ಕಾರವಾರ: ಸುದ್ದಿ ಬಿಂದು'ವೆಬ್‌ ನ್ಯೂಸ್‌ ಸದಾ ಸತ್ಯದ ಅನ್ವೇಷಣಕಾರ. ನಿತ್ಯವೂ ಜಿಲ್ಲೆಯ ರಾಜಕೀಯ,ಸಾಮಾಜಿಕ ಘಟನೆಗಳ ಬಗ್ಗೆ ಹದ್ದಿನ ಕಣ್ಣಿಟ್ಟು,ಆ ಘಟನೆಯ ಬೆನ್ನತ್ತಿ,ವಿಶ್ಲೇಷಿಸಿ ತನ್ನ ಓದುಗರಿಗೆ ಎಲ್ಲರಿಗಿಂತ ಮೊದಲುಸುದ್ದಿ ಬಿಂದು’ ಟೀಂ ಬ್ರೇಕ್‌ ಮಾಡುತ್ತಾ ಬಂದಿದೆ. ಹೀಗಾಗಿ ಸುದ್ದಿ ಬಿಂದು ಸುದ್ದಿ ಜಗತ್ತಿನಲ್ಲಿ ಅತ್ಯಂತ ಮಹತ್ವದ ಸ್ಥಾನಗಳಿಸಿಕೊಂಡಿದೆ. ಓದುಗರ ಪ್ರೀತಿ, ವಿಶ್ವಾಸದ ಜತೆ, ದೊಡ್ಡದಾದ ಓದುಗರ ಬಳಗವನ್ನೇ ಸೃಷ್ಠಿಸಿಕೊಂಡಿದೆ.* ಈತನ ಹುಚ್ಚಾಟ ಇದೆ ರೀತಿ ಮುಂದುವರೆದರೆ “ಕಂಬಳಿ” ಹೊದ್ದುಮಲಗುವ ದಿನ ಬಹಳ‌ ದೂರವಿಲ್ಲ

ಆದರೆ `ಸುದ್ದಿ ಬಿಂದು’ವಿನ ಜನಪ್ರಿಯತೆ, ಬ್ರೆಕಿಂಗ್ ಸುದ್ದಿಯನ್ನು ಓದಿ, ‘ಅ*ಡು’ ಸುಟ್ಟಿದ ಬೆಕ್ಕಿನಂತೆ ರಾಷ್ಟ್ರೀಯ ಪಕ್ಷದ ಸಾಮಾಜಿಕ ಜಾಲತಾಣದ ಸದಸ್ಯ ಓಡಾಡುತ್ತಿರುವುದು ಲೆಟೆಸ್ಟ್‌ ಬೆಳವಣಿಗೆ. ಜಿಲ್ಲೆಯ ಕುಮಟಾದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಭೆಯ ಬಗ್ಗೆ, ಸಭೆಯಲ್ಲಿ ಸಂಘದ ಪ್ರಮುಖ ಹಾಗೂ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಭಾಗವಹಿಸುವಿಕೆಯ ಬಗ್ಗೆ ಹಾಗೂ ಕಾರವಾರ ಕ್ಷೇತ್ರದಲ್ಲಿ ಒಂದೊಮ್ಮೆ ಉಪಚುನಾವಣೆ ನಡೆದಲ್ಲಿ, ಮಾಜಿ ಸಂಸದ ಅನಂತಕು ಕುಮಾರ ಹೆಗಡೆ ಅಭ್ಯರ್ಥಿಯಾಗಿಸುವ ಬಗ್ಗೆ ಸಂಘದ ಚಿಂತನೆಯ ಕುರಿತು ‘ಸುದ್ದಿ ಬಿಂದು’ ಸುದ್ದಿ ಬ್ರೇಕ್‌ ಮಾಡಿತ್ತು.

ಈ ಸುದ್ದಿಯನ್ನು ಓದಿ, ‘ಬುಡ’ ಸುಟ್ಟವರಂತೆ, ಉರಿ ಉರಿ ಎನ್ನುತ್ತಾ, ಸುದ್ದಿ ಬಿಂದು ಸುಳ್ಳು ಸುದ್ದಿ ಹರಡುತ್ತದೆ. ಸಂಘದ ಕಾರ್ಯಕ್ರಮದ ಬಗ್ಗೆ ಯಾರಿಗೂ ಗೊತ್ತಾಗುವುದಿಲ್ಲ. ಸಂಘದ ಪ್ರಮುಖರು ಮಾಧ್ಯಮಗಳಿಗೆ ಮಾಹಿತಿ ನೀಡುವುದೇ ಇಲ್ಲ ಎನ್ನುತ್ತಾ ನಮ್ಮ ವೆಬ್‌ ನ್ಯೂಸ್‌ ಬಗ್ಗೆ ಗ್ರುಪ್‌ನಲ್ಲಿ ಆಕ್ಷೇಪಾರ್ಹ ಕಮೆಂಟ್‌ ಮಾಡುತ್ತಾ, ಬಿಸ್ಕಿಟ್‌ಗಾಗಿ ಸುದ್ದಿ ಮಾಡುವವರು ಎಂದು ತೆಗಳುತ್ತಾ, ಸುದ್ದಿ ಬಿಂದುವಿನ ಸುದ್ದಿಯ ಬಗ್ಗೆ ಅವಹೇಳನ ಮಾಡುತ್ತಿರುವುದನ್ನು ಕಂಡು ಈ ವ್ಯಕ್ತಿಯ ವರ್ತನೆಯ ಬಗ್ಗೆ ನಮ್ಮ ಹೆಮ್ಮೆಯ ಓದುಗರು ತೀವ್ರ ಅಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದ ಮುಖ್ಯಸ್ಥ ಎಂದು ಹೇಳಿಕೊಳ್ಳುವ ಈ ದಢೂತಿ ವ್ಯಕ್ತಿಗೆ ತನ್ನ ಕರ್ತವ್ಯ, ಇತಿಮಿತಿಯ ಬಗ್ಗೆ ಕಿಂಚಿತ್ತು ಜ್ಞಾನವಿದ್ದಂತಿಲ್ಲ. ಪಕ್ಷದ ಸಂಘಟನೆಯ ಕುರಿತಾದ ಮಾಹಿತಿ, ಕಾರ್ಯಕ್ರಮದ ಬಗ್ಗೆ, ಸಭೆಯ ಮಾಹಿತಿ ಕುರಿತು, ಪಕ್ಷದ ವತಿಯಿಂದ ಕಳುಹಿಸಿದರೆ ಮಾತ್ರ ಎಲ್ಲ ಗ್ರುಪ್‌ಗಳಲ್ಲಿ ಪೋಸ್ಟ್‌ ಮಾಡುವುದು ಈತನ ಕೆಲಸ. ಪಕ್ಷಕ್ಕೆ ಸಂಬಂಧಿಸಿದಂತೆ ಹೇಳಿಕೆಗಳನ್ನು ನೀಡುವುದಿದ್ದಲ್ಲಿ ಅಥವಾ ಹೇಳಿಕೆಗಳ ಸಮರ್ಥನೆ, ಸಮಾಜಾಯಿಶಿ ನೀಡಬೇಕಿರುವುದು ಪಕ್ಷದ ಹಿರಿಯರು ಅಥವಾ ವಕ್ತಾರರು ಎಂಬುದನ್ನು ಮೊದಲು ತಿಳಿಯಬೇಕು ಎನ್ನುವುದು ಪಕ್ಷದ ಕಾರ್ಯಕರ್ತರ ಅಭಿಪ್ರಾಯ.

‘ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ ಎಂಬಂತೆ, ಎಲ್ಲೂ ಸಲ್ಲದ ಈ ವ್ಯಕ್ತಿಯು, ಕಳೆದ ವಿಧಾನಸಭಾ ಚುನಾವಣೆಯ ವೇಳೆ ಪ್ರೀತಿಯಿಂದ ಅನ್ನ ನೀಡಿ ಸಲಹಿದ ತನ್ನ `ಒಡತಿಯ’ ವಿರುದ್ಧವೇ ಮಸಲತ್ತು ಮಾಡಿ, ಈ ಬಾರಿ ಟಿಕೇಟ್‌ ಅವರಿಗೆ ಸಿಗುವುದಿಲ್ಲ ಎನ್ನುತ್ತಾ, ಕಂಡ ಕಂಡವರ ಬಳಿ ಹಲುಬಿದ್ದನ್ನು ಜನ ಇನ್ನು ಮರೆತಿಲ್ಲ ಎಂಬುದು ಈ ದಢೂತಿ ಆಸಾಮಿ ನೆನಪಿಡಬೇಕು.

ಎರಡು ಅಲಗಿನ ಕತ್ತಿಯಂತೆ ಕೆಲಸ ಮಾಡುವ ಈತ, ಪಕ್ಷದ ಪ್ರಮುಖರ ಮಾಹಿತಿಯನ್ನು, ಡಿಟ್ಟೋ ಎದುರಾಳಿಗಳಿಗೆ ‘ತುಂಡು ಬಿಸ್ಕಿಟ್‌’ಗಾಗಿ ನೀಡುವುದು ಈತನ ಹಳೇ ಚಾಳಿ. ಹೀಗಾಗಿ ಪಕ್ಷದ ಪ್ರಮುಖರು ಇಂಥ ಶಕುನಿಯನ್ನು ಕೈಬಿಟ್ಟು, ಕ್ರೀಯಾಶೀಲ, ತನ್ನ ಕರ್ತವ್ಯದ ಇತಿಮಿತಿ ಬಲ್ಲ, ಪಕ್ಷದ ತತ್ವ ಸಿದ್ಧಾಂತದ ಬಗ್ಗೆ ನಿಷ್ಠೆ ಹೊಂದಿರುವ ನಿಷ್ಠಾವಂತರನ್ನು ಈ ಸಾಮಾಜಿಕ ಜಾಲತಾಣದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಿ ಎಂಬುದು ಪಕ್ಷದ ನಿಷ್ಠಾವಂತರ ಒತ್ತಾಸೆಯಾಗಿದೆ.

ಗಮನಿಸಿ