ಬೆಂಗಳೂರು: ದೇಶದ ಆರ್ಥಿಕ ರಾಜಧಾನಿ ಮುಂಬೈನ ಜವೇರಿ ಬಜಾರ್ನಲ್ಲಿ ಚಿನ್ನದ ಬೆಲೆ ಸೋಮವಾರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. 24 ಕ್ಯಾರೆಟ್ ಶುದ್ಧ 10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂ. ಆಸುಪಾಸಿನಲ್ಲಿದ್ದು, ಇದು ಭಾರತೀಯ ಮಾರುಕಟ್ಟೆಯಲ್ಲಿ ಇದುವರೆಗಿನ ಚಿನ್ನದ ಬೆಲೆಯಲ್ಲಿನ
ಅತಿದೊಡ್ಡ ಜಿಗಿತವಾಗಿದೆ.
24 ಕ್ಯಾರೆಟ್ ಚಿನ್ನವು ಪ್ರತಿ 10 ಗ್ರಾಂಗೆ ಐತಿಹಾಸಿಕ ರೂ. L.M,000 ಮಾರ್ಕ್ ಅನ್ನು ತಲುಪಲು ಕೇವಲ 1.650 ರೂಪಾಯಿ ದೂರದಲ್ಲಿದೆ. ಭಾರತದಲ್ಲಿ ಚಿನ್ನದ ದರದಲ್ಲಿ ಈ ತೀವ್ರ ಏರಿಕೆ ಹೊಸ ವಹಿವಾಟಿನ ವಾರದ ಆರಂಭದಲ್ಲಿ ಬಂದಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಈಗ 98,350 ರೂ.ಗಳಿಗೆ ತಲುಪಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 90,150 ರೂ. ಗಳಿಗೆ ತಲುಪಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯೇ ಈ ಏರಿಕೆಗೆ ಪ್ರಮುಖ ಕಾರಣ ಎಂಬುದು ತಜ್ಞರ ಅಭಿಪಾಯವಾಗಿದೆ. ಅಮೆರಿಕ ಮತ್ತು ಯುರೋಪ್ನಲ್ಲಿ ಬಡ್ಡಿದರ ಕಡಿತದ ಸಾಧ್ಯತೆ, ಡಾಲರ್ನಲ್ಲಿನ ದುರ್ಬಲತೆ ಮತ್ತು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತೊಮ್ಮೆ ಹೂಡಿಕೆದಾರರನ್ನು ಸುರಕ್ಷಿತ ಹೂಡಿಕೆಯಾಗಿ ಚಿನ್ನದತ್ತ ಆಕರ್ಷಿಸಿವೆ. ಈ ಸುದ್ದಿ ಹೂಡಿಕೆದಾರರಿಗೆ ಲಾಭದಾಯಕವಾಗಿದ್ದರೂ, ಸಾಮಾನ್ಯ ಗ್ರಾಹಕರಿಗೆ ಚಿನ್ನ
ಈಗ ಹೆಚ್ಚು ದುಬಾರಿಯಾಗಿದೆ. ವಿಶೇಷವಾಗಿ ಮದುವೆ ಸೀಸನ್ನಲ್ಲಿ, ಈ ಹೆಚ್ಚಳವು ಮಧ್ಯಮ ವರ್ಗದ ಜನರಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಹೊಸ ಆಭರಣಗಳನ್ನು ತಯಾರಿಸುವ ಬೇಡಿಕೆ ಕಡಿಮೆಯಾಗಿದ್ದು, ಜನರು ತಮ್ಮ ಹಳೆಯ ಚಿನ್ನವನ್ನು ಮಾರಾಟ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ ಎಂಬುದು ಚಿನ್ನದ ವ್ಯಾಪಾರಿಗಳ ಮಾತಾಗಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಆಸ್ಥಿರತೆ ಮುಂದುವರಿದರೆ ಮತ್ತು ಬೇಡಿಕೆ ಹಾಗೆಯೇ ಇದ್ದರೆ, ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆ ಇನ್ನೂ ಹೆಚ್ಚಿನ ಎತ್ತರವನ್ನು ತಲುಪಬಹುದು ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ. ಮುಂಬರುವ ವಾರಗಳಲ್ಲಿ ಬೆಲೆ ಯಾವ ದಿಕ್ಕಿಗೆ ಸಾಗಬಹುದು ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ
- ಅಂತ್ರವಳ್ಳಿಯಲ್ಲಿ ಸಿಡಿಲು ಬಡಿದು ಏಳು ಜಾನುವಾರುಗಳ ಸಾವು
- ಭಟ್ಕಳದಲ್ಲಿ ಟಿಪ್ಪರ್ಗೆ ಬೊಲೆರೋ ಡಿಕ್ಕಿ: ಮೂವರಿಗೆ ಗಾಯ; ಭಟ್ಕಳ, ಹಳಿಯಾಳದಲ್ಲಿ ಅಕ್ರಮ ಮದ್ಯ ಮಾರಾಟದ ವೇಳೆ ಪೊಲೀಸರ ದಾಳಿ
- ಮರೆಯಾದ ಪರಂಪರೆಗೆ ಹುಡುಕಾಟ: ಹಳಗಾದಲ್ಲಿ ಅಷ್ಟಮಂಗಲ ಪ್ರಶ್ನೆ
- ವಿಶ್ವದ ಕಿರಿಯ ತಬಲಾ ಕಲಾವಿದೆ ಸ್ವರಶ್ರೀಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ
.

