suddibindu.in
ಕಾರವಾರ: ತಾಲೂಕಿನ ಅಸ್ನೋಟಿಯ ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕ ಸಂಭವಿಸಿ ಕಾರಿಗಳು ಜಖಂ ಆಗಿದ್ದು, ಸವಾರರಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ.

ಗಜಾನನ ಗಾಂವಕರ ಎನ್ನುವವರು ಇಲ್ಲಿನ ಉಳಗಾ ಕಡೆಯಿಂದ  ಕಾರವಾರದ ಕಾರಿನಲ್ಲಿ ಪತ್ನಿ ಹಾಗೂ ಸಂಬಂಧಿಕರೊಂದಿಗೆ ತೆರಳುತ್ತಿದ್ದರು. ಕಾರು ಅಸ್ನೋಟಿಯ ಬಳಿ ಬಂದಾಗ ಅಸ್ನೋಟಿಯ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರನ್ನ ಕಾರವಾರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ

ಅಪಘಾತಕ್ಕೆ ಕಾರಣವಾದ ಕಾರಿನ ಚಾಲಕನನ್ನು ಮಸ್ಸಾ ಬಗಿಚಾ ಸಿಂಗ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಚಿತ್ತಾಕುಲ ಠಾಣೆಯಲ್ಲಿ ದಾಖಲಾಗಿದೆ.