚಿಕಟ್ಟಾದ ಊಟವನ್ನು ಸವಿಯುವ ಯೋಗ ಇದೆ.
ಅದೃಷ್ಟ ಸಂಖ್ಯೆ :5, ಅದೃಷ್ಟ ಬಣ್ಣ : ಬಿಳಿ

ಕರ್ಕ ರಾಶಿ : ಬ್ಯಾಂಕ್ ಉದ್ಯೋಗಿಗಳಿಗೆ ಈ ಹಿಂದಿನ ಘಟನೆಯಿಂದಾಗಿ ಒತ್ತಡದ ಸನ್ನಿವೇಶ ಇರುತ್ತದೆ. ಮಕ್ಕಳ ಪ್ರಗತಿ- ಏಳ್ಗೆಗಾಗಿ ಉಳಿತಾಯದ ಹಣವನ್ನು ತೆಗೆಯುವ ಬಗ್ಗೆ ಆಲೋಚನೆ ಮಾಡುತ್ತೀರಿ.ಏಕಾಂತದಲ್ಲಿ ಇರಲು ಮನಸ್ಸು ಬಯಸುತ್ತಿದೆ. ಭವಿಷ್ಯದ ಮುಖ್ಯ ಯೋಜನೆಯೊಂದರ ಬಗ್ಗೆ ಸಂಗಾತಿ ಜತೆಗೆ ಚರ್ಚೆ ನಡೆಸಲಿದ್ದೀರಿ.
ಅದೃಷ್ಟ ಸಂಖ್ಯೆ : 3 ಅದೃಷ್ಟ ಬಣ್ಣ : ಹಳದಿ

ಸಿಂಹ ರಾಶಿ : ವಾಸ್ತವವನ್ನು ಅರಿತು ಮುಂದಿನ ಹೆಜ್ಜೆಯನ್ನು ಇಡುವುದು ಸೂಕ್ತ. ನಿಮ್ಮ ಸಾಮರ್ಥ್ಯದ ಬಗ್ಗೆ ಅತಿಯಾದ ವಿಶ್ವಾಸ ಒಳ್ಳೆಯದಲ್ಲ.ಎಲ್ಲಿಯದೋ ಕೋಪ ಇನ್ನೆಲ್ಲಿಯೋ ತೋರಿಸುವುದು ಸಮಂಜಸವಲ್ಲ.ನೇರ ಮಾತುಗಳನ್ನು ಆಡುವ ಮೂಲಕ ಆಪ್ತರಿಗೆ ಬೇಸರ ಉಂಟು ಮಾಡಲಿದ್ದೀರಿ.
ಅದೃಷ್ಟ ಸಂಖ್ಯೆ :4, ಅದೃಷ್ಟ ಬಣ್ಣ: ಬೂದು

ಕನ್ಯಾ ರಾಶಿ: ಕಾನೂನು- ಕಾಯ್ದೆಗಳ ಪಾಲನೆ ಸರಿಯಾಗಿ ಆಗಿದೆಯಾ ಎಂಬ ಬಗ್ಗೆ ಗಮನ ಇರಲಿ.ಸುಮ್ಮನೆ ನಂಬಿ ಅನುಸರಿಸುವುದು ಸರಿಯಲ್ಲ.ಕಾರ್ಯ ವಿಧಾನದಲ್ಲಿ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಆಲೋಚಿಸುವಿರಿ.ಮನೆ ನಿರ್ಮಾಣದ ವೃತ್ತಿಯಲ್ಲಿ ಇರುವವರಿಗೆ ಹಣಕಾಸಿನ ಅಡಚಣೆ ಮುಂದುವರಿಯುತ್ತದೆ. ಯಾರನ್ನೇ ಆಗಲಿ,
ಅದೃಷ್ಟ ಸಂಖ್ಯೆ ‌:8, ಅದೃಷ್ಟ ಬಣ್ಣ: ಕೇಸರಿ

ತುಲಾ ರಾಶಿ : ಭುಜದ ನೋವು ಕಾಡಲಿದ್ದು, ವೈದ್ಯರ ಮೂಲಕ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಿ.ನಿಮಗೆ ಇರುತ್ತದೋ ಇಲ್ಲವೋ ಎಂದು ನೋಡದೆ ಈ ಸಹಾಯ ಮಾಡಬೇಕಾದ ಅನಿವಾರ್ಯ ಎದುರಾಗಬಹುದು. ನಿಮ್ಮನ್ನು ಬಹುವಾಗಿ ನಂಬಿದವರ ಸಲುವಾಗಿ ಹಣಕಾಸು ನೆರವು ನೀಡಬೇಕಾಗುತ್ತದೆ.
ಅದೃಷ್ಟ ಸಂಖ್ಯೆ : 6, ಅದೃಷ್ಟ ಬಣ್ಣ: ಅರಿಸಿಣ

ವೃಶ್ಚಿಕ ರಾಶಿ : ತಾತ್ಕಾಲಿಕವಾಗಿ ಪರಸ್ಥಳ ವಾಸ ಮಾಡುವ ಯೋಗ ಇದೆ.ಸ್ವಂತ ವ್ಯಾಪಾರ- ವ್ಯವಹಾರಸ್ಥರಿಗೆ ಗೊಂದಲ.ವಾಹನವನ್ನು ಮಾರಾಟಕ್ಕೆ ಇಟ್ಟಿರುವವರು ನಿರ್ಧಾರ ಬದಲಿಸುವ ಸಾಧ್ಯತೆ ಇದೆ. ಉಳಿತಾಯಕ್ಕೆ ಸಂಬಂಧಿಸಿದಂತೆ ಪ್ರಮುಖ ವಿಚಾರಗಳನ್ನು ಸಂಗಾತಿ ಜತೆಗೆ ಚರ್ಚೆ ಮಾಡಲಿದ್ದೀರಿ.
ಅದೃಷ್ಟ ಸಂಖ್ಯೆ : 1 , ಅದೃಷ್ಟ ಬಣ್ಣ: ಕೇಸರಿ

ಧನು ರಾಶಿ : ಈ ದಿನ ಎಷ್ಟೇ ಪ್ರಯತ್ನ ಪಟ್ಟರೂ ನಿಮ್ಮಲ್ಲಿನ ಅಹಂಕಾರ ಹೆಚ್ಚಾಗುವ ಸಾಧ್ಯತೆ ಇದೆ.ಯಾರ ಪರಿಸ್ಥಿತಿಯನ್ನು ಕಂಡು ಹಂಗಿಸದಿರಿ. ಹೀಗೆ ನಡೆದುಕೊಳ್ಳುವುದರಿಂದ ಅವಮಾನದ ಪಾಲಾಗುತ್ತೀರಿ. ಮನೆ ಬದಲಿಸುವ ಬಗ್ಗೆ ಆಲೋಚಿಸುತ್ತಿರುವವರಿಗೆ ಹಣಕಾಸಿನ ಸಮಸ್ಯೆ ಚಿಂತೆಯಾಗಿ ಕಾಡುತ್ತದೆ.
ಅದೃಷ್ಟ ಸಂಖ್ಯೆ : 1, ಅದೃಷ್ಟ ಬಣ್ಣ : ಕಿತ್ತಳೆ

ಮಕರ ರಾಶಿ : ಬೆನ್ನುಹುರಿ ನೋವಿನ ಸಮಸ್ಯೆ ಇರುವವರಿಗೆ ಅದು ಉಲ್ಬಣವಾಗುತ್ತದೆ.ಈ ಹಿಂದೆ ತೆಗೆದುಕೊಂಡ ಗಟ್ಟಿ ನಿರ್ಧಾರದಿಂದ ನೀವೇ ಹಿಂದೆ ಸರಿಯಬೇಕಾಗುತ್ತದೆ. ಯಾವುದೋ ಕಾರಣಕ್ಕಾಗಿ ವಾಗ್ವಾದ ಆಗಬಹುದು.ದೈವಾನುಗ್ರಹ ನಿಮ್ಮ ಮೇಲಿರುತ್ತದೆ. ಸಂಗಾತಿ- ಮಕ್ಕಳಿಂದ ನಿಮ್ಮ ಆಲೋಚನೆಗಳಿಗೆ ಅಡೆತಡೆ ಎದುರಾಗುತ್ತದೆ.
ಅದೃಷ್ಟ ಸಂಖ್ಯೆ : 4, ಅದೃಷ್ಣ ಬಣ್ಣ: ಹಸಿರು

ಕುಂಭ ರಾಶಿ : ಕೃಷಿಕರಿಗೆ ಮುಖ್ಯ ಕೆಲಸಗಳಲ್ಲಿ ವಿಳಂಬ ಆಗುತ್ತಿರುವುದು ಚಿಂತೆಗೆ ಕಾರಣವಾಗುತ್ತದೆ.ನಿಮ್ಮ ಮಾತಿನ ಮೂಲಕ ಇತರರನ್ನು ಆಕರ್ಷಿಸುತ್ತೀರಿ. ಸಂಬಂಧಿಕರು ನೆರವು ಕೇಳಿಕೊಂಡು ಕರೆ ಮಾಡಬಹುದು. ಅಥವಾ ಬರಬಹುದು.ತವರು ಮನೆಯಿಂದ ಶುಭ ಸುದ್ದಿ ಕೇಳುವ ಯೋಗ ಇದೆ.
ಅದೃಷ್ಟ ಸಂಖ್ಯೆ : 6, ಅದೃಷ್ಟ ಬಣ್ಣ: ಜಾಬಳೆ

ಮೀನ ರಾಶಿ : ಆಪ್ತರ ಜತೆಗೆ ಯಾವುದೇ ಮುಖ್ಯ ವಿಚಾರವನ್ನು ಮುಚ್ಚಿಡಬೇಡಿ. ಹಾಗೆ ಮಾಡಿದರೆ ಮನಸ್ತಾಪ ಸೃಷ್ಟಿಯಾಗುತ್ತದೆ.ನಿಮಗೆ ಅಪವಾದ ಬರುವ ಸಾಧ್ಯತೆ ಇದೆ. ಯಾವುದೇ ವಸ್ತು ಬೇಕಾದರೂ ಕೇಳಿ ಪಡೆದುಕೊಳ್ಳಿ. ಈಗ ತೆಗೆದುಕೊಂಡು, ಆ ಮೇಲೆ ಹೇಳಿದರಾಯಿತು ಎಂಬ ಧೋರಣೆ ಬೇಡ. ನಿಮಗೆ ಅಪವಾದ ಬರುವ ಸಾಧ್ಯತೆ ಇದೆ.
ಅದೃಷ್ಟ ಸಂಖ್ಯೆ :4, ಅದೃಷ್ಟ ಬಣ್ಣ: ನೀಲಿ