suddibindu.in
Sirsi:ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಿರುವತ್ತಿ ಶಾಲೆಗೆ ಅನಂತ ಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟನ ಸ್ಥಾಪಕರಾದ ಅನಂತಮೂರ್ತಿ ಅವರು ಶುದ್ಧ ನೀರಿನ ಘಟಕವನ್ನು ವಿತರಣೆ ಮಾಡಿದರು.

ಶಾಲೆ ವಿದ್ಯಾರ್ಥಿಗಳಿಗೆ ಶುದ್ಧ ನೀರು ಸಿಗಬೇಕು ಜೊತೆಗೆ ಅವರ ಅರೋಗ್ಯದ ಹಿತದೃಷ್ಟಿಯಿಂದ ಹಲವಾರು ಶಾಲೆಗಳಿಗೆ ಉಚಿತವಾಗಿ ಶುದ್ಧ ನೀರಿನ ಘಟಕವನ್ನು ವಿತರಣೆಮಾಡುತ್ತಾ ಇದ್ದೇನೆ. ಕಿರುವತ್ತಿ ಗ್ರಾಮಸ್ಥರು ತುಂಬಾ ಹಿಂದೆ ನನ ಹತ್ತಿರ ಈ ವಿಚಾರದ ಬಗ್ಗೆ ಮಾತನಾಡಿದರು. ಸಾಕಷ್ಟು ಶಾಲೆಗೆ ಕೊಡಬೇಕಾಗಿದ್ದ ಕಾರಣ ಸ್ವಲ್ಪ ವಿಳಂಬವಾಯಿತು.ಒಳ್ಳೆಯ ಕೆಲಸಗಳು ಮಕ್ಕಳಿಗೆ ಸ್ಫೂರ್ತಿ ನೀಡಲಿ ಎಂದು ಕಾರ್ಯಕ್ರಮದಲ್ಲಿ ಅನಂತಮೂರ್ತಿ ಹೆಗಡೆ ಅವರು ಮಾತನಾಡಿದರು.

ನಂತರ ಮುಖ್ಯೋಪಾಧ್ಯಾಯ ಬಸವರಾಜ ಅವರು ಮಾತನಾಡಿ ಅಶುದ್ಧ ನೀರಿನಿಂದ ಮಲೇರಿಯಾ ಡೆಂಗ್ಯೂ ಅಂತಹ ಕಾಯಿಲೆಗಳು ಬರುತ್ತಾ ಇದ್ದಾವೆ. ನೀವು ನೀಡಿದ ಶುದ್ಧ ನೀರಿನ ಘಟಕ ಶಾಲೆಗೆ ತುಂಬಾ ಉಪಯುಕ್ತ ಎಂದರು,ನಂತರ ಶುದ್ಧ ನೀರಿನ ಘಟಕವನ್ನು ಉದ್ಘಾಟನೆ ಮಾಡಿ ಅತಿಥಿಗಳಿಗೆ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ರಮೇಶ ನಾಯ್ಕ ರೈತ ಮೋರ್ಚಾ ಅಧ್ಯಕ್ಷರು, ಮಂಜುನಾಥ ಶುದ್ಧ ನೀರಿನಘಟಕ ಸಂಸ್ಥೆ ಮಾಲೀಕರು, SDMC ಅಧ್ಯಕ್ಷರಾದ ಕೆರೆ ಸ್ವಾಮಿ ಚೆನ್ನಯ್ಯ, ಸಂತೋಷ ನಾಯ್ಕ ಬ್ಯಾಗದ್ದೆ, ಗಜೇಂದ್ರ ನಾಯ್ಕ ಕಿರುವತ್ತಿ ಹಾಗೂ ಊರಿನ ಸದಸ್ಯರು ಮುಂತಾದವರು ಹಾಜರಿದ್ದರು.

ಇದನ್ನೂ ಓದಿ