ಸುದ್ದಿಬಿಂದು ಬ್ಯೂರೋ
KUMTA: ಕುಮಟಾ : ಕಂಟೇನರ್ ವಾಹನದಲ್ಲಿ ಹಿಂಸಾತ್ಮಕವಾಗಿ ಜಾನುವಾರುಗಳನ್ನ ಸಾಗಿಸುವ ವೇಳೆ ದಾಳಿ ನಡೆಸಿದ ಕುಮಟಾ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿ 27ಜಾನುವಾರುಗಳನ್ನ ರಕ್ಷಣೆ ಮಾಡಲಾಗಿದೆ.
ಕೊಲ್ಹಾಪುರದಿಂದ ಪಾಲಕ್ಕಾಡು ಕೇರಳಕ್ಕೆ ಅಕ್ರಮವಾಗಿ ಜಾನುವಾರುಗಳನ್ನ ಸಾಗಾಟ ಮಾಡಲಾಗುತ್ತಿದೆ ಎನ್ನುವ ಬಗ್ಗೆ ಖಚಿತ ಮಾಹಿತಿ ಪಡೆದ ಕುಮಟಾ ಪೊಲೀಸರ ತಂಡ ಪಟ್ಟಣದ ಎಪಿಎಂಸಿ ಸಮೀಪ ದಾಳಿ ನಡೆಸಿದೆ.ದಾಳಿಯ ವೇಳೆ ಕಂಟೇನರ್ ನಲ್ಲಿ 27 ಕೋಣಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ತಕ್ಷಣ ನಾಲ್ವರನ್ನ ಬಂಧಿಸಿದ್ದು ವಾಹನದಲ್ಲಿದ್ದ 27ಕೋಣಗಳನ್ನ ರಕ್ಷಣೆ ಮಾಡಲಾಗಿದೆ.
ಇನ್ನೂ ಕೋಣಗಳ ಸಾಗಾಟದಲ್ಲಿ ತೊಡಗಿದ ಐವರ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು,ಮುಂದಿನ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ