suddibindu.in
ಕುಮಟಾ : ಸಿಗಡಿ ಗಜನಿಯಲ್ಲಿ ಹಗಲಿರುಳು ಕಷ್ಟಪಟ್ಟು ದುಡಿದ ಕಾರ್ಮಿಕರಿಗೆ, ದಿನಸಿ ಖರೀದಿಸಿದ ಅಂಗಡಿ‌ ಮಾಲೀಕರಿಗೆ ಹಾಗೂ ಕೆಲಸಕ್ಕೆ ಬಳಸಿಕೊಂಡ‌ ವಾಹನ ಮಾಲೀಕರಿಗೆ ಲಕ್ಷಾಂತ‌ ರೂಪಾಯಿ ಹಣ ನೀಡದೆ ಸತ್ತಾಯಿಸುತ್ತಿರುವುದಲ್ಲದೇ ಕೂಲಿ ಹಣ ಕೇಳಲು ಹೋದ‌ ಕಾರ್ಮಿಕರಿಗೆ ಕಂಪನಿಯ ಮಾಲೀಕರು ಜೀವ ಬೆದರಿಕೆ ಹಾಕಿರುವ ಬಗ್ಗೆ ಉತ್ತರಕನ್ನಡ ಜಿಲ್ಲೆಯ ಗೋಕರ್ಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಕುಮಟಾ ತಾಲೂಕಿನ ಬರ್ಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಿಮಾನಿಯಲ್ಲಿ ಗುಜರಾಜ್‌ ರಾಜ್ಯದ ಶ್ರಿಂಮ್ಸ್‌ ಹೆಸರಿನ ಕಂಪನಿಯೊಂದು ಕಳೆದ ಏಳು ವರ್ಷದಿಂದ ರೈತರ ಗಜನಿಯನ್ನ ಪಡೆದು ಸಿಗಡಿ ಕೃಷಿ ಮಾಡಿಕೊಂಡಿದ್ದರು,ಇವರ ಸಿಗಡಿ ಕೃಷಿಯಲ್ಲಿ ಕೆಲಸ ಮಾಡಲು ಸ್ಥಳೀಯರನ್ನ ಕೆಲಸಕ್ಕೆ ನೇಮಿಸಿಕೊಂಡಿದ್ದರು,

ಇದನ್ನೂ ಓದಿ

ಆದರೆ ಆ ಕಂಪನಿ ಇಲ್ಲಿ ಸಿಗಡಿ ಕೃಷಿ ಮಾಡುತ್ತಿರುವ ವೇಳೆ ಕಾರ್ಮಿಕರು ತಮ್ಮ ಸಂಬಳ ಕೇಳಿದಾಗ ಸಂಬಳ ನೀಡುವುದಾಗಿ ಭರವಸೆ ನೀಡುತ್ತಲೆ ಕಾಲ ಕಳೆದಿದ್ದಾರೆ, ಆದರೆ ಈ ಹಿಂದೆ ಸಿಗಡಿ ಕೃಷಿ ಮಾಡಿಕೊಂಡಿದ್ದ ಶ್ರಿಂಮ್ಸ್‌ ಕಂಪನಿ ಬೇರೆಯೊಂದು ಕಂಪನಿಗೆ ಗುತ್ತಿಗೆ ನೀಡಿ ಈ ಹಿಂದೆ ಕೆಲಸ ಮಾಡಿದ ಕಾರ್ಮಿಕರಿಗೆ, ಕಿರಾಣಿ ಅಂಗಡಿ ಮಾಲೀಕರಿಗೆ ಹಾಗೂ ವಾಹನ ಮಾಲೀಕರಿಗೆ ಎರಡು ಲಕ್ಷಕ್ಕೂ ಅಧಿಕ ಹಣ ಪಂಗನಾಮ ಹಾಕಿ ಪರಾರಿ ಪರಾರಿಯಾಗಿದ್ದಾರೆ.

ಈ ಹಿಂದೆ ಶ್ರಿಂಮ್ಸ್‌ ಸಿಗಡಿ ಕಂಪನಿಯಲ್ಲಿ ಕೆಲಸ ಮಾಡಿದ ಕಾರ್ಮಿಕರು ಇಂದು ಈಗ ಸಿಗಡಿ ಕೃಷಿ ಮಾಡುತ್ತಿರುವ ಕಚೇರಿಯ ಗೇಟ್ ಬಳಿ ಮುತ್ತಿಗೆ ಹಾಕಿ ನಾವು ಈ ಹಿಂದೆ ಇಲ್ಲಿ ಕೆಲಸ ಮಾಡಿದ್ದೇವೆ ಆದರೆ ನಮ್ಮಗೆ ಸಂಬಳ ನೀಡಿಲ್ಲ ಇದರಿಂದಾಗಿ ನಮ್ಮಗೆ ಜೀವನ ನಡೆಸುವುದು ಕಷ್ಟವಾಗಿದೆ.ನಮ್ಮ ಸಂಬಳ ನೀಡದೆ ಹೋದರೆ ಇಲ್ಲಿದ್ದ ಹೋಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ತಕ್ಷಣ ಈಗ ಕಾರ್ಯನಿರ್ವಹಿಸುತ್ತಿರುವ ಸಿಗಡಿ ಕಂಪನಿಯ ಸಿಬ್ಬಂದಿಗಳು ಶ್ರಿಂಮ್ಸ್‌ ಕಂಪನಿಯ ಮಾಲೀಕರಿಗೆ ಪೋನ್‌ ಮಾಡಿದ್ದಾರೆ, ಕರೆ ಸ್ವೀಕರಿಸಿದ ಗುಜರಾತಿ ಕಂಪನಿಯ ಮಾಲೀಕ ನಾವು ಯಾರಿಗೂ ಹಣ ಕೊಡುವುದು ಬಾಕಿ ಇಲ್ಲ, ಅವರು ಏನ ಬೇಕಾದ್ರೂ ಮಾಡಿಕೊಳ್ಳಲ್ಲಿ, ಹಣ ಕೇಳಿದ್ದರೆ ಗುಜರಾತ್‌ ದಿಂದ ಅಲ್ಲಿಗೆ ಬಂದು ಅವರಿಗೆ ಒಂದು ಗತಿ ಕಾಣಿಸಬೇಕಾಗತ್ತೆ ಎಂದು ಬೇದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಈಗಾಗಲೇ ಈ ಕಂಪನಿಯ ವಿರುದ್ಧ ದೂರು ದಾಖಲಾಗಿದ್ದು, ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಕ್ರಮ ಕೈಗೊಳ್ಳುವ ಮೂಲಕ ಬಡ ಕಾರ್ಮಿಕರಿಗೆ,ಅಂಗಡಿ ಹಾಗೂ ವಾಹನ ಮಾಲೀಕರಿಗೆ ಬರಬೇಕಾದ ಲಕ್ಷಾಂತರ ರೂಪಾಯಿ ಹಣ ನೀಡುವಂತೆ ಮಾಡಬೇಕಿದ್ದು, ಜೊತೆಗೆ ಕಾರ್ಮಿಕರಿಗೆ ಜೀವ ಬೇದರಿಕೆ ಹಾಕಿರುವ ಕಂಪನಿ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಿದೆ.