ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ:ಗಾಂಜಾ ಸಾಗಾಟ ಮಾಡುತ್ತಿದ್ದ ವೇಳೆ‌ ಖಚಿತ ಮಾಹಿತಿ ಮೇಲೆ‌ ದಾಳಿ‌ ನಡೆಸಿದ ಪೊಲೀಸರು ಗಾಂಜಾ ಸಹಿತ ಮೂವರು ಆರೋಪಿಗಳನ್ನ ಬಂಧಿಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ‌ದ‌ ತೆಂಗಿನಗುಂಡಿ ಕ್ರಾಸ್ ಸಮೀಪ ಆರೋಪಿಗಳನ್ನ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಸಯ್ಯದ ಅಕ್ರಮ ಮಹ್ಮಮದ ಹುಸೇನ್, ಅಬ್ದುಲ್ ರೆಹಮಾನ್ ಸಲಿಂ ಶಾಬ್ ಶೇಖ್ ಗುಳ್ಮಿ,ಕಾರು ಚಾಲಕ ಅಜರುದ್ದೀನ್ ತಂದೆ ಮೆಹಬೂಬ್ ಶಾಬ್‌ ಬಂಧಿತ ಆರೋಪಿತರಾಗಿದ್ದಾರೆ,‌‌ಖಾಸಿಂ ಅಬುಮಹ್ಮಮದ್ ಎಂಬಾತ‌ ಪರಾರಿಯಾಗಿದ್ದಾನೆ

ಬಂಧಿತರಿಂದ 9ಕೆಜಿ 170 ಗ್ರಾಂ ಗಾಂಜಾ,‌ಹಾಗೂ ಗಾಂಜಾ‌ ಸಾಗಾಟಕ್ಕೆ ಬಳಸಲಾಗಿದ್ದ‌ ಹುಂಡೈ ಕಂಪನಿಯ ಕಾರನ್ನ ಸಹ ವಶಕ್ಕೆ‌ಪಡೆಯಲಾಗಿದೆ.‌ಒರಿಸ್ಸಾ ಮೂಲದಿಂದ ಹೊನ್ನಾವರ ಕಡೆಯಿಂದ ಭಟ್ಕಳಕ್ಕೆ ಹುಂಡೈ ಕಂಪನಿಯ ಕಾರಿನ ಮೂಲಕ ಗಾಂಜಾ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಭಟ್ಕಳ ನಗರ ಠಾಣೆಯ .ಎಸ್.ಐ. ನವೀನ ಎಸ್ ನಾಯ್ಕ ತಂಡದೊಂದಿಗೆ ತೆಂಗಿನಗುಂಡಿ ಕ್ರಾಸ್ ಸಮೀಪ ಕಾರು ತಡೆದು 4 ಲಕ್ಷ 50 ಸಾವಿರ ಮೌಲ್ಯದ 9 ಕೆಜಿ 170 ಗ್ರಾಂ ಹಾಗೂ ಗಾಂಜಾ ಸಾಗಾಟ ಮಾಡುತ್ತಿದ್ದ ಹುಂಡೈ ಕಂಪನಿಯ ಕಾರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಎಂ.ನಾರಾಯಣ ಹಾಗೂ ಜಿಲ್ಲಾ ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿಗಳಾದ ಸಿ.ಟಿ. ಜಯಕುಮಾರ ಮತ್ತು ಜಗದೀಶ. ಎಂ ,ಮಾರ್ಗದರ್ಶನದಲ್ಲಿ ಭಟ್ಕಳ ಡಿವೈಎಸ್ಪಿ ಮಹೇಶ ಎಂ.ಕೆ. ಮತ್ತು ಶಹರ ಠಾಣೆಯ ಪೊಲೀಸ್ ನಿರೀಕ್ಷಕರಾದ ಗೋಪಿಕೃಷ್ಣ ಕೆ.ಆ‌ರ್.
ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಭಟ್ಕಳ ಶಹರ ಪೊಲೀಸ್ ಠಾಣೆಯ ಎ ಎಸ್.ಐ ಗೋಪಾಲ ನಾಯ್ಕ, ಸಿಬ್ಬಂದಿಗಳಾದ ಜಯರಾಮ್ ಹೊಸಕಟೇ, ಉದಯ ನಾಯ್ಕ, ಗಿರೀಶ ಅಂಕೋಲೆಕರ್, ಮಹಾಂತೇಶ ಹಿರೇಮಠ, ಕಾಶಿನಾಥ ಗೊಟಗುಣಸಿ, ಮಹಾಂತೇಶ ಪೆಮಾರ್,, ದೀಪಕ ನಾಯ್ಕ ,ಮದಾರಸಾಬ ಚಿಕ್ಕೇರಿ, ಕಿರಣ ಪಾಟೀಲ ಹಾಗೂ ಚಾಲಕ ಜಗದೀಶ ನಾಯ್ಕ ಕಾರ್ಯಾಚರಣೆಯಲ್ಲಿ ಇದ್ದರು

ಈ ಬಗ್ಗೆ ಭಟ್ಕಳ ನಗರ ಠಾಣೆಯಲ್ಲಿ ಪಿ.ಎಸ್.ಐ ನವೀನ ನಾಯ್ಕ ಪ್ರಕರಣ ದಾಖಲಿಸಿದ್ದು.ಪ್ರಕರಣ ದಾಖಲಿಸಿಕೊಂಡ ಪಿ.ಎಸ್.ಐ ಶಿವಾನಂದ ನಾವಂದಗಿ ತನಿಖೆ ಕೈಗೊಂಡಿದ್ದಾರೆ.

ಗಮನಿಸಿ