ಕುಮಟಾ : ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ಓರ್ವನಿಗೆ ಕಾರ ಡಿಕ್ಕಿ ಹೊಡೆದು ಪಾದಚಾರಿ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಬೆಟ್ಕಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಅಪಘಾತದಲ್ಲಿ ಬೆಟ್ಕುಳಿ ನಿವಾಸಿ ವಿಠ್ಠಲ ಪಟಗಾರ ಎಂಬಾತನೆ ಮೃತ ದುರ್ದೈವಿ. ಈತ ಪೊಸ್ಟ್ ಬೆಟ್ಕುಳಿ ಕಡೆಯಿಂದ ಮೇಲಿನ ಬೆಟ್ಕುಳಿ ಕಡೆ ಹೆದ್ದಾರಿ ಬಂದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಎನ್ನಲಾಗಿದೆ. ಈ ವೇಳೆ ಕುಮಟಾ ಕಡೆಯಿಂದ ಅಂಕೋಲಾ ಕಡೆಗೆ ಚಲಿಸುತ್ತದ್ದ ಕಾರ ಡಿಕ್ಕಿ ಹೊಡೆದಿದ್ದು, ಪರಿಣಾಮ ಪಾದಚಾರಿ ವಿಠ್ಠಲ ಪಟಗಾರ ಎಂಬಾತನಿಗೆ ಗಂಭೀರ ಗಾಯವಾಗಿ ಆತ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ.
ಇನ್ನೂ ಅಪಘಾತಕ್ಕೆ ಕಾರಣವಾಗಿದ್ದ ಕಾರ ಚಾಲಕ ಅಪಘಾತ ಸ್ಥಳದಲ್ಲಿ ತನ್ನ ಕಾರ ನಿಲ್ಲಿಸದೆ ಅಪಘಾತಕ್ಕೆ ಒಳಗಾಗಿರುವ ಆತನನ್ನ ಗಮನಿಸದೆ ಸ್ಥಳದಿಂದ ಕಾರ ಚಲಿಸಿಕೊಂಡು ಹೋಗಿದ್ದು, ಬಳಿಕ ಹಿರೇಗುತ್ತಿ ಪೊಲೀಸ್ ಚೆಕ್ ಪೊಷ್ಟ್ ಬಳಿ ಕಾರ್ ಹಾಗೂ ಆತನಿಗೆ ವಶಕ್ಕೆ ಪಡೆಯಲಾಗಿದೆ. ಕಾರ ಚಾಲಕ ನಿರ್ಲಕ್ಷ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಸ್ಥಳಕ್ಕೆ ಗೋಕರ್ಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ದೇಹವನ್ನ ಮರಣೋತ್ತರ ಪರೀಕ್ಷಾಗಾಗಿ ಕುಮಟಾ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಅಪಘಾತ ನಡೆದಿರುವ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.