ಸುದ್ದಿಬಿಂದು ಬ್ಯೂರೋ ವರದಿ
Karwar ಕಾರವಾರ: ನಗರದ ಸಂತೆ ಮಾರ್ಕೆಟ್ ನಲ್ಲಿ ತರಕಾರಿ ವ್ಯಾಪಾರಕ್ಕೆ ಬಂದಿದ್ದ ಅನ್ಯಕೋಮಿನ ವ್ಯಾಪಾರಿ ಓರ್ವ ತರಕಾರಿಗೆ ಎಂಜಲು ಉಗಿದ ವ್ಯಕ್ತಿಯನ್ನ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

ನಗರದ ಕಾರವಾರದ ಪಿಕಳೆ ರಸ್ತೆಯಲ್ಲಿ ತರಕಾರಿ ಮಾರಾಟಕ್ಕೆ ತಂದಿದ್ದ ವ್ಯಕ್ತಿ ಎಂಜಲನ್ನು ಪದೇ ಪದೇ ಉಗಿಯುತ್ತಿದ್ದು ಇದನ್ನ ಗಮನಿಸುತ್ತಿದ್ದ ಸಾರ್ವಜನಿಕರು ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಬಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದನ್ನ ಗಮನಿಸಿದ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಆ ವ್ಯಕ್ತಿಗೆ ತರಾಟೆಗೆ ತೆಗೆದುಕೊಂಡಿದ್ದರು..

ಬಳಿಕ ತರಕಾರಿ ಮೇಲೆ ಎಂಜಲು ಉಗಿದ ಅನ್ಯಕೋಮಿನ ವ್ಯಾಪಾರಿಯಾಗಿರುವ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಬ್ದಲುಲ್ ಹಸನ್ ಸಾಬ್ ರಜಾಕ್‌ ಎಂಬುವವರನ್ನ ಈಗಾಗಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಈ ಘಟನೆಯಿಂದ ಕಾರವಾರದ ಜನ ಬೆಚ್ಚಿಬಿದ್ದಿದ್ದಾರೆ .

ಗಮನಿಸಿ