ಸುದ್ದಿಬಿಂದು ಬ್ಯೂರೋ
ಕಾರವಾರ
: ಮೀನುಗಾರಿಕಾ ಮತ್ತು ಬಂದರು ಸಚಿವ ಮಂಕಾಳ ವೈದ್ಯ ಅವರ 50ನೇ ಹುಟ್ಟು ಹಬ್ಬವನ್ನ ಆಚರಿಸಲಾಗಿದ್ದು, ತಮ್ಮ ಹುಟ್ಟು ಹಬ್ಬದ ದಿನದಂದು ಐವತ್ತನೆ ಹುಟ್ಟು ಹಬ್ಬಕ್ಕೆ 50 ಬಡ ವಿಧ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಸಚಿವ ಮಂಕಾಳು ವೈದ್ಯ ಅವರು ಶಪಥ ಮಾಡಿದ್ದಾರೆ.

ಯಾವೇಲ್ಲಾ ಬಡ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಮಾಡಲು ಆಸಕ್ತಿ ಇದೆ ಅಂತಹ ಬಡ ವಿಧ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ಸಚಿವ ಹಾಗೂ ಭಟ್ಕಳ ಕ್ಷೇತ್ರದ ಶಾಸಕ‌ ಮಂಕಾಳು ವೈದ್ಯ ಶಪಥ ಮಾಡಿದ್ದಾರೆ. ನಾನು ಸಹ ಬಡತನದಿಂದಲ್ಲೆ ಬಂದವನು, ಈ ಹಿಂದೆ‌ ಶಾಸಕನಾಗಿದ್ದಾಗಲ್ಲು ಸಹ ಅನೇಕ ಬಡವರಿಗೆ ಸಹಾಯ ಮಾಡಿದ್ದೇನೆ. ಈಗಲ್ಲೂ ಅದನ್ನ ಮಾಡುತ್ತೇನೆ. ನಾನು ಬಡವರ ಪರ ಸಚಿವನಾಗಿಯೇ ಇರುತ್ತೆನೆ. ಬಡತನ ಅಂದರೆ ಏನು, ಎನ್ನುವುದನ್ನ ನಾನು ಬಲ್ಲವನಾಗಿದ್ದೇನೆ. ನನ್ನ ಜೀವನ ಸದಾ ಬಡವರ ಪರವಾಗಿ. ಸಚಿವನಾದ ಮಾತ್ರಕ್ಕೆ ನನ್ನಲ್ಲಿ ಯಾವ ಬದಲಾವಣೆ ಇಲ್ಲ ಎಂದಿದ್ದಾರೆ.

ಇನ್ನೂ ತಮ್ಮ ಸಂಬಳದಲ್ಲಿ ಐದು ಲಕ್ಷ ರೂ ಹಣವನ್ನ ಭಟ್ಕಳದ ಪೆದ್ರೋ ಅಂದ ಮಕ್ಕಳ ಶಾಲೆಗೆ ಡೆಪೋಸಿಟ್ ಮಾಡುವುದಾಗಿ ಸಚಿವ ಮಂಕಾಳು ವೈದ್ಯ ಭರವಸೆ ನೀಡಿದ್ದರು. ಹುಟ್ಟು ಹಬ್ಬದ ಅಂಗವಾಗಿ ಭಟ್ಕಳ ಪೆದ್ರೋ ಅಂದ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಚಿವ ಮನೆಗೆ ಆಗಮಿಸಿದ್ದು, ಈ ವೇಳೆ ಅಂದ ಮಕ್ಕಳೊಂದಿಗ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು..