ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿದ್ದು, ಆಭರಣ ಪ್ರಿಯರಿಗೆ ಸ್ವಲ್ಪ ಖುಷಿ ತಂದಿದೆ. ಶುಕ್ರವಾರ ಬಂಗಾರದ ಬೆಲೆಯಲ್ಲಿ 410 ರೂ. ಏರಿಕೆಯಾಗಿತ್ತು. ಆದರೆ, ಇಂದು ಪ್ರತಿ 10 ಗ್ರಾಂ 100 ರೂ. ಇಳಿಕೆಯಾಗಿದ್ದು, ಚಿನ್ನ ಖರೀದಿದಾರರಿಗೆ ಸಮಾಧಾನ ನೀಡಿದೆ.ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರಗಳು ದಾಖಲೆಯ ಗರಿಷ್ಠ ಮಟ್ಟದಲ್ಲಿಯೇ ಮುಂದುವರಿದಿರುವುದರಿಂದ ಮತ್ತೆ ಬೆಲೆ ಏರಿಕೆಯಾಗಬಹುದು ಎಂಬ ಆತಂಕವಿದೆ.
ಬೆಂಗಳೂರಲ್ಲಿ ಚಿನ್ನದ ಬೆಲೆ
ಬೆಂಗಳೂರಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂ ಗೆ 100 ರೂ. ಇಳಿಕೆಯಾಗಿದ್ದು, 67,050 ರೂ.ಗೆ ಇಳಿದಿದೆ. 24 ಕ್ಯಾರೆಟ್ ಶುದ್ಧ ಚಿನ್ನದ ದರ 100 ರೂ. ಇಳಿಕೆಯಾಗಿದ್ದು, ಪ್ರತಿ 10 ಗ್ರಾಂಗೆ 73,150 ರೂ.ನಲ್ಲಿ ವಹಿವಾಟಾಗುತ್ತಿದೆ.
ದೆಹಲಿಯಲ್ಲಿ ಕೂಡ ಆಭರಣ ಚಿನ್ನದ ಬೆಲೆ (22 ಕ್ಯಾರೆಟ್) 100 ರೂ. ಇಳಿಕೆಯಾಗಿದ್ದು, 67,200 ರೂನಲ್ಲಿ ವಹಿವಾಟು ನಡೆಸುತ್ತಿದೆ. ಅಲ್ಲದೆ, 24ಕ್ಯಾರೆಟ್ ಅಪರಂಜಿ ಚಿನ್ನದ ದರ 100 ರೂ. ಇಳಿಕೆಯಾಗಿದ್ದು, 73,330 ರೂ.ನಲ್ಲಿ ವಹಿವಾಟು ನಡೆಸುತ್ತಿದೆ.ಬೆಳ್ಳಿ ದರ ಸ್ಥಿರ
ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿದ್ದರೆ, ಬೆಳ್ಳಿ ದರ ಸ್ಥಿರವಾಗಿದೆ.
ಕಳೆದ ಮೂರು ದಿನಗಳಲ್ಲಿ ಪ್ರತಿ ಕೆ.ಜಿ ಬೆಳ್ಳಿ ದರದಲ್ಲಿ ರೂ.2000 ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ದಾಖಲೆಯ ಮಟ್ಟಕ್ಕೆ ಏರಿದೆ. ಪ್ರಸ್ತುತ ಸ್ಪಾಟ್ ಚಿನ್ನದ ದರವು ಪ್ರತಿ ಔನ್ಸ್‌ಗೆ 2,567 ಡಾಲರ್‌ಗಳಿಗಿಂತ ಹೆಚ್ಚು ಎಂಬುದು ಗಮನಾರ್ಹ. ಸ್ಪಾಟ್ ಬೆಳ್ಳಿ ದರ ಪ್ರತಿ ಔನ್ಸ್‌ಗೆ 29.97 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಮತ್ತೊಂದೆಡೆ, ರೂಪಾಯಿ ಮೌಲ್ಯವು ಸ್ವಲ್ಪ ಚೇತರಿಸಿಕೊಂಡಿದೆ. ಪ್ರತಿ ಡಾಲರ್ ಎದುರು 83.940 ಕ್ಕೆ ಮಾರಾಟವಾಗುತ್ತಿದೆ.