ಸುದ್ದಿಬಿಂದು ನ್ಯೂಸ್ ಡೆಸ್ಕ್
ಬೆಂಗಳೂರು :
ರಾಜ್ಯದ 224 ವಿಧಾನಸಭಾ ಕ್ಷೇತ್ರದ 124ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿರುವ ಕಾಂಗ್ರೆಸ್ ನಾಳೆ ಉಳಿದ 100ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನ ನಾಳೆ ಬಿಡುಗಡೆ ಮಾಡಲಿದೆ‌.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ನಾಳೆ ಕೇಂದ್ರ ಹಾಗೂ ರಾಜ್ಯದ ನಾಯಕರ ಜೊತೆ ಸಭೆ ನಡೆಸಲಿದ್ದರೆ. ನಾಳೆ ನಡೆಯಲಿಯುವ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಹಾಗೂ ಸಿದ್ದರಾಮಯ್ಯ ಅವರು ಪಾಲ್ಗೊಳ್ಳಲಿದ್ದು, ಅವರು ಇಂದು ದೆಹಲಿಗೆ ಪ್ರಯಾಣ ಮಾಡಲಿದ್ದಾರೆ.

ಒಂದಕ್ಕಿಂತ ಹೆಚ್ಚು ಆಕಾಂಕ್ಷಿಗಳನ್ನ ಹೊಂದಿರುವ ಕ್ಷೇತ್ರದಲ್ಲಿ ಸಾಕಷ್ಟು ಪೈಪೋಟಿ ಇರುವ ಕಾರಣಕ್ಕೆ ಇದುವರಗೆ ಅಭ್ಯರ್ಥಿಗಳ ಹೆಸರನ್ನ ಘೋಷಣೆ ಮಾಡದೆ ಹಾಗೆ ಇಟ್ಟುಕೊಳ್ಳಲಾಗಿತ್ರು. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ನಾಯಕರು ಹಲವು ಸುತ್ತಿದ್ದನ ಸಭೆ ನಡೆಸಿದ ಬಳಿಕ ಈಗ ಅಭ್ಯರ್ಥಿಗಳ ಘೋಷಣೆಗೆ ಪಟ್ಟಿ ಸಿದ್ದ ಮಾಡಿಕೊಳ್ಳಲಾಗಿದೆ.

ಇನ್ನೂ ಸಹ ಕೆಲವಷ್ಟು ಕ್ಷೇತ್ರದಲ್ಲಿ ಅಪಸ್ವರಗಳು ಕೇಳಿಬಂದಿದ್ದು, ಆ ಎಲ್ಲಾ ಆಕಾಂಕ್ಷಿಗಳ ಜೊತೆ ಸಹ ಮಾತುಕತೆ ನಡೆಸಿ ಯಾವೇಲ್ಲಾ ಆಕಾಂಕ್ಷಿಗಳಿಗೆ ಟಿಕೆಟ್ ಕೈ ತಪ್ಪಲಿದೆಯೊ ಅಂತಹವರಿಗೆ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಸೂಕ್ತ ಸ್ಥಾನ ಮಾನ ನೀಡುವ ಭರವಸೆ ನೀಡಿದೆ ಎನ್ನಲಾಗಿದೆ.ಆದರೆ ಇದಕ್ಕೆ ಕೆಲವು ಒಪ್ಪಿಗೆ ಸೂಚಿಸಿದರೆ ಇನ್ನೂ ಕೆಲವಷ್ಟು ಕ್ಷೇತ್ರದಲ್ಲಿ ವಿರೋಧ ಕೇಳಿ ಬರುತ್ತಿದೆ. ಅಭ್ಯರ್ಥಿಗಳ ಹೆಸರು ಘೋಷಣೆ ಆದ ಬಳಿಕ ಭಿನ್ನಮತ ಸ್ಪೋಟವಾಗುವ ಸಾದ್ಯತೆ ಇದೆ. ಆದರೆ ಮುಂದೆ ನಡೆಯುವ ಭಿನ್ನಮತವನ್ನ ಪಕ್ಷದ ನಾಯಕರು ಯಾವ ರೀತಿಯಲ್ಲಿ ಬಗೆಹರಿಸಲಿದ್ದಾರೆ ಎನ್ನುವುದನ್ನ ಕಾದು ನೋಡಬೇಕಿದೆ.