ಸುದ್ದಿಬಿಂದು ಬ್ಯೂರೋ

ವಿಜಯಪುರ : ಜಿಲ್ಲೆಯ ಸಿಂದಗಿ ಸೇರಿದಂತೆ ವಿವಿಧೆಡೆಗಳಲ್ಲಿ ಸಿಗರೇಟ್ ಮಳಿಗೆ ಕಳ್ಳತನ ಮಾಡಿದ ಪ್ರಕರಣದಲ್ಲಿ ಅಂತರರಾಜ್ಯ ಕಳ್ಳರನ್ನ ಸಿಂದಗಿ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ‌.

ಇದನ್ನೂ ಓದಿ:-ವಿಷಕಾರಿ ಎಂಡೋಸಲ್ಫಾನ್ ಕ್ರಿಮಿನಾಶಕ ಹೂತಿರುವ ಬಗ್ಗೆ ಸಮಗ್ರ ತನಿಖೆ ಆಗಲಿ : ಡಾ. ವೆಂಕಟೇಶ ನಾಯ್ಕ

ಬಂಧಿತ ಆರೋಪಿ ಇದುವರೆಗೆ 40ಲಕ್ಷದ 87ಸಾವಿರ ಮೌಲ್ಯದ ಸಿಗರೇಟ್ ಕಳ್ಳತನ ಮಾಡಿದ್ದು, ಈ ಬಗ್ಗೆ ಸಿಂದಗಿ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಆರೋಪಿ ಬಂಧನಕ್ಕಾಗಿ ವಿಶೇಷ ಎರಡು ಪೊಲೀಸ್ ತಂಡವನ್ನ ರಚಿಸಲಾಗಿತ್ತು. ಇಬ್ಬರೂ ಆರೋಪಿಗಳು ಹೊರ ರಾಜ್ಯದಲ್ಲಿ ತಲೆ ಮರೆಸಿಕೊಂಡಿರುವ ಬಗ್ಗೆ ಸಿಂಗದಿ ಎಸ್ಪಿ ರಿಷಿಕೇಶ್ ಸೋನಾವಾಣೆ ಮಾಹಿತಿ ನೀಡಿದ್ದು, ಸಿಂದಗಿ ಪಿಎಸ್ಐ ರಬಕವಿ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ಆರೋಪಿಗಳಿಬ್ಬರನ್ನ ಬಂಧಿಸಲಾಗಿದೆ.