ಕುಮಟಾ : ರಾಜ್ಯದಲ್ಲಿಯೇ ಈ ಬಾರಿಯ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣ ರಂಗೇರಿದ್ದು, ಪಕ್ಷಕ್ಕಾಗಿ ತನು-ಮನ-ಧನ ದಿಂದ ಹಗಲಿರುಳು ಶ್ರಮಿಸುತ್ತಿರುವವರ ಬದಲಿಗೆ ಹೊಸಬರಿಗೆ ಹೈಕಮಾಂಡ ಟಿಕೇಟ್ ನೀಡಲಿದೆ ಎಂಬ ಸುದ್ದಿ ಹಬ್ಬಿರುವ ಗುಲ್ಲಿನಿಂದಾಗಿ ಎಲ್ಲಾ ಆಕಾಂಕ್ಷಿಗಳು ಹೈಕಮಾಂಡ ವಿರುದ್ದ ಬುಸುಗುಡುವಂತಾಗಿದ್ದು ಕುಮಟಾ ಕಾಂಗ್ರೆಸ್ ಸದ್ಯ ಕಾದ ಕಬ್ಬಿಣದಂತಾಗಿದೆ.
ಈ ಭಾರಿಯ ಕುಮಟಾ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೇಟಗಾಗಿ 10ಕ್ಕೂ ಅಧಿಕ ಆಕಾಂಕ್ಷಿಗಳು ಟಿಕೇಟ್ ಬಯಸಿ ಅರ್ಜಿ ಸಲ್ಲಿಸಿ ಕ್ಷೇತ್ರದಲ್ಲಿ ಓಡಾಟ ಮಾಡಿ ತಮ್ಮದೆ ರೀತಿಯಲ್ಲಿ ಪಕ್ಷ ಸಂಘಟನೆ ಮಾಡತ್ತಿದ್ದಾರೆ. ಆದರೆ ಇತ್ತೀಚಿನ ದಿನದಲ್ಲಿ ಮಾಜಿ ರಾಜ್ಯಪಾಲೆ ಹಾಗೂ ಉತ್ತರಕನ್ನಡ ಜಿಲ್ಲೆಯ ಮಾಜಿ ಸಂಸದೆ ಆಗಿದ್ದ ಮಾರ್ಗರೇಟ್ ಆಳ್ವ ತನ್ನ ಪುತ್ರ ನಿವೇದಿತ್ ಆಳ್ವಾಗೆ ಟಿಕೇಟ್ ನೀಡುವಂತೆ ಹೈಕಮಾಂಡ ಮೇಲೆ ಭಾರಿ ಒತ್ತಡ ಹೆರಿರೋದು ಮಾತ್ರ ಸತ್ಯ.
ಇದುವರೆಗೆ ಕುಮಟಾ ಕಾಂಗ್ರೆಸ್ ನಲ್ಲಿ ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ ಆಪ್ತರಾಗಿದ್ದ ಮಂಜುನಾಥ ಎಲ್ ನಾಯ್ಕ , ಹಾಗೂ ಶಿವಾನಂದ ಹೆಗಡೆ ಕಡತೋಕ ಅವರ ಹೆಸರುಗಳು ದೆಹಲಿ ಅಂಗಳಕ್ಕೆ ತಲುಪಿದೆ ಎನ್ನಲಾಗಿದೆ. ಆದರೆ ಈ ನಡುವೆ ಮಾರ್ಗರೇಟ್ ಆಳ್ವ ಪುತ್ರ ನಿವೇದಿತ್ ಆಳ್ಬ ಹೆಸರು ಪ್ರಬಲವಾಗಿ ಕೇಳಿ ಬರುತ್ತಿರುವುದು ಉಳಿದೆಲ್ಲಾ ಟಿಕೇಟ್ ಆಕಾಂಕ್ಷಿಗಳು ಹೈಕಮಾಂಡ ವಿರುದ್ಧ ಮುನಿಸಿಕೊಳ್ಳುವಂತಾಗಿದೆ.
ಪಕ್ಷ ಸಂಘಟನೆ ಕುಂಠಿತ..!
ಕುಮಟಾ ಕ್ಷೇತ್ರದಲ್ಲಿ ಈ ಬಾರಿ ಕ್ಷೇತ್ರಕ್ಕೆ ಸಂಬಂಧಿಸಿದವರೊಬ್ಬರಿಗೆ ಟಿಕೇಟ್ ನೀಡಲಾಗುತ್ತದೆ ಅನ್ನೋ ಸುದ್ದಿ ಹರಿದಾಡೋದಕ್ಕೆ ಆರಂಭವಾಯತ್ತೋ ಅವತ್ತಿನಿಂದ ಇದುವರೆಗೆ ಕ್ಷೇತ್ರದಲ್ಲಿ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಸಂಚರಿ ಕ್ರೀಡೆ,ಧಾರ್ಮಿಕ, ಸಾಂಸ್ಕೃತಿಕ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಸಹಾಯ ಸಹಕಾರ ಮಾಡುತ್ತಿದ್ದ ಕಾಂಗ್ರೆಸ್ ಮುಖಂಡರುಗಳು ಸದ್ಯ ತುಂಬಾನೆ ಸೈಲೆಂಟ್ ಆಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಒಂದು ಗಾಧೆ ಮಾತಿದೆ. ‘ರೈತ ಕಷ್ಟಪಟ್ಟು ಮಂಗನಿಗೆ ಲಾಭ’ ಅನ್ನೋ ಮಾತಿದೆ. ಹಾಗೇ ನಾವು ಕ್ಷೇತ್ರದಲ್ಲಿ ಎಲ್ಲಾ ಮಾಡಿ ಏನು ಮಾಡದೆ ಕೊನೆಗಳಿಗೆಯಲ್ಲಿ ಬಂದವರಿಗೆ ಅವಕಾಶ ಮಾಡಕೊಟ್ಟರೆ ಅದೆ ಗ್ರಾಮೀಣ ಜನರ ಗಾಧೆ ಮಾತಿನಂತೆ ಆಗಬಹುದು ಅಂತಾ..
ಹೈಕಮಾಂಡ ಮೌನವಾಗಿರೋದು ಯಾಕೆ..?
ಕುಮಟಾ ಕ್ಷೇತ್ರದಲ್ಲಿ ಹೊರಗಿನವರಿಗೆ ಟಿಕೇಟ್ ನೀಡಲಾಗುತ್ತದೆ ಎನ್ನುವ ಸುದ್ದಿ ಎಲ್ಲಾ ಮಾಧ್ಯಮಗಳಲ್ಲಿ ಪ್ರತಿನಿತ್ಯ ಪ್ರಕಟವಾಗತ್ತಾ ಇದ್ದರೂ ಸಹ ಜಿಲ್ಲೆಯ ಕಾಂಗ್ರೆಸ್ ನ ಜವಾಬ್ದಾರಿ ಹೊತ್ತುಕೊಂಡಿರುವ ನಾಯಕರಾಗಿರಲಿ ಅಥವಾ ರಾಜ್ಯ ಕಾಂಗ್ರೆಸ್ ನಾಯಕರಾಗಲಿ ಯಾಕೆ ಮೌನವಾಗಿದ್ದಾರೆ ಅನ್ನೊಂದು ಇದೀಗ ಕ್ಷೇತ್ರದ ಕಾಂಗ್ರೆಸ್ ಮುಖಂಡರಿಂದ ಹಿಡಿದು ಪ್ರತಿಯೊಬ್ಬರನ್ನ ಸಹ ಕಾಡುವಂತೆ ಮಾಡಿದೆ.ಯಾವುದೇ ಒಂದು ಬೆಳವಣಿಗೆಯಿಲ್ಲದೇನೆ ಯಾವ ಮಾದ್ಯಮಗಳು ಸಹ ಸುದ್ದಿಗಳ ಮಾಡೋದಕ್ಕೆ ಸಾಧ್ಯನಾ.? ಈ ವಿಚಾರ ರಾಜ್ಯ ನಾಯಕರ ಗಮನಕ್ಕೂ ಸಹ ತಲುಪಿದೆ. ಆದ್ರೆ ಯಾರೂ ಕೂಡ ಕುಮಟಾ ಕ್ಷೇತ್ರದ ಟಿಕೇಟ್ ಗೊಂದಲದ ಬಗ್ಗೆ ಉಸಿರು ಹೊರಹಾಕುತ್ತಿಲ್ಲ. ಇದರಲ್ಲಿ ಜಿಲ್ಲೆಯ ಕೆಲ ಪ್ರಮುಖ ನಾಯಕರು ಕೈ ಆಡಿಸುತ್ತಿದ್ದಾರೆ ಎನ್ನುವ ವಿಚಾರ ಸಹ ಜಿಲ್ಲಾದ್ಯಂತ ಅಷ್ಟೆ ಗಂಭೀರವಾಗಿ ಚರ್ಚೆಯಾಗುತ್ತಿದೆ. ಕ್ಷೇತ್ರದಲ್ಲಿರುವ ಆಕಾಂಕ್ಷಿಗಳನ್ನ ಬೇರೆಯವರಿಗೆ ಟಿಕೇಟ್ ನೀಡಲ್ಲ ಅಂತಾ ಹೇಳದೆ ಕೊನೆಕ್ಷಣದವರೆಗೂ ಹೀಗೆ ತಳ್ಳುತ್ತಾ ಸಾಗಿದ್ದರೆ.ಪಕ್ಷ ಸಂಘಟನೆ ಮತ್ತಷ್ಟು ಕುಂಠಿತ ಕಾಣೋದ್ರದಲ್ಲಿ ಎರಡು ಮಾತಿಲ್ಲ.ಇದಕ್ಕೆ ತಾಣ ಉದಾರಣೆ ಅಂದ್ರೆ ಪಕ್ಷದ ಕಾರ್ಯಕ್ರಮವಾಗಿದ್ದ ಮನೆ ಮನೆಗೆ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ಹಂಚಿಕೆ ಮಾಡುವುದನ್ನೆ ಈಗ ಕೆಲಕಡೆಗಳಲ್ಲಿ ಸಂಪೂರ್ಣ ನಿಂತು ಹೋಗಿದೆ.ಹೀಗಾದ್ರೆ ಪಕ್ಷದ ಕಾರ್ಯಕ್ರಮ ಜನರ ಮನೆ ಬಾಗಿಲಿಗೆ ಮುಟ್ಟೋದು ಯಾವಾಗ..? ಇನ್ನಾದ್ರೂ ಪಕ್ಷದ ನಾಯಕರು ಎಚ್ಚೆತ್ತುಕೊಳ್ಳತ್ತಾರಾ..ಮೌನ ಮುಂದುವರೆಸ್ತಾರ ಅನ್ನುವುದನ್ನ ಕಾದು ನೋಡಬೇಕಿದೆ.