ಸುದ್ದಿಬಿಂದು ಬ್ಯೂರೋ ವರದಿ(sudibindu digital news)
ಕಾರವಾರ: ಬಿಜೆಪಿಯ ಕಾರವಾರ ಗ್ರಾಮೀಣ ಮಂಡಳ ಇಂದು ಕಾರವಾರದಲ್ಲಿ ಸಂಘಟನಾ ಪರ್ವ 2024 ರನ್ನು ಆಯೋಜಿಸಿದೆ. ಈ ಕಾರ್ಯಕ್ರಮದ ಪೋಸ್ಟರ್ ಗಳು ನಗರದಲ್ಲಿ ರಾರಾಜಿಸುತ್ತಿದ್ದು. ಆ ಪೊಸ್ಟರ್ ನಲ್ಲಿ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಪೋಟೋ ಕೈ ಬಿಟ್ಟಿರುವುದಕ್ಕೆ ಬಿಜೆಪಿಯಲ್ಲೇ ಇದೀಗ ಅಸಮಧಾನಕ್ಕೆ ಕಾರಣವಾಗಿದೆ. ಇದರ ಹಿಂದೆ ರಾಜ್ಯ ನಾಯಕೀಯ ಕೈವಾಡ ಇದೆ ಎಂದು ಬಿಜೆಪಿಯ ಸಾಮಾಜಿಕ ಜಾಲತಾಣದಲ್ಲೆ ಬಹಿರಂಗ ಚರ್ಚೆ ನಡೆಯುತ್ತಿದೆ.
ಕಾರ್ಯಕ್ರಮದ ಪ್ಲೆಕ್ಸ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ವಿಧಾನ ಸಭೆಯ ವಿರೋಧಿ ಪಕ್ಷದ ನಾಯಕ ಆರ್ ಅಶೋಕ್, ವಿಧಾನ ಪರಿಷತ್ ವಿರೋಧಿ ಪಕ್ಷದ ನಾಯಕ ಚಲುವಾದಿ ನಾರಾಯಣಸ್ವಾಮಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಉತ್ತರಕನ್ನಡ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ, ಮಾಜಿ ಶಾಸಕಿ ರೂಪಾಲಿ ನಾಯ್ಕ, ಕಾರವಾರ ಗ್ರಾಮೀಣ ಮಂಡಳ ಅಧ್ಯಕ್ಷ ಸುಭಾಸ್ ಗುನಗಿ ಪೋಟೋಗಳು ರಂಜಿಸುತ್ತಿದೆ. ಆದರೆ ಜಿಲ್ಲೆಯ ಶಾಸಕರು, ಕಾರವಾರದ ಸ್ಥಳೀಯರು ಆದ ಹಾಲಿ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಪೋಟೋ ಹಾಕಿಲ್ಲ. ಇದೆಲ್ಲವನ್ನು ಗಮನಿಸಿದ್ರೇ ಬಿಜೆಪಿಯಲ್ಲಿ ಎಲ್ಲವೂ ಎಲ್ಲರೂ ಸರಿಯಿಲ್ಲ ಎಂದು ಭಾಸವಾಗುತ್ತಿದೆ. ಗಣಪತಿ ಉಳ್ವೇಕರ್ ಪೋಟೋ ಹಾಕದಿರುವ ನಿರ್ಧಾರದ ಹಿಂದೆ ಯಾರ ಕೈವಾಡ ಇದೆ ಎನ್ನುವುದು ಬಹಿರಂಗವಾಗಬೇಕಿದೆ.
ಉಳ್ವೇಕರ್ ಮುಂದಿನ ಬಾರಿ ಕಾರವಾರ ವಿಧಾನ ಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಲು ಪ್ರಯತ್ನ ನಡೆಸುತ್ತಿದ್ದಾರೆ. ಉಳ್ವೇಕರ್ ಪೋಟೋ ಹಾಕಿದರೆ ಪುಕ್ಕಟ್ಟೆ ಪ್ರಚಾರ ಸಿಗಬಹುದು ಎಂದು ಅವರ ಪೋಟೋವನ್ನು ಕೈ ಬಿಡಲಾಗಿದೆ ಎನ್ನುವ ಮಾತು ಕೇಳಿಬಂದಿದೆ. ಒಬ್ಬ ಹಿಂದುಳಿದ ವರ್ಗದ ನಾಯಕರು.ಹಾಲಿ ವಿಧಾನ ಪರಿಷತ್ ಸದಸ್ಯರಾಗಿರುವ ಗಣಪತಿ ಉಳ್ವೇಕರ್ ಪೋಟೋ ಬಿಟ್ಟಿರುವುದಕ್ಕೆ ಬಿಜೆಪಿಯಲ್ಲಿ ವಿರೋಧಕ್ಕೆ ಕಾರಣವಾಗಿದೆ. ತನ್ನ ಸ್ವಾರ್ಥ ರಾಜಕಾರಣಕ್ಕಾಗಿ ಕಿಳುಮಟ್ಟದ ರಾಜಕೀಯ ಮಾಡುವವರ ವಿರುದ್ಧ ಹೈಕಮಾಂಡ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಒತ್ತಾಯ ಇದೀಗ ಆರಂಭವಾಗಿದೆ.
ಗಮನಿಸಿ