ಸುದ್ದಿಬಿಂದು ನ್ಯೂಸ್ ಡೆಸ್ಕ್
ಕಾರವಾರ
: ಶಿವಮೊಗ್ಗ ಜಿಲ್ಲೆಯ ಸೊರಬ-ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಮುಖಂಡರು ಮತ್ತು ಕಾರ್ಯಕರ್ತರಿಂದ ವಿರೋಧವನ್ನು ಎದುರಿಸುತ್ತಿರುವ ಇಬ್ಬರು ಶಾಸಕರಿಗೆ ಈ ಬಾರಿ  ಕ್ಷೇತ್ರವನ್ನು ಬದಲಾವಣೆ ಮಾಡಬೇಕು ಎನ್ನುವ ಕುರಿತು  ಪಕ್ಷದ ಹೈಕಮಾಂಡ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಉತ್ತರಕನ್ನಡ ಜಿಲ್ಲೆಯ ಶಿರಸಿ ಕ್ಷೇತ್ರದಿಂದ ಈ ಬಾರಿ ಸೊರಬ ಕ್ಷೇತ್ರದ ಶಾಸಕರಾಗಿದ್ದ ಕುಮಾರ ಬಂಗಾರಪ್ಪ ಅವರನ್ನ ಕಣಕ್ಕೆ ಇಳಿಸುವ ಬಗ್ಗೆ ಚರ್ಚಿಸಲಾಗುತ್ತಿದೆ ಎನ್ನಲಾಗಿದೆ.

ಶಿರಸಿ ಕ್ಷೇತ್ರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಶಾಸಕರಾಗಿದ್ದರು. ಅವರನ್ನ ಬರಲಿರುವ ಲೋಕಸಭಾ ಚುನಾವಣೆಗೆ ಉತ್ತರಕನ್ನಡ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ . ಇನ್ನೂ ಕುಮಾರ ಬಂಗಾಪ್ಪ ಹಾಗೂ ಭೀಮಣ್ಣ ನಾಯ್ಕ ಮಾವ-ಅಳಿ ಆಗಿದ್ದು, ಆದರೆ ಇವರಿಬ್ಬರ ನಡುವೆ ಬಿರುಕು ಇರುವ ಕಾರಣಕ್ಕೆ ಭೀಮಣ್ಣ ನಾಯ್ಕ ಅವರ ವಿರುದ್ದ ಅವರ ಅಳಿಯ ಕುಮಾರ ಬಂಗಾರಪ್ಪ ಅವರನ್ನ ಕಣಕ್ಕೆ ಇಳಿಸಿದರೆ.ಬಿಜೆಪಿ ಅಭ್ಯರ್ಥಿ ಗೆಲ್ಲಬಹುದು ಎನ್ನುವುದು ನಾಯಕರ ಲೆಕ್ಕಾಚಾರ. ಆದರೆ ಈ ತೀರ್ಮಾನ ಏನಾದ್ರೂ ಆದಲ್ಲಿ ಕುಮಾರ ಬಂಗಾರಪ್ಪ ಹೊರಗಿನ ಕ್ಷೇತ್ರದವರು ಎನ್ನುವ ಕಾರಣಕ್ಕೆ ಇದು ಬಿಜೆಪಿಗೆ ಉಲ್ಟಾ ಆಗುವ ಸಾಧ್ಯತೆ ಸಹ ತಳ್ಳಿಹಾಕುವಂತಿಲ್ಲ.

ಇನ್ನೂ ಸೊರಬ ಕ್ಷೇತ್ರದಿಂದ ಎಚ್ ಹಾಲಪ್ಪ ಅವರನ್ನ ಕಣಕ್ಕೆ ಇಳಸಿದ್ದರ ಗೆಲ್ಲಬಹುದು ಎನ್ನುವ ವಿಶ್ವಾಸ ಇದೆ. ಈಗಾಗಲೆ ಕುಮಾರ ಬಂಗಾರಪ್ಪ ಶಾಸಕರಾಗಿದ್ದ ಸೊರಬ ಕ್ಷೇತ್ರದಲ್ಲಿ ಈ ಬಾರಿ ಕುಮಾರಗೆ ವ್ಯಾಪಕ ವಿರೋಧ ಸಹ ಉಂಟಾಗಿದೆ. ಇದೆ ಕಾರಣಕ್ಕೆ ಕುಮಾರ ಬಂಗಾರಪ್ಪ ಸ್ಪರ್ಧಿಸಿದ್ದ ಸೊರಬಾ ಕ್ಷೇತ್ರದಲ್ಲಿ ಎಚ್ ಹಾಲಪ್ಪ ಅವರನ್ನ ಕಣಕ್ಕಿಳಿಸಿ, ಕುಮಾರ ಬಂಗಾರಪ್ಪ ಅವರನ್ನ ಶಿರಸಿ ಕ್ಷೇತ್ರದಿಂದ ಕಣಕ್ಕೆ ಇಳಿಸುವ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ.

ಈ ಬಗ್ಗೆ ಸುಳಿವು ಸಿಕ್ಕಿರುವ  ಕುಮಾರ ಬಂಗಾರಪ್ಪ ಅಭಿಮಾನಿಗಳು ಮತ್ತು ಕೆಲವು ಮುಖಂಡರು ಕೆಲ ದಿನಗಳ ಹಿಂದೆ ಬಿ ಎಸ್ ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ಕುಮಾರ ಬಂಗಾರಪ್ಪ ಅವರಿಗೆ ಸೊರಬ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಟಿಕೆಟ್ ನೀಡುವಂತೆ, ಒತ್ತಾಯ ಮಾಡುತ್ತಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.