ಸುದ್ದಿಬಿಂದು ಬ್ಯೂರೋ
ಕಾರವಾರ :- ಕುಮಟಾ -ಶಿರಸಿ ಮಾರ್ಗದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ (National Highway )766E ನನ್ನು ಏಳು ತಿಂಗಳ ಕಾಲ ಬಂದ್ ಮಾಡುವಂತೆ ಜಿಲ್ಲಾಧಿಕಾರಿಗಳು( District Commissioner) ನೀಡಿದ ಆದೇಶವನ್ನು ಸಚಿವ ಮಂಕಾಳು ವೈದ್ಯ ಅವರು ಸೂಚನೆ ನೀಡ ಬೆನ್ನಲೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕ‌ರ್ ಅವರು ಈ ಹಿಂದೆ ನೀಡಿದ ಆದೇಶವನ್ನ ಹಿಂಪಡೆದಿದ್ದಾರೆ.

ಏಳು ತಿಂಗಳವರೆಗೆ ಈ ಹೆದ್ದಾರಿಯಲ್ಲಿ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಂದಲೂ ತೀವ್ರ ವಿರೋಧ ಬಂದ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ರವರ(district incharge minister )ಸೂಚನೆಯಂತೆ ರಸ್ತೆ ಬಂದ್ ಮಾಡಿ ವಾಹನಗಳಿಗೆ ಹೇರಿದ್ದ ನಿರ್ಬಂಧವನ್ನು ಹಿಂಪಡೆದಿದ್ದಾರೆ. ಈ ಹೆದ್ದಾರಿಯನ್ನ ಕಾಮಗಾರಿ ಹೆಸರಲ್ಲಿ ಬಂದ್ ಮಾಡಬಾರದು ಅಂತಾ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಸಹ ವಿರೋಧ ವ್ಯಕ್ತಪಡಿಸಿದ್ದರು.

ಸಾಗರ ಮಾಲಾ ಯೋಜನೆ ಅಡಿ (sagaramala yojane) 440 ಕೋಟಿ ರೂ. ವೆಚ್ಚದಲ್ಲಿ ಹೆದ್ದಾರಿ ಕಾಮಗಾರಿಯನ್ನು 2021ರಲ್ಲಿ ಆರ್.ಎನ್ .ಸಂಸ್ಥೆ ಪ್ರಾರಂಭ ಮಾಡಿತ್ತು ಕಾಮಗಾರಿ ಗೆ ವೇಗ ನೀಡಲು ಹೆದ್ದಾರಿ ಬಂದ್ ಮಾಡುವಂತೆ ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆ ಪಡೆದ ಕಂಪನಿ ಕೇಳಿಕೊಂಡಿತ್ತು.ಹೀಗಾಗಿ ಬದಲಿ ಮಾರ್ಗ ಸೂಚಿಸಿ ಬಂದ್‌ ಮಾಡಲು ಆದೇಶ ನೀಡಲಾಗಿತ್ತು.

ಆದರೆ ಕರಾವಳಿ ಭಾಗಕ್ಕೆ ಬರಲು ಹೆಚ್ಚುವರಿ ದೂರ ಪ್ರಯಾಣಿಸುವ ಸಮಸ್ಯೆ ಪ್ರಯಾಣಿಕರಿಗೆ ಎದುರಾಗಿತ್ತು. ಹೀಗಾಗಿ ಇದೀಗ ಆದೇಶ ಹಿಂಪಡೆದಿದ್ದು ಸೇತುವ ಕಾಮಗಾರಿ ಮಾಡುವಾಗ ಮಾತ್ರ ಕೆಲವು ದಿನಗಳ ಮಟ್ಟಿಗೆ ಬಂದ್‌ ಮಾಡುವುದಾಗಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ..