ಶಿರಸಿ : ಮಾರ್ಚ್ 20ರಿಂದ 22ರ ವರೆಗೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಜಿ-20 ಒಕ್ಕೂಟ ರಾಷ್ಟ್ರಗಳ ಭಾಗ ಸಿವಿಲ್ -20 ಇಂಡಿಯಾ 2023 ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಸಮುದಾಯಾಭಿವೃದ್ಧಿ ತಜ್ಞ ಹಾಗೂ ಸೊಡವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ್ ನಾಯ್ಕ ಅವರು ಭಾಗವಹಿಸಲಿದ್ದಾರೆ.
ಸಮಾವೇಶದಲ್ಲಿ ಕರ್ನಾಟಕದಿಂದ 3 ಪ್ರತಿನಿಧಿಗಳು ಭಾಗವಹಿಸುತ್ತಿದ್ದು ಅವರಲ್ಲಿ ಡಾ.ವೆಂಕಟೇಶ್ ನಾಯ್ಕ ಸಹ ಒಬ್ಬರಾಗಿದ್ದಾರೆ. ಪ್ರಪಂಚದ ರಾಷ್ಟ್ರಗಳ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಹಾಗೂ ಮಾನವೀಯತೆ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಸಿವಿಲ್ ಸೊಸೈಟಿ ಆರ್ಗನೈಜೆಷನ್ ಗಳ ಪಾತ್ರ ಕುರಿತು ಡಾ.ವೆಂಕಟೇಶ ನಾಯ್ಕ ವಿಷಯ ಮಂಡಿಸಲಿದ್ದಾರೆ.
ಸಿವಿಲ್ -20 ಇಂಡಿಯಾ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸುತ್ತಿರುವ ಡಾ. ವೆಂಕಟೇಶ ನಾಯ್ಕ ಅವರನ್ನು ಶಿರಸಿ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾಂಗ್ರೆಸ್ ಮುಖಂಡ ಭೀಮಣ್ಣನಾಯ್ಕ ಸೊಡವೆಸ್ ಸಂಸ್ಥೆಯ ಅಧ್ಯಕ್ಷ ಡಾ. ರಾಜೇಂದ್ರಕುಮಾರ, ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ಅನೇಕ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.