ಸುದ್ದಿಬಿಂದು ಬ್ಯೂರೋ
ಭಟ್ಕಳ :
ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಓರ್ವ ಸಮುದ್ರದಲ್ಲಿ ಈಜಲು ಹೋಗಿ ಕಡಲ‌ ಅಲೆಗೆ ಕೊಚ್ಚಿಹೋಗಿರುವ ಘಟನೆ ಮುರುಡೇಶ್ವರ ಕಡಲತೀರದಲ್ಲಿ ನಡೆದಿದೆ.

ಪವ‌ನ್ ನಾಯ್ಕ ( 20) ಎಂಬಾತನೆ ಕಡಲ ಅಲೆಗೆ ಸಿಲುಕಿ ನಾಪತ್ತೆಯಾಗಿರುವ ವಿದ್ಯಾರ್ಥಿಯಾಗಿದ್ದಾನೆ. ಆರು ಮಂದಿ ಸ್ನೇಹಿತರು ಸೇರಿಕೊಂಡು ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದರು. ಇವರ ಪೈಕಿ ಪವನ್ ನಾಯ್ಕ ಸೇರಿ ಮೂರು ಮಂದಿ ಸಮುದ್ರದಲ್ಲಿ ಈಜಲು ನೀರಿಗೆ ಇಳಿದಿದ್ದು, ಈ ವೇಳೆ ಪವನ್ ಸಮುದ್ರದ ಅಲೆಗೆ ಕೊಚ್ಚಿಕೊಂಡು ಹೋಗಿದ್ದು, ಆತನ ಜೊತೆಗೆ ಇದ್ದ ಇಬ್ಬರನ್ನ ರಕ್ಷಣೆ ಮಾಡಲಾಗಿದೆ.

ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ ಆರು ಮಂದಿ ಯುವಕರು ಸಹ ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿ ನಿವಾಸಿಗಳು ಎಂದು ಗೋತ್ತಾಗಿದೆ. ಇಂದು ಬೆಳಿಗ್ಗೆ ಅವರು ಮುರುಡೇಶ್ವರ ತಲುಪಿದ್ದು, ಸಮುದ್ರದಲ್ಲಿ ಈಜಲು ಇಳಿದಿದ್ದಾರೆ. ಅಲ್ಲಿನ ಲೈಪ್ ಗಾರ್ಡ್ ಸಿಬ್ಬಂದಿಗಳು, ಹಾಗೂ ಪೊಲೀಸರು ಎಷ್ಟೆ ಸೂಚನೆ ನೀಡಿದ್ದರೂ ಲೆಕ್ಕಿಸದೆ ನೀರಿಗೆ ಇಳಿದ್ದಾರೆ.

ನಿನ್ನೆ ಸಹ ಇದೆ ಸ್ಥಳದಲ್ಲೆ ಓರ್ವ ಪ್ರವಾಸಿಗ ಕಣ್ಮರೆಯಾಗಿದ್ದು, ಆತನ ಸುಳಿಸುವ ಸಿಗುವ ಮುನ್ನವೆ ಇದೀಗ ಮತ್ತೊಂದು ಅವಘಡ ನಡೆದಿದೆ.‌ಮುರುಡೇಶ್ವರ ಕಡಲತೀರದಲ್ಲಿ ಪದೆ ಪದೆ ನಡೆಯುತ್ತಿರುವ ಈ ದುರಂತವನ್ನ ತಪ್ಪಿಸಬೇಕು ಎಂದಾದರೆ ಕಡಲತೀರಕ್ಕೆ ಹೋಗುವ ಮಾರ್ಗವನ್ನ ಮಳೆಗಾಲ ಮುಗಿಯುವ ತನಕ‌ ಸಂಪೂರ್ಣವಾಗಿ ಬಂದ‌ ಮಾಡಿದರೆ ಅನಾಹುತ ತಪ್ಪಿಸಬಹುದಾಗಿದೆ..