ಸುದ್ದಿಬಿಂದು ಬ್ಯೂರೋ
ಕುಮಟಾ : ಇದೀಗ ಬೇಸಿಗೆ ಆರಂಭವಾಗಿದ್ದು,ಕುಡಿಯುವ ಹನಿ ನೀರಿಗಾಗಿ ಮಹಿಳೆಯರು ಪರದಾಡುತ್ತಿದ್ದಾರೆ. ಶಾಸಕ ದಿನಕರ ಶೆಟ್ಟಿ ಅವರು ಗ್ರಾಮ ಒಂದಕ್ಕೆ ಭೇಟಿ ನೀಡಿದ ವೇಳೆ ಮಹಿಳೆಯರು ನೀರಿನ ಸಮಸ್ಯೆ ಹೇಳಿಕೊಳ್ಳುತ್ತಿದ್ದಾಗ ಯಾರೋ ಒಬ್ಬರು ವಿಡಿಯೋ ರೇಕಾರ್ಡ್ ಮಾಡಿಕೊಳ್ಳುತ್ತಿರುವುದನ್ನ ಗಮನಿಸಿದ ಶಾಸಕರು ಯುವಕನ ವಿರುದ್ಧ ಪುಲ್ ಗರಂ ಆಗಿ ರೇಕಾರ್ಡ್ ಮಾಡು ಮತ್ತೊಂದು ಮಾಡು, ನಾ ಏನು ಮಾಡಲ್ಲ ಎಂದು ಹೇಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಶಾಸಕ ದಿನಕರ ಶೆಟ್ಟಿ ಅವರು ಆ ಒಂದು ಗ್ರಾಮಕ್ಕೆ ಹೋಗಿದ್ದ ಸಮಯಲ್ಲಿ ಘಟನೆ ನಡೆದಿದೆ. ಆದರೆ ಅದು ಯಾವ ಗ್ರಾಮ ಎಂಬುದು ಸಹ ತಿಳಿಯುತ್ತಿಲ್ಲ. ಆದರೆ ಶಾಸಕರು ಆ ಕ್ಷಣದಲ್ಲಿ ನಡೆದುಕೊಂಡ ಬಗ್ಗೆ ಕ್ಷೇತ್ರದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಶಾಸಕರು ಹೆಗಡೆ ಗ್ರಾಮಕ್ಕೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಶಾಸಕರು ಗ್ರಾಮಕ್ಕೆ ಬಂದಿರುವ ವೇಳೆ ಮಹಿಳೆ ಓರ್ವಳು ನಮ್ಮಗೆ ಬೇಸಿಗೆಯಲ್ಲಿ ಹನಿ ನೀರು ಇಲ್ಲ. ನೀರ ಕೊಟ್ಟರೆ ಪುಣ್ಯ ಬರುತ್ತದೆ. ಎಂದು ತಮ್ಮಗಿರುವ ನೀರಿನ ಸಮಸ್ಯೆ ಬಗ್ಗೆ ಶಾಸಕರ ಬಳಿ ಕೈ ಮುಗಿದು ಬೇಡಿಕೊಂಡಿರುವುದು ಆ ವಿಡಿಯೊಂದ ತುಣುಕಿನಲ್ಲಿ ಗೋಚರಿಸುತ್ತಿದೆ.
ಆದರೆ ಇದೆ ವೇಳೆ ಅಲ್ಲೆ ಇದ್ದ ಯುವಕನೋರ್ವ ಎಲ್ಲವನ್ನ ತನ್ನ ಮೊಬೈಲ್ ನಲ್ಲಿ ರೇಕಾರ್ಡ್ ಮಾಡಿಕೊಳ್ಳುತ್ತಿದ್ದ, ಇದನ್ನ ಗಮನಿಸಿದ ಶಾಸಕರು ಅದ್ಯಾಕೋ ಒಮ್ಮೇಲೆ ಏರು ಧ್ವನಿಯಲ್ಲಿ ನೀಯಾಕೆ ವಿಡಿಯೋ ಮಾಡತ್ತಾ ಇದ್ದೀಯಾ.ವಿಡಿಯೋ ಅಲ್ಲ ಮತ್ತೇನಾದರೂ ಮಾಡಕೋ.ಇದೇಲ್ಲಾ ಯಾಕೋ ಸರಿ ಕಾಣಲ್ಲ. ಏನು ಮಾಡಲ್ಲ. ನೀವು ಏನ ಬೇಕಾದರೂ ಮಾಡಕೊಳ್ಳಿ ಎಂದು ಅಲ್ಲಿಂದ ತೆರಳಿರುವಂತಿದೆ. ಶಾಸಕರ ನಡೆಯನ್ನ ವಿಡಿಯೋದಲ್ಲಿ ನೋಡಿದ ಅದೆಷ್ಟೋ ಮಹಿಳೆಯರು ನೀರು ಕೇಳಿದರೆ ಶಾಸಕರು ಹೀಗ್ಯಾಕೆ ಮಾಡುತ್ತಾರೆ ಎಂದು ದಿನಕರ ಶೆಟ್ಟಿ ಅವರ ವಿರುದ್ದ ಅಸಮಧಾನ ವ್ಯಕ್ತಪಡಿಸುತ್ತಾರೆ.
ಆದರೆ ಈ ವಿಡಿಯೋ ಯಾವಾಗ ಮಾಡಿದ್ದು, ಚುನಾವಣೆ ಪ್ರಚಾರದ ಸಮಯದಲ್ಲೆ ಮಾಡಲಾಗಿದೆ ಎನ್ನುವುದು ಸ್ಪಷ್ಟವಾಗಿಲ್ಲ.ಇದನ್ನ ಸೂಕ್ಷ್ಮವಾಗಿ ಗಮನಿಸಿದರೆ. ಚುನಾವಣೆ ಷೋಷಣೆಗೆ ಪೂರ್ವಸಲ್ಲಿ ಮಾಡಿರುವ ವಿಡಿಯೋ ಎನ್ನುವ ಬಗ್ಗೆ ಸಹ ಚರ್ಚೆ ಆಗುತ್ತಿದೆ. ಇನ್ನೊಂದು ಕಡೆ ಯಾವ ಸಮಯದಲ್ಲಿ ಆಗಿದ್ದರು ಸಹ ಶಾಸಕರು ವಿಡಿಯೋ ಮಾಡುವುದನ್ನ ಗಮನಿಸಿ ಈ ರೀತಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದಿಲ್ಲ ಎಂದು ಹೇಳಿ ಹೋಗಿರುವುದು ಎಷ್ಟು ಸರಿ ಎನ್ನವ ಚರ್ಚೆ ಸಹ ನಡೆಯುತ್ತಿದೆ. ಆದರೆ ಚುನಾವಣಾ ಸಮಯದಲ್ಲಿ ಆ ವಿಡಿಯೋ ವೈರಲ್ ಆಗುತ್ತಿದ್ದು, ಇದು ದಿನಕರ ಶೆಟ್ಟಿ ಅವರಿಗೆ ಹಿನ್ನಡೆ ಉಂಟಾಗುವಂತೆ ಆಗುತ್ತಿದೆ. ಇವೆಲ್ಲಕ್ಕೂ ಶಾಸಕ ದಿನರಕ ಶೆಟ್ಟಿ ಅವರೆ ಈ ಬಗ್ಗೆ ಸ್ಪಷ್ಟನೆ ನೀಡುವ ಮೂಲಕ ಸತ್ಯ ಘಟನೆಗೆ ಅಂತ್ಯ ಹಾಡಬೇಕಿದೆ.