ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು:ಸದಾ ಸಿನಿಮಾದಲ್ಲಿ‌ ಬ್ಯೂಜಿಯಾಗಿ ಇರತ್ತಾ ಇದ್ದ ಹ್ಯಾಟ್ರಿಕ್ ಹಿರೋ ಶಿವರಾಜ್‌‌ಕುಮಾರ ಇದೀಗ ಮೂತ್ರಕೋಶ ಕ್ಯಾನ್ಸರ್‌ ಚಿಕಿತ್ಸೆಗಾಗಿ ಅಮೇರಿಕಾ‌ ಆಸ್ಪತ್ರೆಗೆ ದಾಖಲಾಗಿದ್ದಾರೆ…

ಕಳೆದ ಕೆಲದ ದಿನಗಳ‌ ಹಿಂದಷ್ಟೆ‌‌ ನಟ ಶಿವರಾಜ್ ಕುಮಾರ ಅವರು ತಮ್ಮ‌ ಅನಾರೋಗ್ಯದ ಬಗ್ಗೆ ಯೂಟ್ಯೂಬ್ ಚಾನಲ್‌ಒಂದರಲ್ಲಿ ಹೇಳಿಕೊಂಡಿದ್ದು, ನಾನು ಕೂಡ ಮನುಷ್ಯ ಎಲ್ಲರಂತೆ ನನಗೂ ಸಹ ಆರೋಗ್ಯ ಸಮಸ್ಯೆ ಉಂಟಾಗಿದೆ.‌ಈ ಬಗ್ಗೆ ನಮ್ಮ‌ ಸಿನಿಮಾ‌ರಂಗದಲ್ಲಿನ ಒಂದಿಷ್ಟು ಸ್ನೇಹಿತರ ಜೊತೆ ಈ ಬಗ್ಗೆ ಹಂಚಿಕೊಂಡಿದ್ದೇನೆ. ನನಗೆ ಬಂದಿರುವ ಕಾಯಿಲೆ ಬಗ್ಗೆ ಎಲ್ಲಿ ಚಿಕಿತ್ಸೆ ಪಡೆಯಬೇಕು ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ಮಾಡಿ‌‌ ಕೊನೆಗೆ‌‌ ಅಮೇರಿಕಾದಲ್ಲೇ ಚಿಕಿತ್ಸೆಗೆ ತೆಗೆದುಕೊಳ್ಳುವುದು ಒಳ್ಳೆಯದು‌ ಎನ್ನುವ ಬಗ್ಗೆ ತೀರ್ಮಾನಕ್ಕೆ ಬರಲಾಗಿದೆ ಎಂದಿದ್ದಾರೆ.

ಹೀಗಾಗಿ ಈಗಾಗಲೆ ಕುಟುಂಬದ ಸದಸ್ಯರೊಂದಿಗೆ ನಟ ಶಿವರಾಜ್‌ಕುಮಾರ ಇದೀಗ ಕ್ಯಾನ್ಸ್‌ರ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ.

ಗಮನಿಸಿ