ಕಾರವಾರ: ಜಿಲ್ಲೆಯ ಹಾಗೂ ಕ್ಷೇತ್ರದ ಧ್ವನಿಯಾಗಿರುವ ಮಹಿಳಾ ಶಾಸಕಿ ರೂಪಾಲಿ ನಾಯ್ಕ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಲು ಮತ ನೀಡಿ ಎಂದು ಮಾಜಿ ಸಚಿವರಾದ ಪ್ರಮೋದ ಮಧ್ವರಾಜ್ ಹೇಳಿದರು.ಕೋಡಿಬೀರ ದೇವಸ್ಥಾನದ ಹತ್ತಿರ ಗುರುವಾರ ನಡೆದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ರೂಪಾಲಿ ನಾಯ್ಕ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ರೂಪಾಲಿ ನಾಯ್ಕ ಅವರು ಮಹಿಳಾ ಶಾಸಕಿಯಾಗಿ ಜಿಲ್ಲೆ ಹಾಗೂ ಕ್ಷೇತ್ರದ ಧ್ವನಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರು ಜನರ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿದ್ದಾರೆ. ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಿದ್ದಾರೆ. ಹಿಂದೆಂದೂ ಆಗದೇ ಇರುವ ಕಾರ್ಯವನ್ನು ಅವರ ಅವಧಿಯಲ್ಲಿ ಮಾಡಿದ್ದಾರೆ. ಇಂತಹ ಜನ ನಾಯಕಿಯನ್ನು ಮತ್ತೊಮ್ಮೆ ಆಯ್ಕೆ ಮಾಡಲು ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಮಾತನಾಡಿ, 20 ವರ್ಷ ರಾಜಕಾರಣದಲ್ಲಿ ಯಾವುದೇ ರೀತಿಯ ಸ್ವರ‍್ಥಕ್ಕಾಗಿ ದುಡಿದಿಲ್ಲ. ಕೇವಲ ಜನರಿಗಾಗಿಯೇ ನಾನು ಕೆಲಸ ಮಾಡಿದ್ದೇನೆ. ಕೋಣೆನಾಲದ ಸ್ವಚ್ಛತೆಗೆ ಈಗಾಗಲೇ ಅನುದಾನವನ್ನು ನೀಡಲಾಗಿದೆ. ಈ ಪರಿಸರದ ದರ‍್ವಾಸನೆ ನಿವಾರಣೆಯಾಗಲಿದೆ. ಸೊಳ್ಳೆಗಳ ಕಾಟ ತಪ್ಪಲಿದೆ. ನಗರದಲ್ಲಿ ಆಗದೇ ಇರುವ ಕರ‍್ಯಗಳನ್ನು ಮಾಡಿದ್ದೇನೆ. ಕಾರವಾರದ ಗ್ಯಾಸ್ ಕಾಲೇಜ್, ಜಿಲ್ಲಾ ಕೇಂದ್ರವೆಂದು ಪ್ರಸಿದ್ದವಾದ ಕಾರವಾರದ ಮಾಲಾದೇವಿ ಮೈದಾನದ ಅಭಿವೃದ್ಧಿ, ಶಾಸಕರ ಮಾದರಿ ಶಾಲೆ, ಗುರುಭವನ ಮಹಿಳಾ ಕಾಲೇಜು ಹೀಗೆ ರಸ್ತೆ ಸೇತುವೆ ನರ‍್ಮಾಣಕ್ಕೆ ಒತ್ತು ನೀಡಿದ್ದೇನೆ ಎಂದರು.
ಮೀನುಗಾರರಿಗೆ ಎಂದಿಗೂ ನಾನು ಅನ್ಯಾಯ ಮಾಡಿಲ್ಲ. ಕೋವಿಡ್ ಸಂರ್ಭದಲ್ಲಿ ಎಲ್ಲರಿಗೂ ಪ್ಯಾಕೇಜ್ ಘೋಷಣೆ ಮಾಡುತ್ತಿದ್ದಾಗ ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದಾಗ ಅವರು ಕೂಡಲೇ ಪ್ಯಾಕೇಜ್ ನೀಡುವುದಾಗಿ ಘೋಷಿಸಿ ಅವರಿಗೆ ತಲುಪುವಂತೆ ಮಾಡಿದ್ದರು. ಅದೇ ರೀತಿ ಬೆಳಂಬರ ಬಂದರು, ಮಾಜಾಳಿ ಬಂದರು ನಿರ್ಮಾಣಕ್ಕೆ ಅನುದಾನವನ್ನು ತಂದಿದ್ದೇನೆ. ಈ ಬಂದರು ನಿರ್ಮಾಣವಾದರೆ ಕ್ಷೇತ್ರದ ಮೀನುಗಾರರಿಗೆ ಅನುಕೂಲವಾಗಲಿದೆ ಎಂದರು.
ಎಲ್ಲ ಸಮಾಜದ ಏಳಿಗೆಗೆ ನಾನು ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಕ್ಷೇತ್ರದಲ್ಲಿ ಇದುವರೆಗೆ ಶಾಂತಿ ಸುವ್ಯವಸ್ಥೆಗೆ ಶ್ರಮಿಸಿದ್ದೇನೆ. ಪ್ರವಾಹ ಹಾಗೂ ಕೋವಿಡ್ ಸಂದರ್ಭದಲ್ಲಿ ಜನರಿಗಾಗಿ ಹಗಲಿರುಳು ಶ್ರಮಿಸಿದ್ದೇನೆ. ಕೋವಿಡ್ ಆದಾಗ ಆಸ್ಪತ್ರೆಯಲ್ಲಿ ಸೋಂಕಿತರು ದಾಖಲಾಗಿ ಸಾವನ್ನಪ್ಪುತ್ತಿದ್ದ ಘಟನೆ ತುಂಬಾ ನೋವನ್ನು ನೀಡಿದೆ.
ಕೊರೋನಾ ಮಾರಿ ಬಂದಾಗ ವ್ಯಾಕ್ಸಿನೇಶನ್ ದಿಂದ ಬದುಕುಳಿದೆವು. ಪ್ರಧಾನಿ ನರೇಂದ್ರ ಮೋದಿ ನಮ್ಮ ದೇಶದಲ್ಲೆ ವ್ಯಾಕ್ಸಿನ್ ತಯಾರಿಸಲು ಉತ್ತೇಜಿಸಿದರು. ವ್ಯಾಕ್ಸಿನ್ ತಯಾರಾಗುತ್ತಿದ್ದಂತೆ ಅದರ ಬಗ್ಗೆಯೂ ಟೀಕೆ ಮಾಡಿದರು. ನಂತರ ವ್ಯಾಕ್ಸಿನ್ ಪಡೆದವರು ಇದೇ ಟೀಕೆ ಮಾಡಿದ ಕಾಂಗ್ರೆಸ್ ಜನ.
ಸಿಎಂ ಆಗಲು ಕಾಂಗ್ರೆಸ್ ನಲ್ಲಿ ಕಾಂಪಿಟೇಶನ್ ನಡೆಯುತ್ತಿದೆ. ಅವರಿಗೆ ರಾಜ್ಯ, ಜನ ಹಿತಕ್ಕಿಂತ ಸಿಎಂ ಸ್ಥಾನವೇ ಮುಖ್ಯವಾಗಿದೆ. ಕಾಂಗ್ರೆಸ್ ನವರು ಗ್ಯಾರಂಟಿ ಕಾರ್ಡ್ ಹೆಸರಿನಲ್ಲಿ ಜನರನ್ನು ಮರಳು ಮಾಡುತ್ತಿದ್ದಾರೆ.
ಮೀನುಗಾರರಿಗೆ ನಮ್ಮ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ನೇಕಾರರ ಸಾಲ ಮನ್ನಾ ಮಾಡಿದರು. ಆಗ ಮೀನುಗಾರರ ಸಾಲ ಮನ್ನಾ ಮಾಡುವಂತೆ ಯಡಿಯೂರಪ್ಪ ಅವರಲ್ಲಿ ವಿನಂತಿಸಿದೆ. ಆಗ ಅವರು ಒಪ್ಪಿ ಸಾಲ ಮನ್ನಾ ಮಾಡಿದರು.ನಾನೂ ಕೂಡ ಮಹಿಳೆ. ಮೀನು ಮಾರಾಟ ಮಾಡುವ ನೀವೂ ಮಹಿಳೆಯರು. ನೀವು ಶಕ್ತಿ ಕೊಟ್ಟಿದ್ದರಿಂದ ನಾನು ಇಲ್ಲಿ ಇದ್ದೇನೆ. ಅದಕ್ಕಾಗಿ ನಿಮ್ಮೆಲ್ಲರಿಗೆ ಅನುಕೂಲ ಕಲ್ಪಿಸುವುದು ನನ್ನ ಉದ್ದೇಶ.
ಸಾಗರಮಾಲಾಕ್ಕೆ ಸತೀಶ ಸೈಲ್ ಹಾಗೂ ಸಿದ್ಧರಾಮಯ್ಯ ಸೇರಿ ಶಿಲಾನ್ಯಾಸ ನೆರವೇರಿಸಿದರು. ಆದರೆ ಅಮಾಯಕರನ್ನು ನನ್ನ ವಿರುದ್ಧ ಎತ್ತಿಕಟ್ಟಿದರು. ನನ್ನ ಹೆಸರು ಹಾಳು ಮಾಡಿದರು. ಪಾಪ ಮಾಡಿದವರು ಅವರು. ನಮ್ಮ ಮೇಲೆ ಗೂಬೆ ಕೂರಿಸಿದರು.
ವಿಧಾನಪರಿಷತ್ ಶಾಸಕ ಗಣಪತಿ ಉಳ್ವೇಕರ ಮಾತನಾಡಿ, ಶಾಸಕಿ ರೂಪಾಲಿ ನಾಯ್ಕ ಅವರು ಕ್ಷೇತ್ರದಲ್ಲಿ ಅನೇಕ ಕರ‍್ಯವನ್ನು ಮಾಡಿದ್ದಾರೆ. ಮೀನುಗಾರರ ಪರವಾಗಿ ಸದಾ ಅವರ ಮನ ಮಿಡಿಯುತ್ತದೆ. ಪ್ರತಿ ಸಂರ‍್ಭದಲ್ಲೂ ಜನರಿಗಾಗಿ ಆಗಬೇಕಾದ ಕೆಲಸಗಳ ಬಗ್ಗೆಯೇ ಯೋಚಿಸುತ್ತಿರುತ್ತಾರೆ. ಹಲವರು ಇಲ್ಲಿ ಶಾಸಕರಾಗಿ ಹೋದರು ಆದರೆ ಮೀನುಗಾರರನ್ನು ಬಳಸಿಕೊಂಡರೆ ಹೊರತು ಅವರ ಪರವಾಗಿ ಎಂದಿಗೂ ನಿಂತಿಲ್ಲ. ಮೀನುಗಾರ ಸಮುದಾಯದ ನನ್ನನ್ನು ಕೂಡ ಮೇಲ್ಮನೆಗೆ ಕಳುಹಿಸಲು ಅಪಾರವಾಗಿ ಶ್ರಮಿಸಿದ್ದಾರೆ. ಅವರನ್ನು ನಾವು ಮತ್ತೊಮ್ಮೆ ಆಯ್ಕೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಗೋವಾ ಶಾಸಕ ಪ್ರೇಮೆಂದ್ರ ಶೇಟ್, ನಗರಸಭೆ ಅಧ್ಯಕ್ಷ ಡಾ. ನಿತೀನ ಪಿಕಳೆ, ಮಂಡಲದ ಅಧ್ಯಕ್ಷರಾದ ನಾಗೇಶ ಕುರ್ಡೆಕರ, ಸುಭಾಷ ಗುನಗಿ, ಮನೋಜ ತಾಮಸೆ, ರೋಷನಿ ಮಾಳ್ಸೆಕರ, ರವಿರಾಜ ಅಂಕೋಲೆಕರ, ಮಾಲಾ ಹುಲಸ್ವಾರ, ಪಕ್ಷದ ಪದಾಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು